ಗ್ರಾಹಕ ನ್ಯಾಯಾಲಯಗಳದ್ದೂ ಅದೇ ಹಣೆಬರಹ


Team Udayavani, Oct 16, 2017, 11:03 AM IST

grahaka-jastice.jpg

ಗ್ರಾಹಕರಿಗೆ ಮಾರಾಟಗಾರರಿಂದ ಆಗುವ ವಂಚನೆಗೆ ಕಡಿವಾಣ ಬೀಳಲಿ. ಗೊತ್ತಿಲ್ಲದೇ ಮೋಸ ಹೋಗುವ ಗ್ರಾಹಕರಿಗೆ ನ್ಯಾಯಸಿಗಲಿ ಎಂಬ ಸದಾಶಯದಿಂದ ಗ್ರಾಹಕರ ನ್ಯಾಯಾಲಯಗಳನ್ನು ಆರಂಭಿಸಲಾಯಿತು. ದೂರುಗಳಿಗೆ 90 ದಿನಗಳಲ್ಲಿ ತೀರ್ಪು ನೀಡಬೇಕು ಎಂದೂ ನಿಯಮ ಮಾಡಲಾಯಿತು. ಆದರೆ…

ನಮ್ಮ ದೇಶದಲ್ಲಿ ಭ್ರಷ್ಟಾಚಾರ ಅನಾದಿಕಾಲದಿಂದಲೂ ಇದೆ. ಅದರ ಪ್ರಮಾಣದಲ್ಲಿ ಮಾತ್ರ ಆಗೀಗ ವ್ಯತ್ಯಾಸವಾಗುತ್ತಿದೆಯಷ್ಟೇ. ಮಹಾಭಾರತದಂಥ ಕಥಾನಕದಲ್ಲೂ ನಾವು ವಿವಿಧ ಭ್ರಷ್ಟಾಚಾರಗಳನ್ನು ಕಾಣುತ್ತೇವೆ. ಅದೇ ಕಾಲಕ್ಕೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಲವು ಕಾಯ್ದೆಗಳು ಜನರ ಹಿತ ಕಾಯಲು, ಹೊಸ ಮನ್ವಂತರ ಸಾಧಿಸಲು ಬಂದಿವೆಯೇನೋ ಎಂಬಂತೆ ಕಂಡಿವೆ. ಈಗಿನ ಮಾಹಿತಿ ಹಕ್ಕು, ಸೇವಾ ಖಾತರಿ ಹಕ್ಕುಗಳಂತೆಯೇ ಈ ಸರದಿಯಲ್ಲಿ ಗ್ರಾಹಕ ಹಕ್ಕು ಕಾಯ್ದೆ ಆ ಕಾಲದ ದೊಡ್ಡ ಅಸ್ತ್ರ.

ಖರೀದಿ ಮಾಡಿದ ನಂತರ ಗ್ರಾಹಕ ಬಕ್ರಾ ಎಂಬ ಸಾಮಾನ್ಯ ನಂಬಿಕೆಯನ್ನು ತೆಗೆದುಹಾಕಿ ತಯಾರಕ ಮಾರಾಟಗಾರರ ಜವಾಬ್ದಾರಿಯನ್ನು ಇನ್ನಿಲ್ಲದಂತೆ ಹೆಚ್ಚಿಸಿದ ಈ ಕಾಯ್ದೆ ಎಲ್ಲ ಮಾದರಿಯ ಸೇವೆಗಳ ಗುಣಮಟ್ಟ ಹೆಚ್ಚಲು ಕಾರಣವಾಯಿತು.ಕಾಯ್ದೆಗಳನ್ನು ದುರುಪಯೋಗ ಪಡಿಸಿಕೊಳ್ಳುವವರು ಎಲ್ಲ ಕಾಲದಲ್ಲಿಯೂ ಇರುತ್ತಾರೆ. ಇದಕ್ಕೆ ಗ್ರಾಹಕ ಕಾಯ್ದೆಯಂತಲ್ಲ, ಮಾಹಿತಿ ಹಕ್ಕು ಕಾಯ್ದೆ ಬ್ಲಾಕ್‌ವೆುಲ್‌ ಮಾಡುವವರಿಗೆ ಪ್ರಶಸ್ತ ಅವಕಾಶ ಕಲ್ಪಿಸಿದೆ.

