ಈಗ ಪಾಕ್‌ನದ್ದು ನೈಜ ಸ್ನೇಹ: ಡೊನಾಲ್ಡ್ ಟ್ರಂಪ್
Team Udayavani, Oct 15, 2017, 7:10 AM IST
ವಾಷಿಂಗ್ಟನ್: ಪಾಕಿಸ್ಥಾನದ ಸ್ನೇಹದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಚ್ಚುಗೆಯ ಮಾತನಾಡಿದ್ದು, “”ಪಾಕಿ ಸ್ಥಾನವು ಅಮೆರಿಕದಿಂದ ಕಳೆದೊಂದು ವರ್ಷದಲ್ಲಿ ಊಹಿಸಲಾಗದಷ್ಟು ಪ್ರಯೋ ಜನ ಪಡೆದುಕೊಂಡಿದೆ. ಆದರೆ ಈಗ ನೈಜ ಬಾಂಧವ್ಯ ಪ್ರದರ್ಶಿಸಿದೆ. ಮುಂದಿನ ದಿನಗಳಲ್ಲಿ ಬಾಂಧವ್ಯ ವೃದ್ಧಿಗೆ ಪಾಕ್ ನಾಯಕರ ಜತೆ ಮಾತುಕತೆ ನಡೆಸಲಾಗುವುದು” ಎಂದಿದ್ದಾರೆ.
ಹಖಾನಿ ಭಯೋತ್ಪಾದಕರಿಂದ ಅಪ ಹರಿ ಸಲ್ಪಟ್ಟ ಅಮೆರಿಕ ಮೂಲದ ಕೆನಡಿ ಯನ್ ಕುಟುಂಬವನ್ನು ಐದು ವರ್ಷಗಳ ಬಳಿಕ ಬಿಡುಗಡೆ ಮಾಡಿದ ಬೆನ್ನಲ್ಲೇ ಟ್ರಂಪ್ ಈ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, “”ಪಾಕಿಸ್ತಾನ ಕಳೆದ ಎಷ್ಟೋ ವರ್ಷಗಳಿಂದಲೂ ಅಮೆರಿಕದಿಂದ ಸಾಕಷ್ಟು ಲಾಭ ಪಡೆದುಕೊಂಡಿದೆ. ಆದರೆ, ಆರಂಭದಲ್ಲಿ ಪಾಕಿಸ್ಥಾನದೊಂದಿಗಿನ ಬಾಂಧವ್ಯ ಈಗ ನೈಜತೆ ಪಡೆದು ಕೊಂಡಿದೆ. ಅಮೆರಿಕ, ಉಳಿದ ರಾಷ್ಟ್ರಗಳಂ ತೆಯೇ ಪಾಕಿಸ್ತಾನವನ್ನೂ ಗೌರವದಿಂದ ನಡೆಸಿಕೊಂಡು ಬಂದಿದೆ” ಎಂದಿದ್ದಾರೆ ಟ್ರಂಪ್. ಅಮೆರಿಕದ ಮಹಿಳೆ ಕೈಟ್ಲಾನ್ ಕೊಲೆ ಮನ್ ಹಾಗೂ ಆಕೆಯ ಪತಿ ಕೆನಡಾದ ಜೊಸುವಾ ಬೊಯ್ಲೆ, 3 ಮಕ್ಕಳನ್ನು ಉಗ್ರರ ಕಪಿಮುಷ್ಠಿಯಿಂದ ಬಿಡುಗಡೆ ಮಾಡುವಲ್ಲಿ ಪಾಕ್ ಸಹಕಾರವನ್ನು ಟ್ರಂಪ್ ಇದೇ ವೇಳೆ ಸ್ಮರಿಸಿದ್ದಾರೆ.
ಪಾಕ್ ಬಗ್ಗೆ ಟ್ರಂಪ್ ಶ್ಲಾ ಸಿರುವ ಬಗ್ಗೆ ಈಗ ಸಾಕಷ್ಟು ಚರ್ಚೆ ಆರಂಭಗೊಂಡಿದೆ. ಇದರಿಂದ ಪ್ರಧಾನಿ ಮೋದಿ ಅವರ ನಡೆಗೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಬ ಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.