‘ಯುವ ಪೀಳಿಗೆಯ ಯಶಸ್ಸಿಗೆ ಮಾರ್ಗದರ್ಶನ ಅಗತ್ಯ’
Team Udayavani, Oct 16, 2017, 12:12 PM IST
ಮೂಲ್ಕಿ: ಹಿರಿಯರ ಜವಾಬ್ದಾರಿಯುತ ಮಾರ್ಗದರ್ಶನದಿಂದ ಮಾತ್ರ ಯುವ ಪೀಳಿಗೆ ಯಶಸ್ವಿಯಾಗಲು ಸಾಧ್ಯ ಎಂದು ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಅವರು ಮೂಲ್ಕಿ ಮಂಗಳೂರು ಕೆಥೊಲಿಕ್ ಸಭಾ ಮೂಲ್ಕಿ ಘಟಕ ಮತ್ತು ಸಂತ ಕೊಸೆಸಾಂವ್ ಅಮ್ಮನವರ ಚರ್ಚ್ ಆಶ್ರಯದಲ್ಲಿ ನಡೆದ ನಮ್ಮ ಹಿರಿಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯುವ ಪೀಳಿಗೆ ತಮ್ಮ ಹಿರಿಯರು ಮತ್ತು ಹೆತ್ತವರ ಬಗ್ಗೆ ಕಾಳಜಿ ವಹಿಸಿ, ಅವರ ಹಿತ ಕಾಪಾಡುವಲ್ಲಿ ಶ್ರಮಿಸಿದರೆ ಯುವಕರು ಹಿರಿಯರಾಗುವ ದಿನಗಳಲ್ಲಿ ಉತ್ತಮ ಬದುಕು ಪಡೆಯಲು ಸಾಧ್ಯ ಎಂದರು.
ಈ ಸಂದರ್ಭ ಮೂಲ್ಕಿ ಚರ್ಚ್‌ನ ಧರ್ಮಗುರುಗಳಾದ ಫಾ| ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ ಅವರ 67ನೇ ಹುಟ್ಟು ಹಬ್ಬವನ್ನು ಸಭೆಯ ವತಿಯಿಂದ ನಡೆಸಿ ಅವರನ್ನು ಸಮ್ಮಾನಿಸಲಾಯಿತು.
ಕಾಪು ಶಾಸಕ ವಿನಯ ಕುಮಾರ್ ಸೊರಕೆ ಅವರು ಮುಖ್ಯ ಅತಿಥಿಯಾಗಿದ್ದರು. ಈ ಸಮಾವೇಶದಲ್ಲಿ 150ಕ್ಕೂ ಮಿಕ್ಕಿದ ಹಿರಿಯ ನಾಗರಿಕರು ಭಾಗವಹಿಸಿದ್ದರು. ಮಂಗಳೂರು ಎ.ಜೆ. ಆಸ್ಪತ್ರೆಯ ಫೋರೆನಿಕ್ ವಿಭಾಗದ ಮುಖ್ಯಸ್ಥ ಡಾ| ಪ್ರಕಾಶ್ ಮೊಂತೆರೋ ಹಿರಿಯರ ಸಮಸ್ಯೆಗಳು ಮತ್ತು ಅದಕ್ಕೆ ಬೇಕಾದ ಸೂಕ್ತ ಪರಿಹಾರ ಮಾರ್ಗದ ಬಗ್ಗೆ ಮಾತನಾಡಿದರು.
ಅತಿಥಿಗಳಾಗಿ ಕಪುಚಿನ್ ಫಾ| ಡೆರಿಕ್, ಫಾ| ಫ್ರಾಂಕ್ಲಿನ್ ಮಚಾದೋ, ಕೆಥೋಲಿಕ್ ಸಭಾದ ಅಧ್ಯಕ್ಷ ಅನಿಲ್ ಲೋಬೋ, ವಾರ್ಡ್ ಕಾರ್ಯದರ್ಶಿ ರಾಸೆಲ್, ರೆಮಾಂಡ್ ರೆಬೆಲ್ಲೋ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಜೀನ್ ಮೋಲೀನ್ ಡಿ’ಸೋಜಾ, ಕಾರ್ಯದರ್ಶಿ ಪ್ರಕಾಶ್ ಮೊಂತೆರೋ, ಹಿರಿಯ ವೈದ್ಯ ಡಾ| ಸುರೇಶ್ ಆರಾಹ್ನ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಫಿಲೋಮಿನಾ ಗೋಮ್ಸ್ ಮುಂತಾದವರಿದ್ದರು. ಕೆಥೊಲಿಕ್ ಸಭಾ ಮೂಲ್ಕಿ ಘಟಕದ ಅಧ್ಯಕ್ಷ ರೋಲ್ಪಿ ಡಿ’ಕೋಸ್ತಾ ಸ್ವಾಗತಿಸಿದರು. ಸೆಲಿನ್ ರಾಡ್ರಿಗಸ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Delhi: ಕೆನಡಾ ವಲಸಿಗರಲ್ಲಿ ಗುಜರಾತಿ ಭಾಷಿಗರಿಗೆ ಮೂರನೇ ಸ್ಥಾನ
TTD ಹೊಸ ಮಂಡಳಿ: ಕರ್ನಾಟಕ ಮೂಲದ ನಿವೃತ್ತ ಸಿಜೆಐ ದತ್ತುಗೆ ಸ್ಥಾನ
New Delhi: ರಷ್ಯಾಗೆ ನೆರವು ಆರೋಪ; 19 ಭಾರತೀಯ ಸಂಸ್ಥೆಗಳಿಗೆ ಅಮೆರಿಕದಿಂದ ನಿರ್ಬಂಧ
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
MI: ಸೂರ್ಯ, ಹಾರ್ದಿಕ್ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್: ರೋಹಿತ್ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.