ಪ್ರಶ್ನೆ ಅದಲ್ಲ, ಈ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಪ್ರಯತ್ನಿಸಬೇಕಾದ ಸಂಬಂಧಪಟ್ಟ  ಪ್ರಾಧಿಕಾರಗಳು ಪ್ರಭಾವಪೂರ್ಣವಾಗಿ ನಡೆದುಕೊಂಡಿವೆಯೇ ಎಂದರೆ ನಿರಾಶೆ ಕಾಡುತ್ತದೆ. ಬಹುಶಃ ಮಾಹಿತಿ ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಮಾಹಿತಿ ಆಯೋಗಗಳು ಪಾಲಿಸಿದ್ದರೆ ಹತ್ತುಹಲವು ಭ್ರಷ್ಟಾಚಾರಗಳನ್ನು, ಅಧಿಕಾರಿಗಳ ಸೋಂಬೇರಿತನವನ್ನು ಹೋಗಲಾಡಿಸಲು ಸಾಧ್ಯವಾಗುತ್ತಿತ್ತು. 

ಇದೇ ರೀತಿ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ವಯ ನಿಯೋಜಿಸಲ್ಪಟ್ಟ ಗ್ರಾಹಕ ನ್ಯಾಯಾಲಯಗಳು ಗ್ರಾಹಕರತ್ತ ಅನುಕಂಪದಿಂದ ಮತ್ತು ಕಾಯ್ದೆಯ ಕಟ್ಟುಪಾಡುಗಳ ಅನ್ವಯ ಕ್ಷಿಪ್ರವಾಗಿ ತೀರ್ಪು ಕೊಟ್ಟಿದ್ದರೆ ಗ್ರಾಹಕ ನಿಜ ಅರ್ಥದಲ್ಲಿ ಮಹಾರಾಜನಾಗುತ್ತಿದ್ದ. ಆದರೆ……

ಜಡ್ಜ್ ನೇಮಕಕ್ಕೆ ಸಕಾಲ ಅನ್ವಯವಲ್ಲ!
ಇಂದು ರಾಜ್ಯ ಸರ್ಕಾರ ಶಾಸಕ ಮಹಾಶಯರಿಗೆ ಪುಗ‌ಸಟ್ಟೆಯಾಗಿ ಎರಡೆರಡು ಬಾರಿ ವಿದೇಶ ಪ್ರವಾಸಕ್ಕೆ ತೆರಳಲು  ಬಜೆಟ್‌ ಒದಗಿಸುತ್ತದೆ. ನಿವೃತ್ತ(?) ಶಾಸಕರಿಗೆ, ಸಾಫ್ಟ್ವೇರ್‌ ಎಂಜಿನಿಯರ್‌ಗೆ ಕೊಟ್ಟಂತೆ ನಿವೃತ್ತಿ ವೇತನ ಪಾವತಿಸುತ್ತದೆ. ದುಬಾರಿ ಟ್ಯಾಬ್ಲೆಟ್‌ ಉಪಕರಣವನ್ನು ಉಚಿತವಾಗಿ ಧಾರೆ ಎರೆಯುತ್ತದೆ. ಆದರೆ ಗ್ರಾಹಕ ನ್ಯಾಯಾಲಯಗಳಿಗೆ ಕನಿಷ್ಠ ಸದಸ್ಯರು ಮತ್ತು ಮುಖ್ಯ ಜಡ್ಜ್ ನೇಮಕಕ್ಕೆ ಮುಂದಾಗುವುದೇ ಇಲ್ಲ. ಇದಕ್ಕೆ “ಸಕಾಲ’ ಅನ್ವಯವಾಗುವುದಿಲ್ಲ!

