ಶ್ರೀಲಂಕಾದಲ್ಲಿ ಭಾರತ-ಚೀನ ಶಕ್ತಿ ಪ್ರದರ್ಶನ


Team Udayavani, Oct 15, 2017, 6:30 AM IST

shakti-pradarshana.jpg

ಹೊಸದಿಲ್ಲಿ: ಡೋಕ್ಲಾಮ್‌ನಲ್ಲಿ ಚೀನವನ್ನು ಹಿಂದಟ್ಟಿದ ಭಾರತ ಈಗ ನೆರೆ ರಾಷ್ಟ್ರಗಳಲ್ಲಿ ಚೀನಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದೆ. ದಕ್ಷಿಣ ಏಷ್ಯಾದ ಶ್ರೀಲಂಕಾ, ಪಾಕಿಸ್ಥಾನ ಮತ್ತಿತರ ದೇಶಗಳ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದ ಚೀನದ ಬಲೆಯಿಂದ ಶ್ರೀಲಂಕಾದ ಒಂದು ವಿಮಾನ ನಿಲ್ದಾಣವನ್ನು ತನ್ನತ್ತ ಸೆಳೆದು ಕೊಳ್ಳುವಲ್ಲಿ ಭಾರತ ಮಹತ್ವದ ಹೆಜ್ಜೆ ಇಟ್ಟಿದೆ.

ನಾಲ್ಕು ವರ್ಷಗಳ ಹಿಂದಷ್ಟೇ ಶ್ರೀಲಂಕಾದಲ್ಲಿ ಮಟ್ಟಲ ರಾಜಪಕ್ಷೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಾಜಧಾನಿ ಕೊಲಂಬೋದಿಂದ 250 ಕಿ.ಮೀ. ದೂರದಲ್ಲಿರುವ ಹಂಬಂತೋಟದಲ್ಲಿ ಚೀನ ನಿರ್ಮಾಣ ಮಾಡಿತ್ತು. ಈ ವಿಮಾನ ನಿಲ್ದಾಣದ ಶೇ. 90ರಷ್ಟು ವೆಚ್ಚವನ್ನು ಚೀನ ಭರಿಸಿದ್ದರೆ, ಶೇ. 10 ವೆಚ್ಚವನ್ನು ಶ್ರೀಲಂಕಾ ಭರಿಸಿತ್ತು. ಚೀನ ಒಟ್ಟು 19 ಕೋಟಿ ಡಾಲರ್‌ (1,200 ಕೋಟಿ ರೂ.) ವೆಚ್ಚ ಮಾಡಿತ್ತು. ಈಗ ವಿಮಾನ ನಿಲ್ದಾಣ ನಷ್ಟದಲ್ಲಿ ನಡೆ ಯುತ್ತಿದೆ. ಚೀನದ ಎಕ್ಸಿಮ್‌ ಬ್ಯಾಂಕ್‌ನಿಂದ ಪಡೆದ ಭಾರೀ ಮೊತ್ತದ ಸಾಲ ಮರುಪಾವತಿ ಮಾಡಲು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ವಿಮಾನ ನಿಲ್ದಾಣವನ್ನು ಭಾರತಕ್ಕೆ ಹಸ್ತಾಂತರಿಸಲು ನಿರ್ಧರಿಸಿದ್ದು, ಭಾರತವು ಚೀನ ಸಾಲವನ್ನು ಮರುಪಾವತಿ ಮಾಡಲಿದೆ. ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಹೇಳಲಾಗಿದೆ.

ಚೀನ ಬಂದರು ಬಳಿ ಏರ್‌ಪೋರ್ಟ್‌: ಹಂಬಂತೋಟ ವಿಮಾನ ನಿಲ್ದಾಣ ಅತ್ಯಂತ ಆಯ ಕಟ್ಟಿನ ಸ್ಥಳದಲ್ಲಿದೆ. ಈ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲೇ ಚೀನ ಅಭಿವೃದ್ಧಿಪಡಿಸುತ್ತಿರುವ ಶ್ರೀಲಂಕಾದ ಬಂದರು ಇದೆ. ಹಿಂದೂ ಮಹಾ
ಸಾಗರದ ಈ ಬಂದರನ್ನು ಚೀನ ಅಭಿವೃದ್ಧಿಪಡಿಸುತ್ತಿರು ವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೆ ಇದು ಭಾರತದ ಭದ್ರತೆಗೂ ಆತಂಕದ್ದಾಗಿದೆ. ಇನ್ನೊಂದೆಡೆ ಚೀನದ ಮಹತ್ವಾಕಾಂಕ್ಷಿ ವನ್‌ ಬೆಲ್ಟ್ ವನ್‌ ರೋಡ್‌ ಯೋಜನೆ ಅಡಿಯಲ್ಲಿ  ಹಂಬಂತೋಟ ವಿಮಾನ ನಿಲ್ದಾಣವನ್ನೂ ಸಂಪರ್ಕಿಸುವ ಬಗ್ಗೆ ಶ್ರೀಲಂಕಾ ಜತೆ ಚೀನ ಮಾತುಕತೆ ನಡೆಸುತ್ತಿತ್ತು.

