ಪವಾಡ ಸದೃಶವಾಗಿ ಬದುಕಿದ ಸಂಜನಾ


Team Udayavani, Oct 17, 2017, 12:01 PM IST

lead-mohan.jpg

ಬೆಂಗಳೂರು: ಮಕ್ಕಳು ದೇವರಿಗೆ ಸಮಾನರು, ಅವರಿಗೆ ಆಪತ್ತು ಬಂದಾಗ ಸ್ವತಃ ದೇವರೇ ಅವರನ್ನು ರಕ್ಷಣೆ ಮಾಡುತ್ತಾನೆ ಎಂದು ಹೇಳಲಾಗುತ್ತದೆ. ಇದರ ಜೀವಂತ ನಿದರ್ಶನ ಕಂಡು ಬಂದಿದ್ದು, ಈಜಿಪುರದಲ್ಲಿ ಸೋಮವಾರ ಗ್ಯಾಸ್‌ ಸ್ಫೋಟದ ಸಂದರ್ಭದಲ್ಲಿ ನಡೆದ ಎರಡಂತಸ್ತಿನ ಕಟ್ಟಡ ಕುಸಿದ ಅವಘಡದಲ್ಲಿ.

ಹೌದು ! ಏಳು ಮಂದಿಯನ್ನು ಬಲಿ ಪಡೆದ ಕಟ್ಟಡ ಕುಸಿದ ಘಟನೆಯಲ್ಲಿ ಮೂರು ವರ್ಷದ ಕಂದಮ್ಮ ಸಂಜನಾ ಪವಾಡ ಸದೃಶವಾಗಿ ಬದುಕಿದ್ದಾಳೆ. ಅಗ್ನಿಶಾಮಕ ಹಾಗೂ ಎನ್‌ಡಿಆರ್‌ಎಫ್ ರಕ್ಷಣಾ ತಂಡ ಆ ಕಂದಮ್ಮನ್ನು ರಕ್ಷಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸತತ 40 ನಿಮಿಷಗಳ ಕಾರ್ಯಾಚರಣೆ ಬಳಿಕ ರಕ್ಷಣಾ ತಂಡ ಕಟ್ಟಡದ ಅವಶೇಷಗಳಡಿಯಿಂದ ಸಂಜನಾಳನ್ನು ಹೊರಗೆ ತೆಗೆದಾಗ ನೆರೆದಿದ್ದವರ ಮನ-ಮನಸ್ಸುಗಳು ಕಲುಕಿದವು. ಎಲ್ಲರ ಕಣ್ಣಾಲಿಗಳು ತೇವಗೊಂಡಿದ್ದವು. ಮಗುವನ್ನು ಕೈಯಲ್ಲಿತ್ತೆಕೊಂಡು ಹೊರ ಬಂದ ಅಗ್ನಿಶಾಮಕ ದಳದ ಅಧಿಕಾರಿ ಭಾವುಕರಾಗಿಬಿಟ್ಟರು. 

ಮೃತ ದೇಹಗಳನ್ನು ಹೊರ ತೆಗೆಯಲು ಒಂದೆಡೆ ರಕ್ಷಣಾ ತಂಡ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುತ್ತಿದ್ದರೆ, ಇದೇ ವೇಳೆ ನೆರೆ ಮನೆಯ ವ್ಯಕ್ತಿಯೊಬ್ಬ ಮಗು ಇರುವುದನ್ನು ರಕ್ಷಣಾ ಸಿಬ್ಬಂದಿಗೆ ತಿಳಿಸಿದರು. ಮತ್ತೂಂದೆಡೆ ಸುಮಾರು 9.50ರ ಸುಮಾರಿಗೆ ಮೂರು ವರ್ಷದ ಸಂಜನಾ ಸುಟ್ಟಗಾಯಗಳಿಂದ ಅಲ್ಮೆರಾ ಕೆಳಗೆ ಸಿಲುಕಿ ನರಳುತ್ತ, ಸಣ್ಣ ದನಿಯಲ್ಲಿ ಅಮ್ಮ.. ಮಾಮಾ ಎನ್ನುತ್ತಿದ್ದಳು.