ರಾಜ್ಯ ಸರ್ಕಾರ ಅಗತ್ಯ ನೇಮಕಾತಿಗಳಲ್ಲಿ ವಿಳಂಬ ಮಾಡುತ್ತಿದೆ. ಅರ್ಹರಿಗೆ ಅಭಾವವೇ ಇರದ ಪರಿಸ್ಥಿತಿಯಲ್ಲಿ ಈ ನಡವಳಿಕೆ ತರವಲ್ಲ. 31 ಜಿಲ್ಲಾ ಗ್ರಾಹಕ ನ್ಯಾಯಾಲಯಗಳ ಜಡ್ಜ್ ಗಳಲ್ಲಿ ಬೆಂಗಳೂರು ಅರ್ಬನ್‌, ದಕ್ಷಿಣ ಕನ್ನಡ, ಧಾರವಾಡ ಹಾಗೂ ಕೋಲಾರಗಳಂಥ ರಾಜ್ಯದ ನಾಲ್ಕು ಜಿಲ್ಲಾ ಗ್ರಾಹಕ ನ್ಯಾಯಾಲಯಗಳಿಗೆ ಅಧ್ಯಕ್ಷರೇ ಇಲ್ಲ. ಉಳಿದಂತೆ 62 ಜನ ಸದಸ್ಯರ ಸ್ಥಾನಗಳಲ್ಲಿ  16 ಇವತ್ತಿಗೂ ಖಾಲಿ ಖಾಲಿ. ಈ ನಡುವೆ ಬಹುಮಟ್ಟಿನ ಪ್ರಕರಣಗಳು ದಾಖಲಾಗುವ ಬೆಂಗಳೂರು ನಗರ, ದಕ್ಷಿಣ ಕನ್ನಡ, ಧಾರವಾಡಗಳಲ್ಲಿ ಸದಸ್ಯರನ್ನು ನೇಮಿಸಲಾಗಿಲ್ಲ.

ದಕ್ಷಿಣ ಕನ್ನಡ, ಧಾರವಾಡಗಳ ಸ್ಥಿತಿ ಹೀನಾಯ, ಇಲ್ಲಿ ಅಧ್ಯಕ್ಷರಾಗಲಿ, ಇನ್ನೊಬ್ಬ ಸದಸ್ಯರಾಗಲಿ ಇಲ್ಲವೇ ಇಲ್ಲ! ಧಾರವಾಡದಲ್ಲಿ ಮೂವರ ಸ್ಥಾನವೂ ಖಾಲಿ, ಚಿತ್ರದುರ್ಗ ಹಾಗೂ ಉತ್ತರ ಕನ್ನಡಗಳಲ್ಲಿ ಜಡ್ಜ್ ಇದ್ದಾರೆ. ಸಹ ಸದಸ್ಯರಾರೂ ಇಲ್ಲ. ಇಂತಹ ಸಂದರ್ಭದಲ್ಲಿ ಪ್ರಶ್ನೆ ಏಳುತ್ತದೆ, ನ್ಯಾಯ ನ್ಯಾಯವಾಗಿರುತ್ತದೆಯೇ? ಈಗಂತೂ ನೇಮಕಾತಿ ಸಂಬಂಧ ಹೈಕೋರ್ಟ್‌ನಲ್ಲಿ ಪ್ರಕರಣವೊಂದು ದಾಖಲಾಗಿರುವುದು ಸರ್ಕಾರಕ್ಕೆ ಅತ್ಯುತ್ತಮ ನೆಪ ಸಿಕ್ಕಂತಾಗಿದೆ.