ಸಾಲದ ಸುಳಿಯಲ್ಲಿ ಶ್ರೀಲಂಕಾ: ಈ ವಿಮಾನ ನಿಲ್ದಾಣದ ಮೂಲಕ ಶ್ರೀಲಂಕಾವನ್ನು ಚೀನ ಸಾಲದ ಸುಳಿಗೆ ಸಿಲುಕಿಸಲು ಪ್ರಯತ್ನಿಸಿದೆ ಎಂಬ ಆರೋಪವೂ ಇದೆ. ಯೋಜನೆಗಾಗಿ ಚೀನದಿಂದ ಒಟ್ಟು 1,900 ಕೋಟಿ ರೂ. ಸಾಲ ಪಡೆಯಲಾಗಿದೆ. ಸಾಲದ ಬಡ್ಡಿ ದರ ಶೇ. 6.3. ಆದರೆ ವಿಶ್ವಬ್ಯಾಂಕ್‌ ಮತ್ತು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ನೀಡುವ ಸಾಲಕ್ಕೆ ಕೇವಲ ಶೇ. 0.25ರಿಂದ ಶೇ. 3 ಬಡ್ಡಿ ವಿಧಿಸುತ್ತವೆ. ಇನ್ನು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡುವ ಸಾಲಕ್ಕೆ ಶೇ. 1ರಷ್ಟು ಬಡ್ಡಿ ವಿಧಿಸುತ್ತದೆ. ಅಷ್ಟೇ ಅಲ್ಲ ಶ್ರೀಲಂಕಾ ಒಟ್ಟು 4.20 ಲಕ್ಷ ಕೋಟಿ ರೂ. ಅಂತಾರಾಷ್ಟ್ರೀಯ ಸಾಲ ಹೊಂದಿದೆ. ಈ ಪೈಕಿ ಚೀನದಿಂದ 50 ಸಾವಿರ ಕೋಟಿ ರೂ. ಸಾಲ ಪಡೆದಿದೆ.

ಚೀನ ತಂತ್ರಕ್ಕೆ ಭಾರತದ ಪ್ರತಿತಂತ್ರ
ವಿಮಾನ ನಿಲ್ದಾಣವನ್ನು ಭಾರತ ತನ್ನ ವಶಕ್ಕೆ ಪಡೆಯುವುದರಿಂದ ಚೀನಕ್ಕೆ  ಕಠಿನ ಸಂದೇಶ ರವಾನೆಯಾಗುತ್ತದೆ. ದಕ್ಷಿಣ ಏಷ್ಯಾದ ಎಲ್ಲ ದೇಶ ಗಳನ್ನೂ ತನ್ನ ಬುಟ್ಟಿಗೆ ಹಾಕಿಕೊಳ್ಳುವ ಚೀನದ ನೀತಿಗೆ ಇದು ಭಾರೀ ಹೊಡೆತ. ಡೋಕ್ಲಾಮ್‌ನಲ್ಲಿ ಚೀನವನ್ನು ಹಿಮ್ಮೆಟ್ಟಿಸಿದ ಅನಂತರ ನೆರೆ ರಾಷ್ಟ್ರಗಳು ಚೀನ ಮತ್ತು ಭಾರತದೊಂದಿಗೆ ಸಮ
ತೋಲನ ಕಾಯ್ದುಕೊಳ್ಳಲು ನಿರ್ಧರಿಸಿವೆ. ಭಾರತದ ಸುತ್ತಲೂ ಮೂಲಸೌಕರ್ಯ ಅಭಿವೃದ್ಧಿಯ ನೆಪ ಹೇಳಿ ವ್ಯೂಹಾತ್ಮಕ ಆಸ್ತಿ ನಿರ್ಮಿಸುವ ಚೀನದ ತಂತ್ರಕ್ಕೆ ಭಾರತವು ಸರಿ ಯಾಗಿಯೇ ಪ್ರತಿತಂತ್ರ ರೂಪಿಸಿದಂತಾಗಿದೆ.

ಟಾಪ್ ನ್ಯೂಸ್

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

1-sindd

Syed Modi International: ಫೇವರಿಟ್‌ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ

1-proo

Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

1-kar

Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

1-sindd

Syed Modi International: ಫೇವರಿಟ್‌ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.