ಅರಣ್ಯ-ವನ್ಯಜೀವಿಗಳನ್ನು ಕಾಪಾಡಿ
Team Udayavani, Oct 17, 2017, 12:57 PM IST
ಹುಣಸೂರು: ಇಂಗ್ಲೀಷ್ ಭಾಷೆ ಕಲಿತರೆ ಸಾಕು ಎನ್ನುವ ಬದಲಿಗೆ ವಿದ್ಯಾರ್ಥಿಗಳಿಗೆ ನಮ್ಮ ಸುತ್ತಮುತ್ತಲಿನ ಪರಿಸರ, ಜನರ ಬದುಕಿನ ಬಗ್ಗೆ ತಿಳಿಸಿಕೊಡಬೇಕಿದ್ದು ವನ್ಯಜೀವಿಗಳು ಉಳಿದರೆ ಮಾತ್ರ ನಾವು ಎಂಬುದನ್ನು ಮನವರಿಕೆ ಮಾಡಿಕೊಡಬೇಕೆಂದು ನೂತನ ಉಪ ವಿಭಾಗಾಧಿಕಾರಿ ನಿತೀಶ್ ಅಭಿಪ್ರಾಯಪಟ್ಟರು.
ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶದ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 63ನೇ ವನ್ಯಜೀವಿ ಸಪ್ತಾಹದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು. ಸಾಕಷ್ಟು ಮಂದಿಗೆ ಅರಣ್ಯ ಮತ್ತು ವನ್ಯಜೀವಿ ಮಹತ್ವದ ಬಗ್ಗೆ ಸಾಕಷ್ಟು ಅರಿವಿರುವುದಿಲ್ಲ. ಹಿರಿಯರಿಗಿಂತ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ವನ್ಯಜೀವಿ ಪ್ರೇಮ ಬೆಳೆಸುವುದು, ಪರಿಸರದ ಬಗ್ಗೆ ಜಾಗತಿ ಮೂಡಿಸುವುದು ಅತ್ಯವಶ್ಯ ಎಂದರು.
ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್ ಪ್ರಸನ್ನಕುಮಾರ್ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕುರಿತು ಮಾಹಿತಿ ನೀಡಿ, ದೇಶದ ಪ್ರತಿಷ್ಠಿತ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ನಾಗರಹೊಳೆ ಅತಿಪ್ರಮುಖವಾದುದು. ಪ್ರಪಂಚದ 7 ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿರುವ ನೀಲಗಿರಿ ಜೀವ ವೈವಿಧ್ಯದ ನಾಗರಹೊಳೆ ಉತ್ತಮ ಅರಣ್ಯ ಸಂಪತ್ತನ್ನು ಹೊಂದಿದೆ ಎಂದು ಹೇಳಿದರು.
ಹುಲಿ ಜೊತೆಗೆ ಆನೆ, ಚಿರತೆ, ಕರಡಿ, ಕಾಡುನಾಯಿ, ಕಾಡೆಮ್ಮೆ, ಜಿಂಕೆ, ಕಡವೆ, ನವಿಲು, ಸಾರಂಗ, ಕಾಡುಕುರಿ ಸೇರಿದಂತೆ ಅನೇಕ ಅಪರೂಪದ ಪ್ರಾಣಿಗಳಿವೆ. ಇಲ್ಲಿ ಅಂದಾಜು 1200 ಆನೆ, 91 ಹುಲಿಗಳನ್ನು ಗಣತಿಯಲ್ಲಿ ಗುರುತಿಸಲಾಗಿದೆ. ತೇಗ, ಬೀಟೆ, ಹೊನ್ನೆ, ಮತ್ತಿ, ನಂದಿ, ಶ್ರೀಗಂಧ ಸೇರಿದಂತೆ ಅನೇಕ ಜಾತಿಯ ಮರಗಳು, ಪಕ್ಷಿಸಂಕುಲಗಳು ಇಲ್ಲಿವೆ ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಅರಣ್ಯ ಪ್ರೇಮ ಬೆಳೆಸಲು ಚಿಣ್ಣರ ವನ ದರ್ಶನವೆಂಬ ಕಾರ್ಯಕ್ರಮ ರೂಪಿಸಲಾಗಿದ್ದು ಅರಣ್ಯ ಮತ್ತು ವನ್ಯಜೀವಿ ರಕ್ಷಣೆಗೆ ಎಲ್ಲರ ಸಹಕಾರ ಅತ್ಯಗತ್ಯವೆಂದರು.
