ಹೆಣ್ಣು ಪಿಶಾಚಿಗೆ ಹೆದರಿ ಹಳ್ಳಿ ತೊರೆದ ಗಂಡಸರು!
Team Udayavani, Oct 17, 2017, 7:05 AM IST
ಹೈದರಾಬಾದ್: ದೆವ್ವ, ಭೂತಗಳಿಗೆ ಹೆದರಿ ದೇವರು, ಮಾಟ, ಮಂತ್ರಗಳ ಮೊರೆ ಹೋಗುವುದನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಇಲ್ಲೊಂದು ಹಳ್ಳಿಯಲ್ಲಿ ದೆವ್ವವಿದೆ ಎಂಬುದನ್ನು ನಂಬಿರುವ ಅಲ್ಲಿನ ಗಂಡಸರೆಲ್ಲಾ ಹಳ್ಳಿಬಿಟ್ಟು ಪರಾರಿಯಾಗಿದ್ದಾರೆ!
ಅಚ್ಚರಿಯಾದರೂ ಇದು ಸತ್ಯ. ಹೀಗಾಗಿರುವುದು ತೆಲಂಗಾಣದ ನಿರ್ಮಲ ಜಿಲ್ಲೆಯ ಕಾಸಿಗುಡದಲ್ಲಿ. ಈ ಹಳ್ಳಿಯಲ್ಲಿ ಹೆಣ್ಣು ಪಿಶಾಚಿಯೊಂದು ನೆಲೆಯೂರಿದೆ ಎಂಬ ವದಂತಿ ಹರಡಿದ್ದು, ಈ ಪಿಶಾಚಿಯು ಪುರುಷ ದ್ವೇಷಿಯಾಗಿದ್ದು ಪುರುಷರನ್ನು ಒಬ್ಬೊಬ್ಬರಾಗಿ ಕೊಲ್ಲುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ, ಇತ್ತೀಚೆಗೆ, ಆ ಹಳ್ಳಿಯ ಇಬ್ಬರು ಸಹೋದರರು ಹಾಗೂ ಮತ್ತೂಬ್ಬ ವ್ಯಕ್ತಿ ಪ್ರತ್ಯೇಕ ಘಟನೆಗಳಲ್ಲಿ ನಿಗೂಢವಾಗಿ ಹತರಾಗಿರುವುದು ಈ ಪಿಶಾಚಿ ವದಂತಿಗಳಿಗೆ ಜೀವ ತುಂಬಿದೆ.
ಇದರಿಂದ ಭೀತಿಗೊಂಡು ದಿಕ್ಕೆಟ್ಟಿರುವ ಆ ಹಳ್ಳಿಯ ಗಂಡಸರು ದಿಕ್ಕಾಪಾಲಾಗಿ ಆ ಹಳ್ಳಿಯಿಂದ ಕಾಲ್ಕಿತ್ತಿದ್ದಾರೆ. ಆ ಪಿಶಾಚಿಯ ನಿರ್ಮೂಲನೆಯಾಗುವವರೆಗೂ ಹಳ್ಳಿಗೆ ಬರದಿರಲು ನಿರ್ಧರಿಸಿದ್ದಾರಂತೆ. ಒಟ್ಟಿನಲ್ಲಿ, ಈಗ ಆ ಹಳ್ಳಿಯಲ್ಲಿ ಹೆಂಗಸರೇ ಜೀವಿಸುತ್ತಿದ್ದಾರೆಂದು ಹೇಳಲಾಗಿದೆ. ಪಿಶಾಚಿಗಳು ಹೆಂಗಸರಿಗೆ ಏನೂ ಮಾಡುತ್ತಿಲ್ಲ ಎನ್ನುತ್ತಾರೆ ಅಲ್ಲಿನ ಮಹಿಳೆಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.