ಸುದಿನ ವರದಿ ಗಮನಿಸಿ ಅಧಿಕಾರಿಗಳಿಂದ ಅಂಗನವಾಡಿ ದುರಸ್ತಿ
Team Udayavani, Oct 19, 2017, 10:17 AM IST
ಮಹಾನಗರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿರುವ ಉರ್ವ ಸ್ಟೋರ್ ಅಂಗನವಾಡಿ ಕಟ್ಟಡದ ದುಃಸ್ಥಿತಿಯ ಬಗ್ಗೆ ‘ಸುದಿನ’ ಅ.17ರಂದು ವಿಶೇಷ ವರದಿ ಪ್ರಕಟಿಸಿದ್ದು, ಎಚ್ಚೆತ್ತ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತತ್ಕ್ಷಣವೇ ಕಾಮಗಾರಿ ನಡೆಸುವಂತೆ ಆದೇಶಿಸಿದ್ದಾರೆ.
‘ಸುದಿನ’ ವರದಿ ಗಮನಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ, ಇಲಾಖೆ ಅಧಿಕಾರಿ ಶೋಭಾ, ಲೋಕೋಪಯೋಗಿ ಹಾಗೂ ಇತರ ಇಲಾಖೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆಯೇ ಅಂಗನವಾಡಿ ಕಟ್ಟಡವನ್ನು ಪರಿಶೀಲಿಸಿದರು. ಕೂಡಲೇ ತುರ್ತು ಕಾಮಗಾರಿ ನಡೆಸಬೇಕೆಂಬ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಕಟ್ಟಡಕ್ಕೆ ಹಾಸಿರುವ ಶೀಟ್ಗಳು ತುಕ್ಕು ಹಿಡಿದು ಸವೆದು ಹೋಗಿದ್ದವು. ಸದ್ಯ ಏಳು ಹೊಸ ಶೀಟ್ಗಳನ್ನು ಹಾಕಲಾಗಿದೆ. ಬೆಳಗ್ಗಿನಿಂದಲೇ ಅಂಗನವಾಡಿ ಕಾರ್ಯಕರ್ತೆಯರು ಈ ಪ್ರದೇಶವನ್ನು ಸ್ವತ್ಛಗೊಳಿಸಿದ್ದಾರೆ. ಬಿರುಕುಬಿಟ್ಟ ಗೋಡೆಗಳಿಗೆ ಸಿಮೆಂಟ್ ತೇಪೆ ಹಚ್ಚಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಂಗಳೂರು ವಿಭಾಗದ ಅಧಿಕಾರಿ ಶೋಭಾ ಅವರು ತುರ್ತು ಕಾಮಗಾರಿ ಪೂರ್ಣಗೊಳ್ಳುವವರೆಗೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ಸ್ಥಳಾಂತರಕ್ಕೆಪೋಷಕರು ಒಪ್ಪುತ್ತಿಲ್ಲ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ ಅವರು ಅಂಗನವಾಡಿಗೆ ಭೇಟಿ ನೀಡಿ, ಕಾಮಗಾರಿ ವೇಳೆಯಲ್ಲಿ ಮಕ್ಕಳನ್ನು ಹತ್ತಿರದ ಆಶಾ ಕಾರ್ಯಕರ್ತೆಯರ ಕಟ್ಟಡಕ್ಕೆ ಸ್ಥಳಾಂತರಗೊಳಿಸಿ ಎಂದು ಸೂಚನೆ ನೀಡಿದ್ದಾರೆ. ಆದರೆ, ಈಗಿನ ಕಟ್ಟಡ ದೊಡ್ಡದಾಗಿದೆ. ಇಲ್ಲಿಯೇ ಪಾಠ ಮಾಡಿ, ಮಕ್ಕಳನ್ನು ಸ್ಥಳಾಂತರಿಸಬೇಡಿ ಎಂದು ಪೋಷಕರು ಹೇಳುತ್ತಿದ್ದಾರೆಂದು ಅಂಗನವಾಡಿಯ ಕಾರ್ಯಕರ್ತೆಯರು ತಿಳಿಸಿದ್ದಾರೆ.
