ಹುಚ್ಚು “ಜಿಹಾದಿ’ತನಕ್ಕೆ ಸಿಲುಕಿದ ಹತಭಾಗ್ಯರು!
Team Udayavani, Oct 16, 2017, 7:15 AM IST
ಬಾಗ್ಧಾದ್: ಆ ಮೃತ ದುರ್ದೈವಿಗಳನ್ನು ನೋಡಿದರೆ, ಇವರ ಗತಿ ಹಾಗಾಗಬಾರದಿತ್ತು ಎಂದು ಮನಸ್ಸು ಒಮ್ಮೆಯಾ ದರೂ ಮರುಗುವುದು ಖಚಿತ.
ಇಡೀ ವಿಶ್ವದಲ್ಲಿ ಇಸ್ಲಾಂ ಧರ್ಮವನ್ನು ಪ್ರತಿಷ್ಠಾಪಿಸುವ ಭರದಲ್ಲಿ ಜಿಹಾದಿ ಅಮಲೇರಿಸಿಕೊಂಡು ಬಂದವರು ಇವರು. ಆದರೆ, ಕೊನೆ ಗೇನಾಯಿತು? ಇಲ್ಲಿ ಬಂದು ಹೆಣವಾದರು. ಅಷ್ಟೇ ಅಲ್ಲ, ಭಾರತದಂತಹ ದೇಶಗಳಿಂದ ಜಿಹಾದಿಗಳಾಗಲು ಬರುವವರಿಗೆ “ಪಾಠ’ವಾದರು.
2014ರಿಂದ ಈವರೆಗೆ ಕುಖ್ಯಾತ ಭಯೋತ್ಪಾದಕ ಸಂಘಟನೆಯಾದ ಐಸಿಸ್ ಉಗ್ರರ ವಿರುದ್ಧ ಅಮೆರಿಕ ನೇತೃತ್ವದಲ್ಲಿ ನಡೆಯುತ್ತಿರುವ ವೈಮಾನಿಕ ದಾಳಿಯಲ್ಲಿ ಹತರಾದವರ ಹತಭಾಗ್ಯರ ಮನಕಲಕುವ ಕತೆಯಿದು.
ಈ ದಾಳಿಗಳಲ್ಲಿ ಈವರೆಗೆ ಬರೋಬ್ಬರಿ 80 ಸಾವಿರ ಜಿಹಾದಿಗಳು ಸಾವನ್ನಪ್ಪಿದ್ದಾರೆ. ಇವರು ಯಾವ ದೇಶದವರೆಂದು ಗೊತ್ತಿಲ್ಲ. ಈ ಮೃತದೇಹಗಳ ಹೆಸರೇನು, ಐಡೆಂಟಿಟಿಯೇನು ಎಂಬುದೂ ಗೊತ್ತಿಲ್ಲ. ಅವನ್ನು ಪತ್ತೆ ಮಾಡುವಷ್ಟು ಸಮಯವೂ ಇಲ್ಲ. ಹಾಗಾಗಿ, ಪ್ರತಿ ಬಾರಿ ಯುದ್ಧ ನಡೆದಾಗಲೂ ಉಗ್ರರ ಶವಗಳು ಕೊಳೆಯುವ ಮುನ್ನವೇ ಅವುಗಳನ್ನು ಬುಲ್ಡೋಜರ್ ಸಹಾಯದಿಂದ ದೊಡ್ಡ ಗುಂಡಿಗಳನ್ನು ತೆಗೆದು ಹೂಳಲಾಗುತ್ತಿದೆ. ಹಾಗಾಗಿ, ಸಿರಿಯಾ, ಇರಾಕ್ನ ಹಲ ವಾರು ಪ್ರಾಂತ್ಯಗಳಲ್ಲಿ ಎಲ್ಲೆಂದರಲ್ಲಿ ಇಂಥ ಸಾಮೂಹಿಕ ಗೋರಿಗಳೇ ಕಾಣುತ್ತವೆ ಎನ್ನುತ್ತವೆ ವರದಿಗಳು.
ಈ ಬಗ್ಗೆ ಪ್ರತಿಕ್ರಿಯಿಸುವ ಪೊಲೀಸರು, “”ಶವಗಳು ಬೇಗ ಕೊಳೆತು ರೋಗ ರುಜಿನಗಳಿಗೆ ಕಾರಣವಾಗುವು ದರಿಂದ ಹೀಗೆ ಸಾಮೂಹಿಕ ಸಮಾಧಿ ಅನಿವಾರ್ಯ” ಎನ್ನುತ್ತಾರೆ. ಒಟ್ಟಿನಲ್ಲಿ, ಜಿಹಾದಿಗಳು ಯುದ್ಧದಲ್ಲಿ ಸತ್ತರೆ ಸ್ವರ್ಗ ಸಿಕ್ಕುತ್ತದೆ ಎಂಬ ಮಾತಿದೆ. ಆದರೆ, ಇಲ್ಲಿ ಸತ್ತವರು ಸ್ವರ್ಗಕ್ಕೆ ಹೋದರೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರ ಅಂತ್ಯ ಘನಘೋರವಾಗಿರುವುದಂತೂ ಅಪ್ಪಟ ಸತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.