ದಿಲ್ಲಿಗಿಂತ ಕರಾಚಿ ಸೇಫ್!
Team Udayavani, Oct 17, 2017, 6:20 AM IST
ಹೊಸದಿಲ್ಲಿ: ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಹೊಸದಿಲ್ಲಿಯು ವಿಶ್ವದ ಇತರ ನಗರಗಳಿಗಿಂತ ಕಳಪೆ ನಗರವಾಗಿದೆ ಎಂದು ಖ್ಯಾತ ಮಾಧ್ಯಮ ಸಂಸ್ಥೆಯಾದ ಥಾಮ್ಸನ್ ರಾಯrರ್ಸ್ ಕೈಗೊಂಡಿದ್ದ ಸಮೀಕ್ಷೆಯೊಂದು ಹೇಳಿದೆ. ಈ ವಿಚಾರದಲ್ಲಿ ದಿಲ್ಲಿಗೆ ಹೋಲಿಸಿದರೆ ಪಾಕಿಸ್ಥಾನದ ಕರಾಚಿಯೇ ಮಹಿಳೆಯರ ಪಾಲಿಗೆ ಹೆಚ್ಚು ಸೇಫ್ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ಒಂದು ಕೋಟಿಗಿಂತಲೂ ಹೆಚ್ಚು ಜನರು ವಾಸವಾಗಿರುವ ವಿಶ್ವದ 19 ಮಹಾನಗರ ಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಥಾಮ್ಸನ್ ರಾಯrರ್ಸ್ ಸಂಸ್ಥೆ ಸಮೀಕ್ಷೆ ನಡೆ ಸಿತ್ತು. ಈ ನಗರಗಳಿಗೆ ಸಂಬಂಧಿಸಿದ ಸುಮಾರು 380 ತಜ್ಞರು ಈ ಬಗ್ಗೆ ಮತ ಚಲಾ ಯಿಸಿದ್ದರು. ಇವುಗಳ ಆಧಾರದ ಮೇಲೆ ಈ ಸಮೀಕ್ಷಾ ವರದಿಯನ್ನು ಸಂಸ್ಥೆ ತಯಾರಿಸಿದೆ.
ಅದರಂತೆ, ಮಹಿಳೆಯರ ಅಸುರಕ್ಷತೆ ವಿಚಾರದಲ್ಲಿ ದಿಲ್ಲಿಯು ಬ್ರೆಜಿಲ್ನ ಸಾವೊ ಪೌಲೊ ನಗರದ ಜತೆಗೆ ಸ್ಥಾನ ಪಡೆದು ಕೊಂಡಿದೆ. ಈ ಎರಡೂ ಮಹಾನಗರಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕಿರುಕುಳ, ಹಲ್ಲೆಯಂಥ ಪ್ರಕರಣಗಳು ನಡೆಯುವುದು ಸರ್ವೇ ಸಾಮಾನ್ಯವೆಂದು ಹೇಳಲಾಗಿದೆ.
ಇನ್ನು, ಒಟ್ಟಾರೆಯಾಗಿ ಮಹಿಳೆಯರ ಅಸ್ತಿತ್ವಕ್ಕೇ ಸಂಚಕಾರ ತರುವಂಥ ನಗರಗಳ ಪತ್ಯೇಕ ಪಟ್ಟಿಯನ್ನು ತಯಾರಿಸಲಾಗಿದ್ದು ಇದರಲ್ಲಿ ದಿಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಈಜಿಪ್ಟ್ನ ಕೈರೋ ಇದ್ದರೆ, ಆನಂತರದ ಎರಡು ಸ್ಥಾನ ಗಳಲ್ಲಿ ಮೆಕ್ಸಿಕೋ ಸಿಟಿ ಹಾಗೂ ಢಾಕಾ ನಗರ ಗಳಿವೆ. ಮಹಿಳೆಯರ ಸುಭದ್ರತೆ ವಿಚಾರದಲ್ಲಿ ಜಪಾನ್ನ ರಾಜಧಾನಿ ಟೋಕಿಯೋ ಮೊದಲ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.