ಮಹಿಳಾ ಮಂಡಲದಿಂದ ಪ್ರಗತಿ ಕಾರ್ಯ
ಈವರೆಗಿನ ಎಲ್ಲ ಕಾಮಗಾರಿ ವೆಚ್ಚವನ್ನು ಪ್ರಗತಿ ಮಹಿಳಾ ಮಂಡಲ ಸದಸ್ಯರೇ ಭರಿಸಿದ್ದಾರೆ. ಅಂಗನವಾಡಿ ಕೇಂದ್ರ ಪೂರ್ಣವಾಗಿ ಸರಕಾರದ ಸುಪರ್ದಿಗೆ ಬಾರದ ಕಾರಣದಿಂದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅನುದಾನ ಬಿಡುಗಡೆಗೊಳ್ಳುವುದಿಲ್ಲ. ಈ ಕಟ್ಟಡದ ಎಲ್ಲ ಕಾಮಗಾರಿಗೆ ಮಹಿಳಾ ಮಂಡಳದ ಸದಸ್ಯರೇ ಹಣ ವಿನಿಯೋಗಿಸಬೇಕು. ಕಾರ್ಯಕರ್ತರ ಪ್ರಕಾರ, ಈವರೆಗಿನ ಕಾಮಗಾರಿಗೆ 30 ಸಾವಿರ ರೂ. ಬಳಕೆಯಾಗಿದೆ.
ಅರಣ್ಯ ಇಲಾಖೆಗೆ ಪತ್ರ
ಅಂಗನವಾಡಿ ಕಟ್ಟಡದ ಪಕ್ಕದಲ್ಲಿಯೇ ದೊಡ್ಡದಾದ ಮರವಿದ್ದು, ಇದರ ರೆಂಬೆಗಳು ಬಿದ್ದು ಅಂಗನವಾಡಿ ಕಟ್ಟಡದ ಕೆಲವು ಶೀಟ್ಗಳು ತುಂಡಾಗಿವೆ. ಈ ಬಗ್ಗೆ ಮಹಿಳಾ ಮಂಡಳಿ ಕಾರ್ಯಕರ್ತೆಯರು ಅರಣ್ಯ ಇಲಾಖೆಗೆ ಪತ್ರ ಬರೆದು, ರೆಂಬೆಗಳನ್ನು ಕತ್ತರಿಸುವಂತೆ ಮನವಿ ಸಲ್ಲಿಸಿದ್ದಾರೆ.
ಕಾರ್ಯಕರ್ತೆಯರಿಗೆ ಸೂಚನೆ
ಹೊಸದಾಗಿ ಅಂಗನವಾಡಿ ತೆರೆಯಲು ನಗರ ವ್ಯಾಪ್ತಿಯಲ್ಲಿ ಸ್ಥಳಾವಕಾಶದ ಕೊರತೆ ಇದೆ. ಆದರೂ ಎಲ್ಲೆಲ್ಲಿ ಸ್ಥಳಾವಕಾಶ ಲಭ್ಯವಿದೆ ಎಂದು ಗುರುತಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಿದ್ದೇನೆ. ಸದ್ಯ ಕಟ್ಟಡದ ತುರ್ತು ಕಾಮಗಾರಿ ನಡೆಸಲಾಗಿದೆ.
– ಶೋಭಾ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ, ಮಂಗಳೂರು
ಕಟ್ಟಡಕ್ಕೆ ಸುಣ್ಣ ಬಳಿಯುತ್ತೇವೆ
ಪ್ರೇರಣಾ ಮಹಿಳಾ ಮಂಡಳಿ ಸದಸ್ಯೆ ಪುಷ್ಪಾವತಿ ಪ್ರತಿಕ್ರಿಯಿಸಿ, ಮಳೆ ಬಂದ ಕಾರಣ ಸುಣ್ಣ ಬಳಿಯಲು ಸಮಯ ತೆಗೆದುಕೊಳ್ಳುತ್ತದೆ. ಇನ್ನೆರಡು ದಿನಗಳನ್ನು ಪೂರ್ತಿ ಕಟ್ಟಡಕ್ಕೆ ಸುಣ್ಣ ಬಳಿಯುತ್ತೇವೆ. ಹೊಸದಾಗಿ 7 ಶೀಟ್ಗಳನ್ನು ಅಳವಡಿಸಿದ್ದೇವೆ. ಬಿರುಕು ಬಿಟ್ಟ ಗೋಡೆಗಳಿಗೆ ಸಿಮೆಂಟ್ ಹಾಕಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.