ವೇಗದ ರೈಲಿಗೆ ಚೀನಾ ಬ್ರೇಕ್
Team Udayavani, Oct 16, 2017, 6:00 AM IST
ನವದೆಹಲಿ: ಡೋಕ್ಲಾಂನಲ್ಲಿ ಉಂಟಾದ ಆಘಾತದ ನಂತರ ಭಾರತದಲ್ಲಿನ ಮೂಲಸೌಕರ್ಯ ಯೋಜನೆಗಳ ಬಗ್ಗೆ ಚೀನಾ ಆಸಕ್ತಿ ಕಳೆದುಕೊಂಡಿದೆಯೇ? ನೆರೆರಾಷ್ಟ್ರದ ಅಧಿಕಾರಿಗಳ ವರ್ತನೆಯನ್ನು ನೋಡಿದರೆ ಈ ಪ್ರಶ್ನೆ ಮೂಡದೇ ಇರದು.
ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆಯ ಸಾಧ್ಯಾಸಾಧ್ಯತೆ ಅಧ್ಯಯನ ನಡೆಸಿರುವ ಚೀನಾ ಅಧಿಕಾರಿಗಳು ಈಗ ಭಾರತಕ್ಕೆ ಪ್ರತಿಕ್ರಿಯೆಯನ್ನೇ ನೀಡುತ್ತಿಲ್ಲ. 492 ಕಿ.ಮೀ ಉದ್ದದ ಈ ಮಾರ್ಗವನ್ನು ಉನ್ನತ ದರ್ಜೆಗೇರಿಸಿ ಹೈಸ್ಪೀಡ್ ರೈಲು ಓಡಿಸುವ ಸಂಬಂಧ ಚೀನಾ 2016ರ ನವೆಂಬರ್‌ನಲ್ಲೇ ಅಂತಿಮ ವರದಿ ಸಲ್ಲಿಸಿತ್ತು. ನಂತರ ಅಧಿಕಾರಿಗಳೊಂದಿಗೆ ಮುಖಾಮುಖೀ ಚರ್ಚೆಗೆ ಆಗ್ರಹಿಸಿತ್ತು. ಆದರೆ ಇದಕ್ಕೆ ದಿನಾಂಕ ನಿಗದಿಯಾಗಿರಲಿಲ್ಲ.
ಕಳೆದ ಆರು ತಿಂಗಳಲ್ಲಿ ಭಾರತದ ಮೊಬಿಲಿಟಿ ಡೈರೆಕ್ಟೋರೇಟ್ ಹಲವು ಬಾರಿ ಚೀನಾ ರೈಲ್ವೆ ಎರುÂವಾನ್ ಎಂಜಿನಿಯರಿಂಗ್ ಗ್ರೂಪ್ (ಸಿಆರ್‌ಇಇಸಿ) ಸಂಸ್ಥೆಯ ಜತೆ ಇಮೇಲ್ ಮೂಲಕ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಲೇ ಇದೆ. ಆದರೆ ಚೀನಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಬಗ್ಗೆ ರಾಯಭಾರಿ ಕಚೇರಿಯ ಮೂಲಕವೂ ಸಂಪರ್ಕಿಸಲು ಪ್ರಯತ್ನಿಸಲಾಗಿತ್ತು ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ಒಟ್ಟು ಒಂಭತ್ತು ಹೈಸ್ಪೀಡ್ ರೈಲು ಯೋಜನೆಯನ್ನು ಘೋಷಿಸಲಾಗಿದ್ದು, ಉಳಿದ ಎಂಟು ಯೋಜನೆಗಳು ಪ್ರಗತಿಯಲ್ಲಿವೆ. ಆದರೆ ಈ ಯೋಜನೆ ನನೆಗುದಿಗೆ ಬಿದ್ದಿದೆ. ಇದಕ್ಕೆ ಡೋಕ್ಲಾಂ ಗಡಿ ವಿವಾದವೇ ಕಾರಣ ಎಂದು ಮೊಬಿಲಿಟಿ ಡೈರೆಕ್ಟೋರೇಟ್ ಅಧಿಕಾರಿಗಳು ಹೇಳಿದ್ದಾರೆ.
2014ರಲ್ಲಿ ಸಾಧ್ಯತಾ ಪರಿಶೀಲನೆ ನಡೆಸುವಾಗ ಚೀನಾ ಅಧಿಕಾರಿಗಳು ಭಾರೀ ಆಸಕ್ತಿ ತೋರಿದ್ದರು. ಒಟ್ಟು ಯೋಜನೆಯ ವೆಚ್ಚವನ್ನು ಚೀನಾ ತಾನೇ ಭರಿಸುವುದಾಗಿ ಹೇಳಿತ್ತು. ಪ್ರಸ್ತುತ ಪ್ರತಿ ಗಂಟೆಗೆ 80 ಕಿ.ಮೀ ವೇಗದ ಈ ಮಾರ್ಗವನ್ನು 160 ಕಿ.ಮೀಗೆ ಏರಿಸುವ ಯೋಜನೆ ಇದಾಗಿತ್ತು. ಈಗಾಗಲೇ ದೆಹಲಿ-ಆಗ್ರಾ ಗತಿಮಾನ್ ಎಕ್ಸ್‌ಪ್ರೆಸ್ ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ.
