ಜರ್ಮನಿ ಕ್ವಾರ್ಟರ್ಫೈನಲಿಗೆ
Team Udayavani, Oct 17, 2017, 7:50 AM IST
ಹೊಸದಿಲ್ಲಿ: ಅಮೋಘ ಆಟದ ಪ್ರದರ್ಶನ ನೀಡಿದ ಜರ್ಮನಿ ತಂಡವು ಸೋಮವಾರ ನಡೆದ ಫಿಫಾ ಅಂಡರ್ 17 ವಿಶ್ವಕಪ್ ಫುಟ್ಬಾಲ್ ಕೂಟದ ಮೊದಲ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ತಂಡವನ್ನು 4-0 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿದೆ.
ನಾಯಕ ಮತ್ತು ಸ್ಟಾರ್ ಸ್ಟ್ರೈಕರ್ ಜಾನ್ ಫೀಟ್ ಆಫ್ ಅವಳಿ ಗೋಲು (7ನೇ ಮತ್ತು 65ನೇ ನಿಮಿಷ) ಹೊಡೆದರೆ ಯಾನ್ ಬಿಸ್ಸೆಕ್ 39ನೇ ಮತ್ತು ಜಾನ್ ಯೆಬೋಹ್ 49ನೇ ನಿಮಿಷದಲ್ಲಿ ಗೋಲನ್ನು ಹೊಡೆದು ಜರ್ಮನಿ ಕ್ವಾರ್ಟರ್ಫೈನಲಿಗೇರುವಂತೆ ಮಾಡಿದರು.
1985ರಲ್ಲಿ ರನ್ನರ್ ಅಪ್ ಸ್ಥಾನ ಪಡೆದಿರುವುದು ಜರ್ಮನಿಯ ಇಷ್ಟರವರೆಗಿನ ಶ್ರೇಷ್ಠ ನಿರ್ವಹಣೆಯಾಗಿತ್ತು. ಆದರೆ ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದೊಂದಿಗೆ ಜರ್ಮನಿ ಭಾರತಕ್ಕೆ ಆಗಮಿಸಿದ್ದು ಉತ್ತಮ ನಿರ್ವಹಣೆ ನೀಡುತ್ತಿದೆ. ಜರ್ಮನಿ ಅ. 22ರಂದು ಕೋಲ್ಕತಾದಲ್ಲಿ ನಡೆಯುವ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬಲಿಷ್ಠ ಬ್ರಝಿಲ್ ಅಥವಾ ಹೊಂಡುರಾಸ್ ತಂಡವನ್ನು ಎದುರಿಸಲಿದೆ. ಬ್ರಝಿಲ್ ಮತ್ತು ಹೊಂಡುರಾಸ್ ನಡುವಣ ಪಂದ್ಯ ಕೊಚ್ಚಿಯಲ್ಲಿ ಅ. 18ರಂದು ನಡೆಯಲಿದೆ.ಒಂದು ವೇಳೆ ಪ್ರೀ ಕ್ವಾರ್ಟರ್ಫೈನಲ್ನಲ್ಲಿ ಬ್ರಝಿಲ್ ಗೆದ್ದರೆ ಫುಟ್ಬಾಲ್ ವಿಶ್ವದ ಎರಡು ಬಲಿಷ್ಠ ತಂಡಗಳಾದ ಬ್ರಝಿಲ್ ಮತ್ತು ಜರ್ಮನಿ ನಡುವಣ ಕ್ವಾರ್ಟರ್ಫೈನಲ್ ತೀವ್ರ ಹೋರಾಟದಿಂದ ಸಾಗುವ ಸಾಧ್ಯತೆಯಿದೆ.
ಕೊಲಂಬಿಯಾ ತಂಡದ ಕಳಪೆ ರಕ್ಷಣಾತ್ಮಕ ಆಟದ ಲಾಭ ಪಡೆದ ಜರ್ಮನಿಯ ಹೊಡೆತಗಾರರು ಭರ್ಜರಿಯಾಗಿ ಆಡಿದರು. ಕೊಲಂಬಿಯಾದ ಗೋಲ್ಕೀಪರ್ ಕೆವಿನ್ ಮಿಯರ್ ಅಥವಾ ರಕ್ಷಣಾ ಆಟಗಾರರ ವೈಫಲ್ಯದಿಂದಲೇ ಜರ್ಮನಿ ಎಲ್ಲ ನಾಲ್ಕು ಗೋಲು ದಾಖಲಿಸಿತ್ತು. ಕೊಲಂಬಿಯಾ ಆಟಗಾರರು ಯಾವುದೇ ರೀತಿಯಲ್ಲೂ ಜರ್ಮನಿಗೆ ಸರಿಸಾಟಿಯಾಗಿ ಆಡಲೇ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.