ನೌಕಾಪಡೆಗೆ ಕಿಲ್ಟನ್ ಪವರ್
Team Udayavani, Oct 17, 2017, 6:00 AM IST
ವಿಶಾಖಪಟ್ಟಣ: ಸೇನೆಯ ಬಲ ಹೆಚ್ಚಳ ಹಾಗೂ ಆಧುನೀಕರಣದತ್ತ ಮಹತ್ವದ ಹೆಜ್ಜೆ ಇಡಲಾಗಿದ್ದು, ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ ಐಎನ್‌ಎಸ್ ಕಿಲ್ಟನ್ ಸೋಮವಾರ ನೌಕಾಪಡೆಗೆ ಸೇರ್ಪಡೆಗೊಂಡಿದೆ.
ವಿಶಾಖಪಟ್ಟಣದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಹಸ್ಯವಾಗಿ ಚಲಿಸಬಲ್ಲ ಈ ಯುದ್ಧನೌಕೆ ಯನ್ನು ನೌಕಾಪಡೆಗೆ ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ. ಶತ್ರು ನೌಕೆಗಳನ್ನು ಟಾರ್ಗೆಟ್ ಮಾಡುವಲ್ಲಿ ಹಾಗೂ ಭಾರತೀಯ ಯುದ್ಧನೌಕೆಗಳನ್ನು ರಕ್ಷಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ಅಷ್ಟೆ ಅಲ್ಲ, ಹೆಚ್ಚುತ್ತಿರುವ ಭಾರತದ ನೌಕಾಶಕ್ತಿಯ ಕನ್ನಡಿಯಾಗಿದೆ.
ಕಿಲ್ಟನ್‌ನಲ್ಲಿ ಏನಿವೆ?: ನೌಕೆಯಲ್ಲಿ ಭಾರೀ ತೂಕದ ನೌಕಾ ಸ್ಫೋಟಕಗಳು, ಎಎಸ್‌ಡಬ್ಲ್ಯು ರಾಕೆಟ್‌ಗಳು, 76 ಎಂಎಂ ಮಧ್ಯಮ ವ್ಯಾಪ್ತಿಯ ಗನ್, 2 ಮಲ್ಟಿ ಬ್ಯಾರೆಲ್ 30 ಎಂಎಂ ಗನ್, ಅಗ್ನಿ ನಿರೋಧಕ ವ್ಯವಸ್ಥೆ, ಕ್ಷಿಪಣಿ ನಾಶದ ರಾಕೆಟ್, ಸುಧಾರಿತ ಇಎಸ್‌ಎಂ(ಎಲೆಕ್ಟ್ರಾನಿಕ್ ಸಪೋರ್ಟ್ ಮೆಷರ್) ವ್ಯವಸ್ಥೆ ಹೊಂದಿದೆ.
ಐಎನ್‌ಎಸ್ ಕಿಲ್ಟನ್ ವಿಶೇಷ
– ಪ್ರಾಜೆಕ್ಟ್ 28ರಡಿ ನಿರ್ಮಾಣವಾದ 4 ಎಎಸ್‌ಡಬುÉ é ಗಸ್ತುನೌಕೆಗಳಲ್ಲಿ ಒಂದು
– ಸಹೋದರ ನೌಕೆಗಳಾದ ಐಎನ್‌ಎಸ್ ಕಮೋರ್ತಾ, ಐಎನ್‌ಎಸ್ ಕಡ್ಮಟ್ ಈಗಾ ಗಲೇ ನೌಕಾಪಡೆಗೆ ಸೇರಿವೆ.
– ನೌಕಾಪಡೆಯ ಡೈರೆಕ್ಟೊರೇಟ್ ಆಫ್ ನೇವಲ್ ಡಿಸೈನ್ ವಿಭಾಗ ಇದನ್ನು ವಿನ್ಯಾಸಗೊಳಿಸಿದೆ.
– ಸ್ವೀಡನ್‌ನಿಂದ ಆಮದು ಮಾಡಲಾದ ಕಾರ್ಬನ್ ಫೈಬರ್ ಸಮ್ಮಿಳಿತ ಬಿಡಿಭಾಗಗಳಿವೆ.
– ರಹಸ್ಯ ಚಲನವಲನದ ಗುಣ ವಿಶೇಷ ಸುಧಾರಿಸಲು, ತೂಕ ಕಡಿಮೆ ಮಾಡಲು ಹಾಗೂ ನಿರ್ವಹಣ ವೆಚ್ಚ ತಗ್ಗಿಸಲು ಸಹಕಾರಿಯಾಗಿದೆ.
ಐಎನ್‌ಎಸ್ ಕಿಲ್ಟನ್ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಿದೆ. ಅಲ್ಲದೆ, ಸಂಪೂರ್ಣವಾಗಿ ದೇಶೀಯವಾಗಿಯೇ ನಿರ್ಮಿಸಲ್ಪಡುವ ಮೂಲಕ ಇದು ನಮ್ಮ ಮೇಕ್ ಇನ್ ಇಂಡಿಯಾ ಯೋಜನೆಗೂ ಹೊಸ ಹೊಳಪನ್ನು ನೀಡಿದೆ.
– ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.