ಇತರ ಯೋಜನೆಗಳ ಕಥೆಯೇನು?:
ಮುಂಬೈ- ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಗೂ ಚೀನಾ ಆಸಕ್ತಿ ತೋರಿತ್ತಾದರೂ, ಕೊನೆಗೆ ಈ ಯೋಜನೆ ಜಪಾನ್‌ಗೆ ಲಭ್ಯವಾಗಿದೆ. ಮುಂಬೈ-ದೆಹಲಿ ಬುಲೆಟ್ ಯೋಜನೆಗೆ ಈಗಾಗಲೇ ಚೀನಾ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಯೋಜನೆ ಇನ್ನೂ ಅಂತಿಮಗೊಂಡಿಲ್ಲ. ರೈಲ್ವೆ ಇಂಜಿನಿಯರ್‌ಗಳಿಗೆ ಚೀನಾ ತರಬೇತಿ ನೀಡುತ್ತಿದೆ ಮತ್ತು ಚೀನಾ ಸಹಕಾರದಲ್ಲಿ ಭಾರತ ಮೊದಲ ರೈಲ್ವೆ ವಿಶ್ವವಿದ್ಯಾಲಯವನ್ನೂ ಸ್ಥಾಪಿಸುತ್ತಿದೆ.
ಚೀನಾ ಗಡಿಯುದ್ಧಕ್ಕೂ ಸೇನಾ ಬಲ ಹಚ್ಚಳ
ಸಿಕ್ಕಿಂ ಗಡಿ ಭಾಗ ಡೋಕ್ಲಾಂ ಪ್ರಸ್ಥಭೂಮಿ ಪ್ರದೇಶದಲ್ಲಿ ಚೀನಾದ ಕ್ಯಾತೆ ಪ್ರಹಸನದ ಬಳಿಕ ಭಾರತ ಈಗ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿದೆ. ಐಟಿಬಿಪಿಯ 50 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು ವಾಹನ ಸೌಲಭ್ಯ ಹೆಚ್ಚಿಸಲಾಗುತ್ತಿದೆ. ಮತ್ತೂಮ್ಮೆ ಡೋಕ್ಲಾಂನಲ್ಲಾದ ಪರಿಸ್ಥಿತಿಯನ್ನೇ ಎದುರಿಸಬೇಕಾಗಿ ಬಂದಲ್ಲಿ ಅದನ್ನು ಸಮರ್ಥವಾಗಿ ಎದುರಿಸಲು ಗಡಿಯುದ್ಧಕ್ಕೂ 250ಕ್ಕೂ ಹೆಚ್ಚು ನ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ), ಆಲ್ ಟೆರೇನ್ ವೆಹಿಕಲ್ (ಎಟಿವಿ), ಸ್ನೋ ಸ್ಕೂಟರ್‌ಗಳು ಹಾಗೂ ಎಕ್ಸ್‌ಕವೇಟರ್ ಹಾಗೂ ಒಂದಿಷ್ಟು ಮಧ್ಯಮ ಗಾತ್ರದ 4ವೀಲ್ ಪವರ್ ವಾಹನಗಳನ್ನು ನಿಯೋಜಿಸಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಚೀನಾ ಸೇನೆ ಏಕಾಏಕಿ ದಾಳಿಗೆ ಮುಂದಾದಲ್ಲಿ ಕ್ಷಣಾರ್ಧದಲ್ಲಿ ಸೇನೆ ನಿಯೋಜನೆ ಮಾಡಿಕೊಳ್ಳುವುದು, ಶಸ್ತ್ರಾಸ್ತ್ರ ಪೂರೈಕೆ ಮಾಡಿಕೊಳ್ಳುವುದು ಸೇರಿದಂತೆ ಎಲ್ಲವೂ ತ್ವರಿತವಾಗಿಯೇ ಆಗಬೇಕಾದ ಕಾರಣ ಈ ವ್ಯವಸ್ಥೆಗೆ ಭಾರತ ಮಹತ್ವದ ಕ್ರಮ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಬರೋಬ್ಬರಿ 3,488 ಕಿ.ಮೀ. ಉದ್ದದ ಗಡಿಯಲ್ಲಿ ಯುದ್ಧ ಪರಿಣತ ಹಾಗೂ ಪರ್ವತಾರೋಹಣ ತರಬೇತಿ ಪಡೆದ ಯೋಧರನ್ನೇ ನಿಯೋಜಿಸುವ ಉದ್ದೇಶವನ್ನೂ ಹೊಂದಲಾಗಿದೆ. ಈತನಕವೂ ಚೀನಾ-ಭಾರತ ಗಡಿಯುದ್ದಕ್ಕೂ ಗೃಹ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಗಡಿ ಭದ್ರತಾ ಪಡೆ ಮಾತ್ರ ಕಾರ್ಯಾಚರಿಸುತ್ತಿದ್ದು, ಇದೀಗ ಒಂದಿಷ್ಟು ವಾಹನ ವ್ಯವಸ್ಥೆಗೆ ಸಚಿವಾಲಯ ಮುಂದಾಗಿದೆ. ಕೆಲವೇ ತಿಂಗಳಲ್ಲಿ ಇವೆಲ್ಲವೂ ಗಡಿಯಲ್ಲೇ ಇರುವಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಗಡಿ ಪ್ರದೇಶ ಸುರಕ್ಷಿತವಾಗಿದೆ. ಭಾರತದ ಸಾಮರ್ಥ್ಯ ಏನು ಎನ್ನುವುದೂ ಚೀನಾಕ್ಕೆ ಈಗ ಗೊತ್ತಾಗಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವದಲ್ಲೇ ಒಂದು ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ.
– ರಾಜನಾಥ್ ಸಿಂಗ್, ಗೃಹ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್’
Deepawali: ರಾಜಧಾನಿಯಲ್ಲಿ ದೀಪಾವಳಿ ಬೆಳಕಿನ ಚಿತ್ತಾರ
Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ
Raichur: ವಕ್ಫ್ ವಿಚಾರದಲ್ಲಿ ಬಿಜೆಪಿ ಚುನಾವಣೆ ಪ್ರಚಾರ: ಶರಣ ಪ್ರಕಾಶ ಪಾಟೀಲ
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.