ಇದು ಸರ್ಕಾರದ ಕಡೆಯಿಂದ ಆದ ವ್ಯತ್ಯಯವಾಯಿತು. ಕೆಲಸ ಮಾಡುತ್ತಿದೆ ಎಂದು ನಾವು ನಂಬಲಾಗಿರುವ ಜಿಲ್ಲಾ ಹಾಗೂ  ರಾಜ್ಯ ಗ್ರಾಹಕ ತರಕ್ಷಣಾ ವೇದಿಕೆಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆಯಾ ಎಂಬ ಪ್ರಶ್ನೆ ಕೇಳಿಕೊಂಡರೂ ತೀವ್ರ ನಿರಾಸೆಯಾಗುತ್ತದೆ. ಅಧಿನಿಯಮದ ಪ್ರಕಾರ, ಗ್ರಾಹಕನ ದೂರು 90 ದಿನಗಳಲ್ಲಿ ಇತ್ಯರ್ಥವಾಗಬೇಕು. 2017ರ ಮೇವರೆಗಿನ  ರಾಜ್ಯ ಗ್ರಾಹಕ ನ್ಯಾಯಾಲಯ ಅಧಿಕೃತವಾಗಿ ಪ್ರಕಟಿಸಿರುವ ಅಂಕಿಅಂಶಗಳ ಪ್ರಕಾರವೇ ಹೇಳುವುದಾದರೆ, ಶೇ. 73.89 ಪ್ರಕರಣಗಳು ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಈ ಸಮಯ ಮಿತಿಯಲ್ಲಿ ಇತ್ಯರ್ಥವಾಗಿಲ್ಲ.

ಜಿಲ್ಲಾ ವೇದಿಕೆಗಳಲ್ಲೂ ಪರಿಸ್ಥಿತಿ ಆಶಾದಾಯಕವಾಗೇನೂ ಇಲ್ಲ, ಇಲ್ಲೂ ಶೇ. 73.26 ಪ್ರಕರಣಗಳಿಗೆ ಮುಕ್ತಿ ಸಿಕ್ಕಿದ್ದು ಮೂರು ತಿಂಗಳ ನಂತರವೇ. ನೆನಪಿರಲಿ, ಈ ಮಾತನ್ನು ಗ್ರಾಹಕರ ಪರವಾಗಿ ತೀರ್ಪು ಕೊಡಲಾಗಿದೆ ಎಂಬ ಅರ್ಥದಲ್ಲಿ ಬಳಸಲಾಗಿಲ್ಲ. ಅಂಕಿ-ಅಂಶಗಳ ಪ್ರಕಾರ ರಾಜ್ಯ ವೇದಿಕೆಯಲ್ಲಿ ಈವರೆಗೆ 55,613 ಹಾಗೂ ಜಿಲ್ಲಾ ವೇದಿಕೆಯಲ್ಲಿ 1,92,409 ಪ್ರಕರಣಗಳು ದಾಖಲಾಗಿದ್ದು, ಅನುಕ್ರಮವಾಗಿ 46,977 ಹಾಗೂ 1,83,135 ಪ್ರಕರಣದಲ್ಲಿ ತೀರ್ಪು ಕೊಡಲಾಗಿದೆ. 90 ದಿನಗಳ ಅವಧಿಯಲ್ಲಿ ಇತ್ಯರ್ಥವಾಗಿದ್ದು ರಾಜ್ಯ ನ್ಯಾಯಾಲಯದಲ್ಲಿ 12,269 ಮತ್ತು ಜಿಲ್ಲೆಗಳಲ್ಲಿ 48,974 ಮಾತ್ರ. ಈ ಅರೆ ನ್ಯಾಯಾಂಗ ವ್ಯವಸ್ಥೆಯ ಮುಂದೆ ಈಗಲೂ ಅನುಕ್ರಮವಾಗಿ 8,636 ಹಾಗೂ 9,274 ದೂರು ಬಾಕಿ ಉಳಿದಿವೆ.

