ರೋಹಿತ್ ದಾಖಲೆ ರೈಡ್ ಯುಪಿಗೆ 24-64 ಅಂಕಗಳ ಸೋಲು
Team Udayavani, Oct 18, 2017, 12:19 PM IST
ಪುಣೆ: ನಾಯಕ ರೋಹಿತ್ ಕುಮಾರ್ ಅವರ ದಾಖಲೆಯ ರೈಡಿಂಗ್ ಅಂಕ (30 ಅಂಕ) ದಿಂದ ಬೆಂಗಳೂರು ಬುಲ್ಸ್ 5ನೇ ಆವೃತ್ತಿ ಪ್ರೊ ಕಬಡ್ಡಿಯ ಪುಣೆ ಚರಣದಲ್ಲಿ 64-24ರಿಂದ ಯುಪಿ ಯೋಧಾ ತಂಡವನ್ನು ಸೋಲಿಸಿದೆ. ಆದರೆ ಬೆಂಗಳೂರು ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವುದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.
ಈ ಪಂದ್ಯದಲ್ಲಿ ರೋಹಿತ್ ಕುಮಾರ್ ಅವರದೇ ಗರ್ಜನೆ. ಬೆಂಗಳೂರು ಗಳಿಸಿದ 64 ಅಂಕದಲ್ಲಿ ಅರ್ಧದಷ್ಟು ಅಂದರೆ 32 ಅಂಕ ರೋಹಿತ್ ಅವರದೇ ಆಗಿದೆ. ಈ ಮೂಲಕ ರೋಹಿತ್ ಯುಪಿ ತಂಡದ ರಿಷಾಂಕ್ ದೇವಾಡಿಗ ಜೈಪುರ ವಿರುದ್ಧ ನಿರ್ಮಿಸಿದ್ದ ಪಂದ್ಯವೊಂದರ ಗರಿಷ್ಠ 28 ಅಂಕಗಳ ದಾಖಲೆಯನ್ನು ಅಳಿಸಿ ಹಾಕಿದರು.
ದಿನದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ಪುನೇರಿ ಪಲ್ಟಾನ್ಸ್ ತಂಡವು ತನ್ನ ವಲಯದ ದ್ವಿತೀಯ ಸ್ಥಾನಿ ಹರಿಯಾಣ ಸ್ಟೀಲರ್ಗೆ 27-31 ಅಂಕಗಳಿಂದ ಶರಣಾಗಿದೆ. ಈ ಗೆಲುವಿನಿಂದ ಹರಿಯಾಣ ಲೀಗ್ ಹಂತದ ಹೋರಾಟ ಮುಗಿಸಿದ್ದು ಆಡಿದ 22 ಪಂದ್ಯಗಳಿಂದ 79 ಅಂಕ ಗಳಿಸಿದೆ. ಪುನೇರಿ ತಂಡಕ್ಕೆ ಇನ್ನೆರಡು ಪಂದ್ಯ ಬಾಕಿ ಉಳಿದಿದ್ದು ಸದ್ಯ 74 ಅಂಕ ಹೊಂದಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಪುನೇರಿ ಗೆದ್ದರೆ ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ. ಸದ್ಯ ಅಗ್ರಸ್ಥಾನದಲ್ಲಿರುವ ಗುಜರಾತ್ 82 ಅಂಕ ಹೊಂದಿದೆ. ಶುಕ್ರವಾರ ಲೀಗ್‌ನ ಕೊನೆಯ ಪಂದ್ಯದಲ್ಲಿ ಪುನೇರಿ ತಂಡವು ಗುಜರಾತ್ ತಂಡವನ್ನು ಎದುರಿಸಲಿದೆ.
ಆರಂಭದಲ್ಲಿಯೇ ಅಬ್ಬರ
ಪಂದ್ಯದ ಆರಂಭದಿಂದಲೇ ಬುಲ್ಸ್ ಭಾರೀ ಹೋರಾಟ ಪ್ರದರ್ಶಿಸಿತು. ಹಂತ ಹಂತವಾಗಿ ಅಂಕ ಗಳಿಕೆಯಲ್ಲಿ ಭಾರೀ ಅಂತರವನ್ನು ಪಡೆಯುತ್ತ¤ ಸಾಗಿತು. ಅತ್ತ ಯೋಧಾ ತಂಡ ವೈಫಲ್ಯಕ್ಕೆ ತುತ್ತಾಗಿತ್ತು. ಹೀಗಾಗಿ ಮೊದಲ ಅವಧಿಯ ಅಂತ್ಯದಲ್ಲಿ ಬುಲ್ಸ್ 27-10ರಿಂದ ಮುನ್ನಡೆ ಪಡೆದಿತ್ತು. ಈಗಾಗಲೇ ಪ್ಲೇ ಆಫ್ಗೆ ತೇರ್ಗಡೆಯಾಗಿದ್ದರಿಂದ ಯುಪಿ ಯೋಧಾ ತಂಡ ತನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿತ್ತು.
