108, 1538 ಆ್ಯಂಬುಲೆನ್ಸ್ ನಿರ್ವಹಣೆ ಒಂದೇ ಸಂಸ್ಥೆಗೆ
Team Udayavani, Oct 19, 2017, 11:05 AM IST
ಬೆಂಗಳೂರು: 108 ಆರೋಗ್ಯ ಕವಚ’ ಸೇವೆಯಡಿ ಆ್ಯಂಬುಲೆನ್ಸ್‌ಗಳ ನಿರ್ವಹಣೆಗೆ ಕರೆಯಲಾದ ಹೊಸ ಟೆಂಡರ್ ಅಂತಿಮ ಹಂತದಲ್ಲಿದ್ದು, ಈ ಹಿಂದೆ ಗುತ್ತಿಗೆ ಪಡೆದಿದ್ದ ಜಿವಿಕೆ- ಇಎಂಆರ್‌ಐ ಸಂಸ್ಥೆ ಸೇರಿದಂತೆ ಮೂರು ಸಂಸ್ಥೆಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಹೊಸ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಹಂಚಿಕೆಯಾಗುವ ಸಾಧ್ಯತೆ ಇದೆ.
ಈ ನಡುವೆ ಜಿವಿಕೆ- ಇಎಂಆರ್‌ಐ ಸಂಸ್ಥೆಯೊಂದಿಗಿನ ಗುತ್ತಿಗೆ ಒಡಂಬಡಿಕೆ ರದ್ದತಿಗೆ ಸರ್ಕಾರ ನೀಡಿದ್ದ ಮೂರು ತಿಂಗಳ ನೋಟಿಸ್ ಅವಧಿ ಶುಕ್ರವಾರಕ್ಕೆ (ಅ.13) ಅಂತ್ಯವಾಗಿದೆ. ಆದರೆ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣವಾಗದ ಹಿನ್ನೆಲೆಯಲ್ಲಿ ಇನ್ನೂ ಎರಡು ವಾರ ಸೇವೆ ಮುಂದುವರಿಸುವಂತೆ ಜಿವಿಕೆ- ಇಎಂಆರ್‌ಐ ಸಂಸ್ಥೆಯನ್ನು ಆರೋಗ್ಯ ಇಲಾಖೆ ಕೋರಿದ್ದು, ಒಂದು ತಿಂಗಳ ಕಾಲ ಸೇವೆ ಮುಂದುವರಿಕೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಸಾರ್ವಜನಿಕರು ತುರ್ತು ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು “108 ಆರೋಗ್ಯ ಕವಚ’ ಅಡಿ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಆರಂಭಿಸಿತ್ತು. 2008ರಲ್ಲಿ ಟೆಂಡರ್ ಆಹ್ವಾನಿಸದೆ ನೇರವಾಗಿ 10 ವರ್ಷ ನಿರ್ವಹಣೆಗಾಗಿ ಜಿವಿಕೆ- ಇಎಂಆರ್‌ಐ’ ಸಂಸ್ಥೆಯೊಂದಿಗೆ ಅಂದಿನ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಂಡಿತ್ತು.
ಆದರೆ ಸಂಸ್ಥೆ ಸಮರ್ಪಕವಾಗಿ ಸೇವೆ ನೀಡುತ್ತಿಲ್ಲ ಎಂಬ ಆರೋಪ ಆಗಾಗ್ಗೆ ಕೇಳಿಬರುತ್ತಿತ್ತು. ಮುಖ್ಯವಾಗಿ ಒಡಂಬಡಿಕೆಯಂತೆ ಸಿಬಂದಿಯನ್ನು ನೇಮಿಸಿಕೊಳ್ಳದಿರುವುದು, ಸಿಬಂದಿಯ ಮೇಲೆ ಸಂಸ್ಥೆ ಸರಿಯಾದ ನಿಯಂತ್ರಣವಿಟ್ಟುಕೊಳ್ಳದಿರುವುದು, ಸಿಬಂದಿ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಆದ್ಯತೆ ನೀಡದಿರುವುದು ಸೇರಿದಂತೆ ಇತರೆ ಲೋಪಗಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾ ಖೆಯು ಗುತ್ತಿಗೆ ಅವಧಿ ಒಂದು ವರ್ಷ ಬಾಕಿ ಇರುವಂತೆಯೇ ಗುತ್ತಿಗೆ ರದ್ದುಪಡಿಸಿ ಜುಲೈ 12ರಂದು ನೋಟಿಸ್ ನೀಡಿತ್ತು.
