ರೋಷನ್‌ ಬೇಗ್‌ ವಿರುದ್ಧ ದೂರು

Team Udayavani, Oct 16, 2017, 3:32 PM IST

16-Mng-12.jpg

ಉಪ್ಪಿನಂಗಡಿ: ದೇಶದ ಪ್ರಧಾನಿಯನ್ನು ಅಸಾಂವಿಧಾನಿಕ ಪದ ಬಳಸಿ ಸಾರ್ವಜನಿಕ ವೇದಿಕೆಯಲ್ಲಿ ನಿಂದಿಸಿದ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿ ಬಿಜೆಪಿ ಉಪ್ಪಿನಂಗಡಿ ಶಕ್ತಿ ಕೇಂದ್ರದ ವತಿಯಿಂದ ರವಿವಾರ ಉಪ್ಪಿನಂಗಡಿಯಲ್ಲಿ ಪೊಲೀಸ್‌ ಇಲಾಖೆಗೆ ದೂರು ಸಲ್ಲಿಸಲಾಯಿತು.

ದೇಶದ ಪ್ರಧಾನಿಯ ಬಗ್ಗೆ ಅಸಭ್ಯತೆಯ ಮಟ್ಟಕ್ಕಿಳಿದು ಕೆಟ್ಟ ಪದ ಬಳಕೆ ಮಾಡಿರುವ ಅಪಾದಿತ ಸಚಿವರ ವಿರುದ್ದ ಕಾನೂನು ಕ್ರಮ ಜರಗಿಸಬೇಕೆಂದು ತನ್ಮೂಲಕ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಸಚಿವರನ್ನು ಬಂಧಿಸಬೇಕೆಂದು ಅಗ್ರಹಿಸಿದ್ದಾರೆ.

ದೂರು ನೀಡುವ ವೇಳೆ ತಾ.ಪಂ. ಸದಸ್ಯರಾದ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಸುಜಾತಾ ಕೃಷ್ಣ ಆಚಾರ್ಯ, ಮುಕುಂದ ಗೌಡ, ಬಿಜೆಪಿ ಮುಖಂಡರಾದ ಸುನೀಲ್‌ ದಡ್ಡು, ಜಯಾನಂದ, ಕೆ. ರಾಮಚಂದ್ರ ಪೂಜಾರಿ, ಗಣೇಶ್‌ ಬಜತ್ತೂರು, ರಾಮಚಂದ್ರ ಮಣಿಯಾಣಿ, ಸುರೇಶ್‌ ಅತ್ರಮಜಲು, ಮೋನಪ್ಪ ಬೆದ್ರೋಡಿ, ಧನಂಜಯ ಬೆದ್ರೋಡಿ, ಪೂವಪ್ಪ ದೇಂತಡ್ಕ, ಜಯಂತ ಪುರೋಳಿ ಮೊದಲಾದವರು ಉಪಸ್ಥಿತರಿದ್ದರು.

ದೂರು ಸ್ವೀಕರಿಸಿದ ಸಬ್‌ ಇನ್‌ಸ್ಪೆಕ್ಟರ್‌ ನಂದ ಕುಮಾರ್‌, ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬಂಟ್ವಾಳದಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಬಗ್ಗೆ ದಾಖಲಿಸಿ ಸರಕಾರಕ್ಕೆ ಮಾಹಿತಿ ನೀಡಲಾಗುವುದೆಂದು ತಿಳಿಸಿದರು. 

