ಏಶ್ಯ ಕಪ್ ಹಾಕಿ :ಅಜೇಯ ಭಾರತಕ್ಕೆ ಕೊರಿಯಾ ಎದುರಾಳಿ
Team Udayavani, Oct 18, 2017, 12:13 PM IST
ಢಾಕಾ: ಏಶ್ಯ ಕಪ್ ಹಾಕಿ ಪಂದ್ಯಾ ವಳಿಯ “ಸೂಪರ್-4′ ಹೋರಾಟಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇಲ್ಲಿ ಅಜೇಯ ಭಾರತ, ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾ, ಮಲೇಶ್ಯ ಮತ್ತು ಪಾಕಿಸ್ಥಾನ ತಂಡಗಳು ಸೆಣಸಲಿದ್ದು, ಬುಧವಾರದಿಂದ ಸ್ಪರ್ಧೆಗಳು ಮೊದಲ್ಗೊಳ್ಳಲಿವೆ. ಭಾರತದ ಮೊದಲ ಎದು ರಾಳಿ ದಕ್ಷಿಣ ಕೊರಿಯಾ.
“ಬಿ’ ವಿಭಾಗದ ಲೀಗ್ ಹಂತದಲ್ಲಿ ದಕ್ಷಿಣ ಕೊರಿಯಾ 2 ಜಯ ಹಾಗೂ ಒಂದು ಸೋಲನ್ನು ಕಂಡು ದ್ವಿತೀಯ ಸ್ಥಾನ ಗಳಿಸಿದೆ. ಭಾರತದಂತೆ ಮೂರನ್ನೂ ಗೆದ್ದಿರುವ ಮಲೇಶ್ಯ ಅಗ್ರಸ್ಥಾನಿ. ಇದು ರೌಂಡ್ ರಾಬಿನ್ ಮಾದರಿಯ ಸುತ್ತಾಗಿದ್ದು, ಎಲ್ಲ ತಂಡಗಳು ಎಲ್ಲರ ವಿರುದ್ಧ ಒಂದೊಂದು ಪಂದ್ಯವನ್ನು ಆಡಲಿವೆ. ಭಾರತ-ಪಾಕಿಸ್ಥಾನ ಮತ್ತೆ ಮುಖಾಮುಖೀಯಾಗುವುದು ಈ ಸುತ್ತಿನ ವಿಶೇಷ. ಈ ಪಂದ್ಯ ಅ. 21ರಂದು ನಡೆಯಲಿದೆ.
ಭಾರತ ಲೀಗ್ ಹಂತದ ಸಾಧನೆಯನ್ನೇ ಮುಂದುವರಿಸುವ ವಿಶ್ವಾಸದಲ್ಲಿದೆ. ರಮಣ್‌ದೀಪ್ ಸಿಂಗ್, ಆಕಾಶ್‌ದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ಚಿಂಗ್ಲೆನ್ಸಾನ ಸಿಂಗ್ ಅವರೆಲ್ಲ ಫೀಲ್ಡ್ ಗೋಲುಗಳಲ್ಲಿ ಮಿಂಚು ಹರಿಸಿದ್ದಾರೆ. ಸರ್ದಾರ್ ಸಿಂಗ್, ನಾಯಕ ಮನ್‌ಪ್ರೀತ್ ಸಿಂಗ್ ಅವರೆಲ್ಲ ಮಿಡ್‌ಫಿàಲ್ಡ್‌ನಲ್ಲಿ ಉತ್ತಮ ನಿಯಂತ್ರಣ ಸಾಧಿಸುತ್ತಿದ್ದಾರೆ. ಅಮಿತ್ ರೋಹಿದಾಸ್, ಹರ್ಮನ್‌ಪ್ರೀತ್ ಸಿಂಗ್, ದೀಪ್ಸನ್ ಟಿರ್ಕಿ ಸಾಧನೆಯೂ ಗಮನಾರ್ಹ ಮಟ್ಟದಲ್ಲಿದೆ. ಗೋಲಿ ಪಿ.ಆರ್. ಶ್ರೀಜೇಶ್ ಗೈರಲ್ಲಿ ಸೂರಜ್ ಕರ್ಕೇರ, ಆಕಾಶ್ ಚಿಕ್ತೆ ಅವರ ಕೀಪಿಂಗ್ ಮೇಲೆ ವಿಶ್ವಾಸ ಇರಿಸಬಹುದಾಗಿದೆ. ಲೀಗ್ ಹಂತದಲ್ಲಿ ಇವರು ಬಿಟ್ಟುಕೊಟ್ಟದ್ದು ಕೇವಲ 2 ಗೋಲು ಮಾತ್ರ.
ಆದರೆ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿಕೊಳ್ಳುವಲ್ಲಿ ಭಾರತ ಎಡವುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಿಕೊಂಡರೆ ಭಾರತದಿಂದ ದೊಡ್ಡ ಮಟ್ಟದ ಹೋರಾಟವನ್ನು ನಿರೀಕ್ಷಿಸಬಹುದು.ಬುಧವಾರದ ಇನ್ನೊಂದು ಪಂದ್ಯ ಪಾಕಿಸ್ಥಾನ-ಮಲೇಶ್ಯ ನಡುವೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.