ನ್ಯಾಯಾಲಯಗಳ ವಿಳಂಬ ಸೋಂಕು!
ಗ್ರಾಹಕರು ತಮ್ಮ ದೂರುಗಳಿಗೆ ನ್ಯಾಯಾಂಗದ ಉಳಿದ ವ್ಯವಸ್ಥೆಗಳಲ್ಲಿ ಈ ಹಿಂದಿನಿಂದಲೂ ಪರಿಹಾರ ಕಂಡುಕೊಳ್ಳಬಹುದಿತ್ತು. ಆ ನಿಟ್ಟಿನಲ್ಲಿ ಮತ್ತೂಂದು ಗ್ರಾಹಕ ನ್ಯಾಯಾಲಯದ ಅಗತ್ಯವಿರಲಿಲ್ಲ. ಆದರೆ ಸಾಮಾನ್ಯ ನ್ಯಾಯಾಲಯಗಳಲ್ಲಿ ಅನಿವಾರ್ಯವಾಗಿ ಪ್ರಕರಣಗಳ ಇತ್ಯರ್ಥ ವಿಳಂಬವಾಗುವುದನ್ನು ಗಮನಿಸಿಯೇ ಕೇಂದ್ರ ಸರ್ಕಾರ ಈ ಗ್ರಾಹಕ ವೇದಿಕೆಗಳನ್ನು ಕ್ಷಿಪ್ರ ನ್ಯಾಯಕ್ಕಾಗಿ ಸ್ಥಾಪಿಸಿತು.

ಆದದ್ದೇನು, ಇಂದು ಪಾರಂಪರಿಕ ನ್ಯಾಯ ಪೀಠಗಳನ್ನು ನಾಚಿಸುವಂತೆ ಗ್ರಾಹಕ ನ್ಯಾಯಾಲಯಗಳು ಕೆಲಸ ಮಾಡುತ್ತಿವೆ! ಗ್ರಾಹಕ ಸಂರಕ್ಷಣಾ ಅಧಿನಿಯಮ 3ಏ ಕಲಂ ಪ್ರಕಾರ ಪ್ರಕರಣಗಳನ್ನು ಪರಮಾವಧಿ ತೊಂಬತ್ತು ದಿನಗಳಲ್ಲಿ ಗ್ರಾಹಕ ವೇದಿಕೆ ಮುಕ್ತಾಯ ಹಾಡಿ ತೀರ್ಪು ಕೊಡಬೇಕಾಗಿತ್ತು. ವಾಸ್ತವ ಇದಕ್ಕೆ ತದ್ವಿರುದ್ಧ. 2017ರ ಮೇನ ಒಂದು ಅಂಕಿಅಂಶವನ್ನು ಗಮನಿಸಬೇಕು. ಆಗ ರಾಜ್ಯ ಆಯೋಗದಲ್ಲಿ ಆರು ತಿಂಗಳಿಗಿಂತ ಕಡಿಮೆ ಕಾಲದ 814 ಪ್ರಕರಣಗಳು, ಮೇಲ್ಮನವಿಯಾಗಿ ಸ್ವೀಕರಿಸಿದ 2.501 ಪ್ರಕರಣಗಳಿದ್ದವು. ಬಿಡಿ, ಇದು ಸಾಮಾನ್ಯ.