ಆರೋಗ್ಯ ಇಲಾಖೆಯ ನೋಟಿಸ್‌ಗೆ ಸ್ಪಷ್ಟನೆ ನೀಡಿದ ಜಿವಿಕೆ ಸಂಸ್ಥೆಯು ಬಳಿಕ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯದ ನಿರ್ದೇಶನ ದಂತೆ ಈ ಸಂಸ್ಥೆ ಹೊಸ ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ. ಆದರೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಗುತ್ತಿಗೆ ಮಂಜೂರು ಮಾಡುವ ಮುನ್ನ ನ್ಯಾಯಾಲಯದ ಗಮನಕ್ಕೆ ತರುವಂತೆ ಸೂಚನೆ ನೀಡಿದೆ.
ಅಂತಿಮ ಹಂತದಲ್ಲಿ ಟೆಂಡರ್ ಪ್ರಕ್ರಿಯೆ
ಜಿವಿಕೆ- ಇಎಂಆರ್‌ಐ ಸಂಸ್ಥೆ ಸೇರಿದಂತೆ ಬಿವಿಜಿ ಸಂಸ್ಥೆ ಹಾಗೂ ಕ್ವೆಸ್ಟ್ ಕಾರ್ಪೋರೇಷನ್ ಸಂಸ್ಥೆಗಳು ಟೆಂಡರ್‌ನಲ್ಲಿ ಬಿಡ್ ಮಾಡಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಂತೆ ತಾಂತ್ರಿಕ ಬಿಡ್ ತೆರೆಯಲಾಗಿದ್ದು, ಪರಿಶೀಲನೆ ಕಾರ್ಯ ಬಹು ತೇಕ ಪೂರ್ಣಗೊಂಡಿದೆ. ಇ-ಆಡಳಿತ ಇಲಾಖೆ ಯಿಂದ ತಾಂತ್ರಿಕ ಮೌಲ್ಯಮಾಪನ ವರದಿ ಸಲ್ಲಿಕೆ ಯಾಗುತ್ತಿದ್ದಂತೆ ಆರ್ಥಿಕ ಬಿಡ್ ತೆರೆದು ಪರಿಶೀಲಿಸಿ ಟೆಂಡರ್ ಹಂಚಿಕೆ ಮಾಡಲು ಸಿದ್ಧತೆ ನಡೆದಿದೆ.
ಸೇವೆ ವಿಸ್ತರಣೆ ಕೋರಿ ಪತ್ರ
ಗುತ್ತಿಗೆ ರದ್ದುಪಡಿಸಿದ ಆರೋಗ್ಯ ಇಲಾಖೆಯು ಮೂರು ತಿಂಗಳ ಅವಧಿಗೆ ನೋಟಿಸ್ ನೀಡಿತ್ತು. ಈ ಅವಧಿಯೊಳಗೆ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಿದ್ಧತೆ ನಡೆಸಿತ್ತು. ಆದರೆ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಾಧ್ಯ ವಾಗಿಲ್ಲ. ಈ ನಡುವೆ ನೋಟಿಸ್ ಅವಧಿ ಅ.13ಕ್ಕೆ ಪೂರ್ಣಗೊಂಡಿರುವುದರಿಂದ ಕೆಲಕಾಲ ಸೇವೆ ಮುಂದುವರಿಸುವಂತೆ ಇಲಾಖೆಯು ಸಂಸ್ಥೆಗೆ ಮನವಿ ಮಾಡಿದೆ. ಜತೆಗೆ ಒಂದು ತಿಂಗಳ ಅವಧಿಗೆ ಸೇವೆ ವಿಸ್ತರಣೆಗೆ ಅನುಮತಿ ಕೋರಿ ಸರಕಾರಕ್ಕೆ ಪತ್ರ ಬರೆದಿದೆ.
1,538 ಆ್ಯಂಬುಲೆನ್ಸ್
108- ಆರೋಗ್ಯ ಕವಚ’ ಸೇವೆಯಡಿ ಸದ್ಯ 711 ಆ್ಯಂಬುಲೆನ್ಸ್‌ಗಳಿದ್ದು, ನಿರ್ವಹಣೆಗೆ ವಾರ್ಷಿಕ ಸುಮಾರು 140 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಈ 711 ಆ್ಯಂಬುಲೆನ್ಸ್ ಗಳ ಜತೆಗೆ ರಾಜ್ಯಾದ್ಯಂತ ಬಳಕೆಯಾಗುತ್ತಿರುವ ರಾಜ್ಯ ಸರಕಾರದ 827 ಆ್ಯಂಬುಲೆನ್ಸ್‌ಗಳನ್ನು ಒಟ್ಟುಗೂಡಿಸಿ ನಿರ್ವಹಣೆಯನ್ನು ಒಂದೇ ಸಂಸ್ಥೆಗೆ ವಹಿಸಲು ಸರಕಾರ ನಿರ್ಧರಿಸಿದೆ. 1,538 ಆ್ಯಂಬುಲೆನ್ಸ್ ಗಳನ್ನು ಐದು ವರ್ಷಗಳ ನಿರ್ವಹಣೆಗಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.