ಕೂಡಲೇ ಎಚ್ಚೆತ್ತ ಸಿಬ್ಬಂದಿ ಜಾಗರೂಕತೆಯಿಂದ ಕಾರ್ಯಾಚರಣೆ ಮುಂದುವರಿಸಿದರು. ಮಗುವಿನ ದನಿ ಕೇಳಿದ ಜಾಗದ ಕಡೆ ಹೋಗಿ ಅವಶೇಷಗಳನ್ನು ಯಂತ್ರೋಪಕರಣಗಳಿಂದ ತೆರವುಗೊಳಿಸಿದರು. ಆಗ ಕಂಡ ಸಣ್ಣ ಬೀರುಕಿನಲ್ಲಿ ಮಗು ಇರುವುದನ್ನು ಖಾತ್ರಿ ಪಡಿಸಿಕೊಂಡರು. ಅಷ್ಟರಲ್ಲಿ ಸಂಜನಾಳ ಮೇಲೆ ಒಂದಷ್ಟು ಅವಶೇಷಗಳು ಬಿದ್ದು ರಕ್ತಸ್ರಾವವಾಗಿತ್ತು. ಕೂಡಲೇ ಜೋರಾಗಿ ಕೂಗಿಕೊಂಡ ರಕ್ಷಣಾ ಸಿಬ್ಬಂದಿ ಮಗು ಇರುವುದನ್ನು ಖಾತ್ರಿ ಪಡಿಸಿದಲ್ಲದೇ, ಬದುಕಿದೆ ಎಂದರು.

ನಂತರ ಇಡೀ ರಕ್ಷಣಾ ತಂಡ ಮಗುವಿನ ರಕ್ಷಣೆಯಲ್ಲಿ ತೊಡಗಿತು. ಕೊನೆಗೆ ಸತತ 40 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ 10.40ರ ಸುಮಾರಿಗೆ ಮಗುವಿಗೆ ಯಾವುದೇ ರೀತಿಯ ತೊಂದರೆಯಾಗದ್ದಂತೆ ಸುರಕ್ಷಿತವಾಗಿ ರಕ್ಷಿಸಿದರು. ಮಲಗಿದ್ದ ಸಂಜನಾಳ ಮೇಲೆ ಲಂಬವಾಗಿ ಅಲ್ಮೆರಾ ಬಿದಿದ್ದೆ. ಇದರ ಮೇಲೆ ಗೋಡೆ ಬಿದ್ದಿತ್ತು.

ಹೀಗಾಗಿ ಸಂಜಾನಾಳಿಗೆ ಹೆಚ್ಚಿನ ಹಾನಿ ಆಗಲಿಲ್ಲ. ಆದರೆ, ಸಿಲಿಂಡರ್‌ ಸ್ಫೋಟದಿಂದ ಆಕೆಯ ಮುಖ, ಕೈ ಮತ್ತು ಕಾಲುಗಳು ಶೇ.60ರಷ್ಟು ಸುಟ್ಟಿದೆ. ಇನ್ನು ಅಡುಗೆ ಮನೆಯಲ್ಲಿ ಸಿಲುಕಿದ್ದ ಈಕೆಯ ತಾಯಿ ಅಶ್ವಿ‌ನಿಯ ಮೃತ ದೇಹವನ್ನು ಹೊರ ತೆಗೆಯಲಾಯಿತು ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ವಿವರಿಸಿದರು.

ಕಂಬನಿ ಮಿಡಿದ ಸ್ಥಳೀಯರು: ಇತ್ತ ರಕ್ಷಿಸಿದ ಸಂಜಾನಾಳನ್ನು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಮ್ಮ ತೊಳಿನಲ್ಲಿ ಕರೆ ತರುವಾಗ ಕಂದಮ್ಮ ಸ್ಥಿತಿ ಕಂಡು ಅವರೇ ಭಾವುಕರಾದರು. ಮತ್ತೂಂದೆಡೆ ನೆರೆದಿದ್ದ ಸ್ಥಳೀಯರ ಕಣ್ಣಾಲಿಗಳಲ್ಲಿ ನೀರು ಜಿನುಗುತ್ತಿತ್ತು. ಜತೆಗೆ ಸ್ಥಳೀಯರು ಶೆಳ್ಳೆ ಹೊಡೆದು ರಕ್ಷಣಾ ಸಿಬ್ಬಂದಿ ಕಾರ್ಯವನ್ನು ಶ್ಲಾ ಸಿದರು.