ಜಿಲ್ಲಾ ವೇದಿಕೆಗಳಲ್ಲಿ 2,407 ಪ್ರಕರಣಗಳು ಬಾಕಿ, ಸಮಸ್ಯೆ ಇಲ್ಲ. ಆರು ತಿಂಗಳಿನಿಂದ ಒಂದು ವರ್ಷ ಎಳೆಯುತ್ತಿರುವ ಪ್ರಕರಣಗಳು ರಾಜ್ಯ ಆಯೋಗದಲ್ಲಿ 1,267, ಜಿಲ್ಲಾ ವೇದಿಕೆಗಳಲ್ಲಿ 1,574. ತುಸು ಮುಂದೆ ಹೋದರೆ ಎರಡು ವರ್ಷದಿಂದ ಕೊಳೆಯುತ್ತಿರುವ  ದೂರುಗಳು ರಾಜ್ಯ ಆಯೋಗದಲ್ಲಿ 1,109, ಜಿಲ್ಲಾ ವೇದಿಕೆಗಳ ಒಟ್ಟು ಪ್ರಕರಣ ಮೊತ್ತ 2,550. ಹೋಗಲಿ ಎಂದರೆ ಜಿಲ್ಲಾ ವೇದಿಕೆಗಳಲ್ಲಿ 1,660 ಮನವಿಗಳು ಹಿಂದಿನ ಮೂರು ವರ್ಷದಿಂದ ಫೈಲ್‌ ಗಾತ್ರ ಹೆಚ್ಚಿಸುತ್ತಿದ್ದವು. ಇಂಥದ್ದು ರಾಜ್ಯ ಆಯೋಗದ ಮುಂದಿದ್ದದ್ದು ಬರೋಬ್ಬರಿ 1,077 ಪ್ರಕರಣ. 

ಗ್ರಾಹಕ ವೇದಿಕೆಗಳಲ್ಲಿ ಅನಾವಶ್ಯಕವಾಗಿ ಮುಂದೂಡಿಕೆಗಳನ್ನು ಮಾನ್ಯ ಮಾಡಬಾರದು ಎಂದು ಕಾಯ್ದೆಯ ಅಧಿನಿಯಮವೇ ಹೇಳುತ್ತದೆ. ಮೈಸೂರು ಜಿಲ್ಲಾ  ವೇದಿಕೆಯ ಉದಾಹರಣೆಯನ್ನು ತೆಗೆದುಕೊಂಡರೆ, 2012ರಲ್ಲಿ ಇತ್ಯರ್ಥವಾದ 1202 ಕೇಸುಗಳಲ್ಲಿ ಒಂದೂ ಮುಂದೂಡಿಕೆ ಇಲ್ಲದೆ ಕೊನೆ ಕಂಡಿಲ್ಲ! ಶೇ. 90ರಷ್ಟು ಪ್ರಕರಣಗಳು ಮೂರು ಮುಂದೂಡಿಕೆಗಳ ನಂತರವೇ ಇತ್ಯರ್ಥವಾಗಿದೆ. ಶೇ. 50 ಪ್ರಕರಣಗಳಲ್ಲಿ 10ಕ್ಕೂ ಹೆಚ್ಚು ಅರ್ಜನ್‌ಮೆಂಟ್‌.

ಅಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧದ ಒಂದು ಪ್ರಕರಣ 30ಕ್ಕೂ ಹೆಚ್ಚು ಆಲಿಕೆಗಳನ್ನು ನಡೆಸಿದೆ! ಸಮಾರಂಭಗಳಿಗೆ ತಡವಾಗಿ ಬರದಿದ್ದರೆ ತಮ್ಮ ಗೌರವಕ್ಕೆ ಕುಂದು ಎಂದು ಜನಪ್ರತಿನಿಧಿಗಳು ಅಂದುಕೊಳ್ಳುತ್ತಾರಂತೆ. ಅದೇ ರೀತಿ ಗ್ರಾಹಕ ನ್ಯಾಯಾಲಯಗಳು ಎಷ್ಟೋ ಪ್ರಕರಣಗಳು “ಸಿಂಗಲ್‌ ಸಿಟ್ಟಿಂಗ್‌’ನಲ್ಲಿ ಬಗೆಹರಿಸುವಷ್ಟು ಸರಳವಾಗಿದ್ದರೂ  ಶೀಘ್ರವಾಗಿ ಇತ್ಯರ್ಥಪಡಿಸಿದರೆ ನ್ಯಾಯ ಕೊಟ್ಟಂತೆ ಆಗುವುದಿಲ್ಲವೇನೋ ಎಂದು ಭಾವಿಸಿರುವಂತಿದೆ. ಹಾಗಾಗಿ ಪ್ರಕರಣಗಳ ಸಂಖ್ಯೆ ಬೆಳೆಯುತ್ತಿದೆ.