2ನೇ ಅವಧಿಯಲ್ಲೂ ಮಿಂಚದ ಯುಪಿ: 2ನೇ ಅವಧಿಯ ಆರಂಭದಲ್ಲಿ ಯೋಧಾ ತಿರುಗೇಟು ನೀಡುವ ಸೂಚನೆ ನೀಡಿತ್ತು. ಆದರೆ ಬುಲ್ಸ್ ಅದಕ್ಕೆ ಅವಕಾಶ ನೀಡಲಿಲ್ಲ. ಒಂದರ ಹಿಂದೆ ಒಂದರಂತೆ ಒಟ್ಟು 5 ಬಾರಿ ಯೋಧಾ ತಂಡವನ್ನು ಆಲೌಟ್ ಮಾಡಿತ್ತು. ಆದರೆ ಬುಲ್ಸ್ ಮಾತ್ರ ಒಮ್ಮೆಯೂ ಆಲೌಟ್ ಆಗದೇ ಕೊನೆಯವರೆಗೂ ರೋಚಕವಾಗಿ ಹೋರಾಟ ಪ್ರದರ್ಶಿಸಿತು.
ಈ ಗೆಲುವಿನ ಮೂಲಕ ಬೆಂಗಳೂರು ತಂಡ 21 ಪಂದ್ಯಗಳಿಂದ 8 ಜಯ, 11 ಸೋಲು, 2 ಟೈ ಸಹಿತ ಒಟ್ಟು 54 ಅಂಕ ಸಂಪಾದಿಸಿ 4ನೇ ಸ್ಥಾನಕ್ಕೆ ಜಿಗಿದಿದೆ. ಅತ್ತ ಯೋಧಾ ತಂಡ 22 ಪಂದ್ಯಗಳಿಂದ 8 ಜಯ, 10 ಸೋಲು, 4 ಟೈ ಸಹಿತ ಒಟ್ಟು 60 ಅಂಕ ಸಂಪಾದಿಸಿ “ಬಿ’ ಗುಂಪಿನಲ್ಲಿ 3ನೇ ಸ್ಥಾನದಲ್ಲಿದೆ. ಲೀಗ್‌ನಲ್ಲಿ ಬೆಂಗಳೂರಿಗೆ ಇನ್ನು ಪಾಟ್ನಾ ವಿರುದ್ಧದ ಒಂದು ಪಂದ್ಯ ಮಾತ್ರ ಬಾಕಿ ಇದೆ.
ಪಂದ್ಯದಲ್ಲಿ ರೋಹಿತ್ ಕುಮಾರ್ 31 ರೈಡಿಂಗ್‌ನಿಂದ 30 ಅಂಕ ಸಂಪಾದಿಸಿದ್ದಾರೆ. ಅದರಲ್ಲಿ 25 ಟಚ್ ಪಾಯಿಂಟ್, 5 ಬೋನಸ್ ಅಂಕಗಳು. ಇನ್ನು ಕ್ಯಾಚಿಂಗ್‌ನಿಂದ ರೋಹಿತ್ 2 ಅಂಕ ಗಳಿಸಿದ್ದಾರೆ. ಒಟ್ಟಾರೆ ಅವರ ಗಳಿಕೆ 32 ಅಂಕಗಳಾಗಿವೆ.
ಇಂದಿನ ಪಂದ್ಯಗಳು
ಪ್ರಸಾರ: ಸ್ಟಾರ್ ಸ್ಫೋರ್ಟ್ಸ್ ಸುವರ್ಣ ಪ್ಲಸ್
ಬೆಂಗಳೂರು ಬುಲ್ಸ್-
ಪಾಟ್ನಾ ಪೈರೇಟ್ಸ್
ಆರಂಭ: ರಾತ್ರಿ 8.00
ಪುನೇರಿ ಪಲ್ಟಾನ್ಸ್-
ಜೈಪುರ ಪ್ಯಾಂಥರ್
ಆರಂಭ: ರಾತ್ರಿ 9.00
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.