ಮಾಧವಾನಂದಸರಸ್ವತಿ ಸ್ವಾಮೀಜಿ ಇನ್ನಿಲ್ಲ
Team Udayavani, Oct 16, 2017, 11:05 AM IST
ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವರದಹಳ್ಳಿಯ ಭಗವಾನ್ ಶ್ರೀಧರ ಸ್ವಾಮಿಗಳ ಪ್ರಿಯ ಶಿಷ್ಯರಾಗಿದ್ದ ಮಾಧವಾನಂದ ಸರಸ್ವತಿ ಸ್ವಾಮೀಜಿ ಅ. 10ರಂದು ವಾರಣಾಸಿಯ ದತ್ತಾತ್ರೇಯ ಮಠದಲ್ಲಿ ಮುಕ್ತಿ ಹೊಂದಿದರು.
ವರದಹಳ್ಳಿಯಲ್ಲಿ ಜನಿಸಿದ್ದ ಮಾಧವಾನಂದ ಸರಸ್ವತಿ ಸ್ವಾಮೀಜಿ ಶ್ರೀಧರ ಸ್ವಾಮೀಜಿಗಳ ಶಿಷ್ಯರಾಗಿ ತಮ್ಮ ಅಧ್ಯಾತ್ಮ ಜೀವನ ಆರಂಭಿಸಿದ್ದರು. ಶ್ರೀಧರರ ಆದೇಶದಂತೆ ಹೊಳೆನರಸೀಪುರದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳ ಬಳಿ ಐದು ವರ್ಷಗಳ ಕಾಲ ವೇದಾಂತ ಮತ್ತು ಸಂಸ್ಕೃತ ವಿದ್ಯಾಭ್ಯಾಸ ಮಾಡಿದ್ದರು. ನಂತರ ಕಾವೇರಿ ತೀರ, ಸಜ್ಜನಗಢ, ಹೋಶಂಗಾಬಾದ್, ತ್ರಯಂಬಕೇಶ್ವರದಲ್ಲಿ ಕಠಿಣ ತಪೋ ಸಾಧನೆ ಮಾಡಿದ್ದರು. ಶ್ರೀಧರ ಸ್ವಾಮಿಗಳು ತಮ್ಮ ಏಕಾಂತ ವಾಸದ ಸಂದರ್ಭದಲ್ಲಿ ಮಾಧವಾನಂದರನ್ನು ಆಶ್ರಮದ ಸೇವೆಗೆ ನಿಯೋಜಿಸಿದ್ದರು. ಶ್ರೀಧರರ ಮಹಾಸಮಾಧಿಯ ನಂತರ ಉಜ್ಜಯನಿಯಲ್ಲಿ ಮತ್ತು ಉಗಾರ್ನಲ್ಲಿ ಕಠಿಣ ತಪಸ್ಸಾಧನೆ ಮಾಡಿ ಸನ್ಯಾಸ ದೀಕ್ಷೆ ಪಡೆದರು. ನಂತರ ಭಗವಾನ್ ದತ್ತಾತ್ರೇಯರ ಎರಡನೇ ಅವತಾರವಾದ ನರಸಿಂಹ ಸರಸ್ವತಿ ಸ್ವಾಮೀಜಿಗಳಿಂದ ಸ್ಥಾಪಿಸಲ್ಪಟ್ಟ ವಾರಣಾಸಿಯ ದತ್ತಾತ್ರೇಯ ಮಠದ ಮಹಾಂತರಾದರು.
ಮಾಧವಾನಂದರ ಪೂರ್ವಾಶ್ರಮದ ಹೆಸರು ಅನಂತ ಸಾಧು ಎಂಬುದಾಗಿತ್ತು. ಮಾಧವಾನಂದ ಸರಸ್ವತಿ ಸ್ವಾಮೀಜಿಗಳ 12ನೇ ದಿನದ ಆರಾಧನಾ ಕಾರ್ಯಕ್ರಮ ಭಾನುವಾರ ವರದಹಳ್ಳಿಯ ಶ್ರೀಗಳ ಪೂರ್ವಾಶ್ರಮದ ಮನೆಯಲ್ಲಿ ನೆರವೇರಿತು. ಪೂರ್ವಾಶ್ರಮದ ಅಣ್ಣನ ಮಕ್ಕಳಾದ ತುಂಬೆ ವೆಂಕಟೇಶ್ ಮತ್ತು ಸಹೋದರರು ಕಾರ್ಯಕ್ರಮ ನೆರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.