ಇರುವ ಆಶಯ ಜಾರಿಗೆ ಬರಲಿ!
ಬಹುಶಃ ವಕೀಲರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಕ್ರಮದಿಂದ ದೂರುದಾರ ಗ್ರಾಹಕರಿಗಿಂತ ಎದುರಿಗೇ ಪರಮ ಲಾಭವಾಗಿದೆ. ಈ ಪ್ರಕರಣ ಗ್ರಾಹಕ ಕಾಯ್ದೆಯಡಿ ಬರುವುದಿಲ್ಲ ಎಂಬುದರಿಂದ ವಾದ ಆರಂಭಿಸುವ ಅವರು ನ್ಯಾಯಾಲಯದ ಸಮಯವನ್ನು ತಿಂದುಹಾಕುತ್ತಿದ್ದಾರೆ ಎನ್ನುವುದನ್ನು ವಕೀಲರ ಮೇಲಿನ ಎಲ್ಲ ಗೌರವಗಳ ಹೊರತಾಗಿಯೂ ಹೇಳಲೇಬೇಕಾಗಿದೆ. ಕಾಯ್ದೆಗೆ ಮಾರ್ಪಾಡು ತಂದು ಇನ್ನಷ್ಟು ಪ್ರಖರಗೊಳಿಸಬೇಕು ಎಂಬ ಮಾತು ಕ್ಲೀಷೆ ಎನ್ನಿಸುತ್ತದೆ. ಅದರ ಬದಲು ಗ್ರಾಹಕ ವೇದಿಕೆ, ಆಯೋಗ ಬಳಕೆದಾರರ ಹಿತ ರಕ್ಷಣೆಯೇ ತನ್ನ ಪರಮೋತ್ಛ ಆಸಕ್ತಿ ಎಂದು ಭಾವಿಸಿ ಪ್ರಕರಣಗಳನ್ನು ಈಗಿನ ನಿಯಮಾವಳಿಗೆ ಖಡಕ್ಕಾಗಿ ಇತ್ಯರ್ಥಪಡಿಸಿದರೂ ಸಾಕು. 

-ಅಂಕಿ-ಅಂಶಗಳ ಪ್ರಕಾರ ರಾಜ್ಯ ವೇದಿಕೆಯಲ್ಲಿ ಈವರೆಗೆ 55,613 ಹಾಗೂ ಜಿಲ್ಲಾ ವೇದಿಕೆಯಲ್ಲಿ 1,92,409 ಪ್ರಕರಣಗಳು ದಾಖಲಾಗಿದ್ದು, ಅನುಕ್ರಮವಾಗಿ 46,977 ಹಾಗೂ 1,83,135 ಪ್ರಕರಣದಲ್ಲಿ ತೀರ್ಪು ಕೊಡಲಾಗಿದೆ. 90 ದಿನಗಳ ಅವಧಿಯಲ್ಲಿ ಇತ್ಯರ್ಥವಾಗಿದ್ದು ರಾಜ್ಯ ನ್ಯಾಯಾಲಯದಲ್ಲಿ 12,269 ಮತ್ತು ಜಿಲ್ಲೆಗಳಲ್ಲಿ 48,974 ಮಾತ್ರ. ಈ ಅರೆ ನ್ಯಾಯಾಂಗ ವ್ಯವಸ್ಥೆಯ ಮುಂದೆ ಈಗಲೂ ಅನುಕ್ರಮವಾಗಿ 8,636 ಹಾಗೂ 9,274 ದೂರು ಬಾಕಿ ಉಳಿದಿವೆ.

* ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.