ಇದೇ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪುತ್ತೂರು ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸುನಿಲ್‌ ದಡ್ಡು, ರಾಜಕೀಯದ ಆರೋಗ್ಯ ಪೂರ್ಣ ಟೀಕೆ ಸರ್ವ ಸಾಮಾನ್ಯ. ಆದರೆ ಓರ್ವ ಗಣ್ಯ ವ್ಯಕ್ತಿಯಾಗಿ, ಈ ಬೃಹತ್‌ ದೇಶದ ಪ್ರಧಾನಿಯಾಗಿ, ಇಡೀ ವಿಶ್ವದ ಮಾನ್ಯತೆಗೆ ಒಳಗಾಗಿರುವ ನರೇಂದ್ರ ಮೋದಿಯವರನ್ನು ಅಸಾಂವಿಧಾನಿಕ ಪದ ಬಳಸಿ ನಿಂದಿಸಿರುವುದು ದೇಶಕ್ಕೆ ಮಾಡಿರುವ ನಿಂದನೆಯಾಗಿದೆ. ಇದು ಇಡೀ ದೇಶವಾಸಿಗರನ್ನು ಕೆರಳಿಸಿದೆ. ಈ ಬಗ್ಗೆ ಪೊಲೀಸ್‌ ಇಲಾಖೆಯಿಂದ ಸಕಾರಾತ್ಮಕ ಕ್ರಮವನ್ನು ಬಯಸಿದ್ದೇವೆ ಎಂದು ತಿಳಿಸಿದರು.

ಟಾಪ್ ನ್ಯೂಸ್

1-reeee

BJP ಸ್ನೇಹಿತರಿಗೆ ಕೈ ಜೋಡಿಸಿ ಮನವಿ ಮಾಡಿಕೊಳ್ಳುವೆ, ದಾರಿ ತಪ್ಪಿಸಬೇಡಿ: ಜಮೀರ್‌

1st ODI: ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ಗೆ 8 ವಿಕೆಟ್‌ ಜಯ

1st ODI: ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ಗೆ 8 ವಿಕೆಟ್‌ ಜಯ

PM Mod

Congress ಬಣ್ಣ ಕೆಟ್ಟದಾಗಿ ಬಹಿರಂಗವಾಗಿದೆ: ಖರ್ಗೆ ಹೇಳಿಕೆ ಕುರಿತು ಪ್ರಧಾನಿ ಮೋದಿ ಲೇವಡಿ

Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

delhi air

Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Coastal-Rain

Heavy Rain: ಕರಾವಳಿಯಲ್ಲಿ ಸಂಜೆಯಾಗುತ್ತಲೇ ಮಳೆ; ಬೆಳ್ತಂಗಡಿಯಲ್ಲಿ ಮನೆ ಕುಸಿತ

4

Puttur: ಅಮ್ಚಿನಡ್ಕದಲ್ಲಿ ಮತ್ತೆ ಕಾಡಾನೆ ಹಾವಳಿ

accident2

Belthangady: ಟ್ಯಾಂಕರ್‌ ಪಲ್ಟಿ; ಪ್ರಾಣಾಪಾಯದಿಂದ ಪಾರು

1(1)

Puttur: ಎಲ್ಲೆಡೆ ಬೆಳಕಿನ ಹಬ್ಬದ ಝಗಮಗ

POLICE-5

Vitla ಪೊಲೀಸರಿಂದ ಕಳ್ಳರಿಬ್ಬರ ಬಂಧನ; 2.85 ಲಕ್ಷ ರೂ. ಸೊತ್ತುಗಳ ವಶ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-reeee

BJP ಸ್ನೇಹಿತರಿಗೆ ಕೈ ಜೋಡಿಸಿ ಮನವಿ ಮಾಡಿಕೊಳ್ಳುವೆ, ದಾರಿ ತಪ್ಪಿಸಬೇಡಿ: ಜಮೀರ್‌

1st ODI: ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ಗೆ 8 ವಿಕೆಟ್‌ ಜಯ

1st ODI: ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ಗೆ 8 ವಿಕೆಟ್‌ ಜಯ

PM Mod

Congress ಬಣ್ಣ ಕೆಟ್ಟದಾಗಿ ಬಹಿರಂಗವಾಗಿದೆ: ಖರ್ಗೆ ಹೇಳಿಕೆ ಕುರಿತು ಪ್ರಧಾನಿ ಮೋದಿ ಲೇವಡಿ

Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

delhi air

Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.