ಕೂಡಲೇ ಮಗುವಿಗೆ ಆ್ಯಂಬುಲೆನ್ಸ್‌ನಲ್ಲಿ ಆಮ್ಲಜನಕ ನೀಡಿ ಚಿಕಿತ್ಸೆ ನೀಡಿದರು. ಇನ್ನು ಅವಘಡ ಕುರಿತು ವಿಷಯ ತಿಳಿಯುತ್ತಿದ್ದಂತೆ ಮೃತ ಸಂಬಂಧಿಕರು, ಆಪ್ತರು ಘಟನಾ ಸ್ಥಳದ ಬಳಿ ಆಗಮಿಸಿದರು. ಮೃತ ದೇಹಗಳನ್ನು ಕಂಡು ಗೋಳಾಡಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಅಗ್ನಿಶಾಮಕ ದಳದ ಉಪ ಆಯುಕ್ತ ವರದರಾಜನ್‌, ಸುಟ್ಟ ಗಾಯಗಳಿಂದ ಆಕೆ ನರಳುತ್ತಿದ್ದಳು. ಈ ಮಗುವಿನ ಸ್ಥಿತಿಯನ್ನು ನನ್ನ ಕೈಯಲ್ಲಿ ನೋಡಲು ಸಾಧ್ಯವಾಗಲಿಲ್ಲ.

ಆದರೆ, ಆಕೆಯನ್ನು ಆ್ಯಂಬುಲೆನ್ಸ್‌ನಲ್ಲಿ ಕೂರಿಸಿದಾಗ, “ಏನು ಆಗಿಲ್ಲ ಅಳಬೇಡ ಮಗು’ ಎಂದು ಹೇಳುವಾಗ ನೋವಾಯಿತು. ಆ ಮಗು ಬೇಗ ಗುಣಮುಖವಾಗಲಿ ಎಂದು ಹಾರೈಸುತ್ತೇನೆ. ಜತೆಗೆ ಸ್ಥಳೀಯರು ಹೇಳುವ ಪ್ರಕಾರ, ಸಂಜನಾ ಪೋಷಕರು ದೀಪಾವಳಿ ಹಬ್ಬಗೆ ಆಕೆಯ ತಾತನ ಮನೆಗೆ ಹೋಗಲು ಸಿದ್ಧತೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ ಎಂದರು.

ಮದುವೆ ನಿಶ್ಚಯವಾಗಿತ್ತು: ಘಟನೆಯಲ್ಲಿ ಮೃತ ಪಟ್ಟ ಪವನ್‌ ಕಲ್ಯಾಣ್‌ಗೆ ಮದುವೆ ನಿಶ್ಚಯವಾಗಿತ್ತು. ಈ ಕುರಿತು ಚರ್ಚಿಸಲು ಮಲಾಶ್ರೀ ಮತ್ತು ಪ್ರಸಾದ್‌ ಭಾನುವಾರ ರಾತ್ರಿ ಬಂದಿದ್ದರು. ಸೋಮವಾರ ಬೆಳಗ್ಗೆ ಮಾತುಕತೆ ನಡೆಸಿ ಹೋಗಲು ನಿರ್ಧರಿಸಿದ್ದರು. ಈ ಮಧ್ಯೆ ಈ ರೀತಿ ದುರ್ಘ‌ಟನೆ ನಡೆದಿದೆ.

ರಕ್ಷಣಾ ಸಿಬ್ಬಂದಿಗೆ ಗಾಯ: ಇನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ 50ಕ್ಕೂ ಅಧಿಕ ಮಂದಿಯ ಪೈಕಿ ಕಾರ್ಯಾಚರಣೆ ವೇಳೆ ಮೂವರು ಗಾಯಗೊಂಡಿದ್ದರು. ಚಿಕ್ಕಚೂಡಯ್ಯ (32), ಸುಭಾನ್‌ ಖಾನ್‌ (34),ಸುರೇಶ್‌ ರಾವ್‌ (45), ಕೃಷ್ಣಪ್ಪ (52) ಗಾಯಗೊಂಡಿದ್ದರು. ಮನೆ ಕುಸಿದು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೂವರನ್ನು ಮೊದಲಿಗೆ ರಕ್ಷಿಸಲಾಯಿತು. ನಂತರ ಮಗು ರಕ್ಷಿಸುವ ವೇಳೆ ಆ ಭರದಲ್ಲಿ ಮುಂದಕ್ಕೆ ನುಗ್ಗಿದಾಗ ಅರ್ಥ ಕುಸಿದಿದ್ದ ಬೀಮ್‌ ಸಂಪೂರ್ಣವಾಗಿ ಕುಸಿದರಿಂದ ತಂಡದ ನಾಲ್ಕು ಮಂದಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

* ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23-bng

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

22-bng

Bengaluru: ಏರ್ಪೋರ್ಟ್‌ ಟಿ-2ಗೆ ವರ್ಟಿಕಲ್‌ ಗಾರ್ಡನ್‌ ರಂಗು

21-bng

Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ

20-flipama

Bengaluru: 19 ಕಡೆ ಫ್ಲಿಪ್‌ ಕಾರ್ಟ್‌, ಅಮೆಜಾನ್‌ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ

19-bng

Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ

ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ

24-tma-pai

Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ

12(2)

Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.