ಭಾರತದ ಆರ್ಥಿಕತೆ ಸುಸ್ಥಿರ: ಐಎಂಎಫ್
Team Udayavani, Oct 16, 2017, 6:50 AM IST
ವಾಷಿಂಗ್ಟನ್: ಕಳೆದ ವಾರವಷ್ಟೇ ಭಾರತದ ಆರ್ಥಿಕ ಅಭಿವೃದ್ಧಿ ನಿರೀಕ್ಷೆಯನ್ನು ಇಳಿಸಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈಗ ಭಾರತದ ಆರ್ಥಿಕ ಪ್ರಗತಿ ಉತ್ತಮವಾಗಿದೆ ಎಂದಿದೆ.
ನೋಟು ಅಮಾನ್ಯ ಹಾಗೂ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕ್ರಮಗಳನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ 2018ರ ಆರ್ಥಿಕ ಅಭಿವೃದ್ಧಿ ನಿರೀಕ್ಷೆಯನ್ನು ಶೇ.6.7 ಕ್ಕೆ ಐಎಂಎಫ್ ಇಳಿಸಿತ್ತು. ಆದರೆ ವಾಷಿಂಗ್ಟನ್‌ನಲ್ಲಿ ನಡೆದ ಐಎಂಎಫ್ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಿನ್ ಲಗಾರ್ಡೆ ಅವರು ಭಾರತದ ಆರ್ಥಿಕ ಅಭಿವೃದ್ಧಿಯ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ.
“ಭಾರತದ ವಿಚಾರಕ್ಕೆ ಬಂದರೆ ಆರ್ಥಿಕ ಪ್ರಗತಿ ನಿರೀಕ್ಷೆಯನ್ನು ನಾವು ಇಳಿಸಿದ್ದೇವೆ. ಆದರೆ ಭಾರತವು ಕೈಗೊಂಡ ಕ್ರಮಗಳಿಂದಾಗಿ ಮಧ್ಯಮ ಮತ್ತು ದೀರ್ಘಾವಧಿಯ ಆರ್ಥಿಕ ಪ್ರಗತಿ ಸಶಕ್ತವಾಗಿದೆ’ ಎಂದು ಲಗಾರ್ಡೆ ಹೇಳಿದ್ದಾರೆ. ಅದರಲ್ಲೂ ಮಧ್ಯಾವಧಿಯಲ್ಲಿ ಭಾರತದ ಅಭಿವೃದ್ಧಿಯ ಗತಿ ಅತ್ಯಂತ ಸುಸ್ಥಿರವಾಗಿದೆ. ವಿತ್ತೀಯ ಕೊರತೆ ಕಡಿಮೆಯಾಗಿದ್ದು, ಹಣದುಬ್ಬರ ಇಳಿಕೆಯಾ ಗಿದೆ. ಜತೆಗೆ ಸುಧಾರಣಾ ಕ್ರಮಗಳನ್ನೂ ಕೈಗೊಂಡಿರುವುದರಿಂದ ಭಾರತದ ಯುವಕ ರಿಗೆ ಉದ್ಯೋಗ ಲಭ್ಯವಾಗುವ ಸಾಧ್ಯತೆ ಭವಿಷ್ಯದಲ್ಲಿ ಹೆಚ್ಚಾಗಿದೆ ಎಂದಿದ್ದಾರೆ.
ಈ ಮಧ್ಯೆ ಆರ್ಥಿಕತೆ ತಳಮಟ್ಟಕ್ಕೆ ಕುಸಿದಿದ್ದು, 2018-19ರಲ್ಲಿ ಸುಸ್ಥಿರ ಅಭಿ ವೃದ್ಧಿ ನಿರೀಕ್ಷಿಸಲಾಗಿದೆ ಎಂದು ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ. ಪ್ರಸ್ತುತ ತ್ತೈಮಾಸಿಕ ದಲ್ಲಿ ಜಿಡಿಪಿ ಶೇ. 6.9 ರಿಂದ 7ರಲ್ಲಿ ಅಭಿವೃದ್ಧಿ ಕಾಣಲಿದ್ದು, 2018 -19ರಲ್ಲಿ ಶೇ. 7.5 ಕ್ಕೆ ಏರಲಿದೆ. ಈ ಆರ್ಥಿಕ ಕುಸಿತ ಆರಂಭವಾ ಗಿದ್ದು, 2013- 14ನೇ ಸಾಲಿನಲ್ಲಾಗಿದ್ದರೂ, 2016ರಲ್ಲಿ ಪ್ರಗತಿ ಏರುಗತಿ ಸಾಧಿಸಿತ್ತು ಎಂದಿದ್ದಾರೆ.
ಜಿಎಸ್‌ಟಿಯನ್ನು ಮೆಚ್ಚಿದ ಐಎಂಎಫ್: ಜಿಎಸ್‌ಟಿಯನ್ನು ಮಹತ್ವದ ಸುಧಾರಣಾ ಕ್ರಮ ಎಂದು ಲಗಾರ್ಡೆ ಉಲ್ಲೇಖೀಸಿದ್ದಾರೆ. ಅಲ್ಲದೆ ಅಲ್ಪಾವಧಿಯಲ್ಲಿ ಆರ್ಥಿಕತೆ ಕುಸಿತ ಕಂಡಿರುವುದು ಅಚ್ಚರಿಯ ಸಂಗತಿಯಾಗಿದೆ ಎಂದಿದ್ದಾರೆ.
ಆರ್ಥಿಕ ಉತ್ತೇಜನ ಪ್ಯಾಕೇಜ್ ಪ್ರಸ್ತಾಪವಿಲ್ಲ: ಜೇಟ್ಲಿ
“ಆರ್ಥಿಕ ಉತ್ತೇಜನ ಪ್ಯಾಕೇಜ್ ಪ್ರಸ್ತಾವನೆಯೇ ಇಲ್ಲ. ಸನ್ನಿವೇಶಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತೇವೆ ಎಂದು ನಾನು ಹೇಳಿದ್ದೆ. ಆದರೆ ಅದನ್ನು ಮಾಧ್ಯಮಗಳು ಆರ್ಥಿಕ ಉತ್ತೇಜನ ಪ್ಯಾಕೇಜ್ ಎಂದು ತಪ್ಪಾಗಿ ಅರ್ಥೈಸಿಕೊಂಡಿವೆ’ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಇದೇ ವೇಳೆ ಐಎಂಎಫ್ ಮತ್ತು ವಿಶ್ವ ಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಜೇಟ್ಲಿ, ಐಎಂಎಫ್ ಕೋಟಾ ಮರುಪರಿಶೀಲ ನೆಗೆ ಆಗ್ರಹಿಸಿದ್ದಾರೆ. ವಿಶ್ವದ ಆರ್ಥಿಕ ಸ್ಥಿತಿ ಮತ್ತು ಭಾರತದ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಈ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಅಲ್ಲದೆ ಎಚ್1ಬಿ ವೀಸಾ ಬಗ್ಗೆ ಅಮೆರಿಕ ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ವೀಸಾ ಪಡೆದು ಅಮೆರಿಕಕ್ಕೆ ಆಗಮಿಸುವ ಭಾರತೀಯರು ಅಕ್ರಮ ವಲಸಿಗರಲ್ಲ ಎಂದು ಜೇಟಿÉ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.