ಅರಣ್ಯ ಸಿಬ್ಬಂದಿಗೆ ಸನ್ಮಾನ: ನಾಗರಹೊಳೆ ಉದ್ಯಾನ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಅನುಪಮ ಸೇವೆಸಲ್ಲಿಸುತ್ತಿರುವ ವಿವಿಧ ವಲಯಗಳ ಅರಣ್ಯ ರಕ್ಷಕರಾದ ಆನಂದ್ ಈಶ್ವರ ಕಬಾಡಗಿ, ಗೋಪಾಲ ಲಮಾಣಿ, ಸಂತೋಷಕುಮಾರ್, ಜವರಯ್ಯ, ಗಿಡ್ಡರೇಗೌಡ, ಎಂ.ಕೆ.ಸ್ವಾಮಿ, ಅರಣ್ಯ ವೀಕ್ಷಕರಾದ ಶಿವರಾಜು, ನವೀನ್, ಶಿವಣ್ಣ, ಪುಟ್ಟಬಸವ, ಭದ್ರ, ವಾಹನ ಚಾಲಕ ಗಣೇಶ, ದಿನಗೂಲಿ ನೌಕರ ಸುರೇಶ ಜೆ.ಟಿ, ಕೇರ್ ಟೇಕರ್ ಮಹದೇವರನ್ನು ಸನ್ಮಾನಿಸಿದರು.
ತಾಪಂ ಉಪಾಧ್ಯಕ್ಷ ಪ್ರೇಮ್ಕುಮಾರ್, ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪುಟ್ಟಶೆಟ್ಟಿ, ವಿಶ್ವನಾಥ್, ಎಸಿಎಫ್ ಪೌಲ್ ಅಂಟೋನಿ, ಆರ್ಎಫ್ಒ ಗಳಾದ ಸುರೇಂದ್ರ, ಶಿವರಾಂ, ವನ್ಯಜೀವಿ ಪರಿಪಾಲಕಿ ಡಾ.ಕೃತಿಕಾ ಮಾತನಾಡಿದರು. ಆರ್ಎಫ್ಒ ಗಳಾದ ಮಧುಸೂದನ್, ಕಿರಣ್ಕುಮಾರ್, ಅರವಿಂದ್, ರುದ್ರೇಶ್, ಎಆರ್ಎಫ್ಒ, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅರಣ್ಯವನ್ನು ಬೇಸಿಗೆ ಕಾಲದಲ್ಲಿ ಬೆಂಕಿ ತಡೆಗಟ್ಟಲು ಸಾಕಷ್ಟು ವೀಕ್ಷಣಾ ಗೋಪುರಗಳು, ಬೆಂಕಿ ರೇಖೆ ಹಾಗೂ ಬೆಂಕಿ ಕಾವಲುಗಾರರಿಂದ ಅರಣ್ಯವನ್ನು ಸಂರಕ್ಷಿಸಲಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ನೀಗಿಸಲು 19 ಸೋಲಾರ್ ಪಂಪ್ಸೆಟ್ ನಿರ್ಮಿಸಿ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಆನೆ ಕಂದಕ, ರೈಲ್ವೆ ಹಳಿ ಬಳಸಿ ತಡೆಗೋಡೆ ನಿರ್ಮಿಸಲಾಗಿದೆ.
-ಪ್ರಸನ್ನಕುಮಾರ್, ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Renukaswamy Case:ಬೆನ್ನು ನೋವು ಬಳಿಕ ದರ್ಶನ್ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.