ಉಗ್ರ ಸಯೀದ್‌ಗೆ ಶಿಕ್ಷೆ: ಮುಸ್ಲಿಂ ಧಾರ್ಮಿಕ ನಾಯಕರ ಆಗ್ರಹ

Team Udayavani, Oct 19, 2017, 12:10 PM IST

96.jpg

ಮುಂಬಯಿ: ಭಾರತದಲ್ಲಿ 26/11 ಮುಂಬಯಿ ದಾಳಿ ಸಹಿತ ಹಲವು ವಿಧ್ವಂಸಕ ಕೃತ್ಯ ಎಸಗಿರುವ ಪಾಕಿಸ್ಥಾನದ ಉಗ್ರ ಲಷ್ಕರ್‌ -ಎ-ತಯ್ಯಬ ಮತ್ತು ಜಮಾತ್‌ – ಉದ್‌ – ದಾವಾದ ಮುಖಂಡ ಹಾಫಿಜ್‌ ಸಯೀದ್‌ಗೆ ಶಿಕ್ಷೆ ವಿಧಿಸುವಂತೆ ವಿಶ್ವಸಂಸ್ಥೆಯನ್ನು ಆಗ್ರಹಿಸುವ ನಿರ್ಣಯವೊಂದನ್ನು 1000ಕ್ಕೂ ಅಧಿಕ ಮುಸ್ಲಿಂ ಧಾರ್ಮಿಕ ಮುಖಂಡರು ಅಂಗೀಕರಿಸಿದ್ದಾರೆ. 

ಮದ್ರಸ  ದಾರೂಲ್‌ ಅಲಿ ಹಸನ್‌ ಅಹ್ಲೆ ಸುನ್ನತ್‌ನ ಸಮಾವೇಶದಲ್ಲಿ, ಜಮಾತ್‌ -ಉದ್‌-ದಾವಾ ಸಹಿತ ಪಾಕ್‌ನ ಉಗ್ರ ಸಂಘಟನೆಗಳನ್ನು ತೀಕ್ಷ್ಣ ವಾಗಿ ಖಂಡಿಸಲಾಗಿದೆ. ನಿರ್ಣಯ ವನ್ನು ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಸಮಿತಿಯ ಅಧ್ಯಕ್ಷರಾಗಿರುವ ಅಬ್ದುಲ್ಲತೀಫ್ ಅಬೌಲತ್ತ ಹಾಗೂ ಪ್ರತಿ ಯನ್ನು ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಿಕೊಡಲಾಗಿದೆ. 

ಹಾಫಿಜ್‌ ಸಯೀದ್‌ ಮತ್ತು ಅವನ ನೇತೃತ್ವದ ಉಗ್ರ ಸಂಘಟನೆಗಳು ಜಾಗತಿಕ ಶಾಂತಿಗೆ ಅಪಾಯಕಾರಿ ಯಾಗಿವೆ. ಅವನು ಭಾರತದವನ್ನು ನಂಬರ್‌ ಒನ್‌ ಶತ್ರು ಎಂದು ಹೇಳು ತ್ತಾನೆ. ಆದರೆ ಹಾಫಿಜ್‌ ಇಸ್ಲಾಂ ಮತ್ತು ಮಾನವೀಯತೆಯ ದೊಡ್ಡ ಶತ್ರುವಾಗಿದ್ದಾನೆ ಎಂದು ನಿರ್ಣಯ ಮಂಡಿಸಿದ ಇಸ್ಲಾಮಿಕ್‌ ಡಿಫೆನ್ಸ್‌ ಸೈಬರ್‌ ಸೆಲ್‌ ಎಂಬ ಎನ್‌ಜಿಒದ ಅಧ್ಯಕ್ಷರಾಗಿರುವ ಡಾ| ಅಬ್ದುಲ್‌ ರೆಹಮಾನ್‌ ಅಂಜಾರಿಯ ಹೇಳಿದ್ದಾರೆ. 2015ರಲ್ಲಿ ಅಂಜಾರಿಯ ಐಸಿಸ್‌ ವಿರುದ್ಧ ಜಗತ್ತಿನ ಅತಿ ದೊಡ್ಡ ಫ‌ತ್ವಾ ಹೊರಡಿಸಿ ಸುದ್ದಿಯಾಗಿದ್ದರು. ಭಾರತದ 1000ಕ್ಕೂ ಅಧಿಕ ಮುಸ್ಲಿಮ್‌ ಧಾರ್ಮಿಕ ಮುಖಂಡರು ಮತ್ತು ಮತ ಪಂಡಿತರು ಈ ಫ‌ತ್ವಾಕ್ಕೆ ಸಹಿ ಹಾಕಿ ದ್ದರು. ನಿನ್ನೆ ಅಂಗಿಕàರಿಸಿರುವ ನಿರ್ಣಯ  ಪಾಕ್‌ನಲ್ಲಿರುವ 60ಕ್ಕೂ ಅಧಿಕ ಉಗ್ರ ಸಂಘ ಟನೆಗಳನ್ನು ಹೆಸರಿ ಸಿದ್ದು, ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಶ್ವಸಂಸ್ಥೆಯನ್ನು ಆಗ್ರಹಿಸಿದೆ. 

ನೈತಿಕ ಬದ್ಧತೆ: ಇಸ್ಲಾಂ ಹೆಸರಲ್ಲಿ ಅಮಾಯಕ ಜನರನ್ನು ಸಾಯಿಸು ವವರನ್ನು ಮತ್ತು ಸಾಯಿಸುವವರಿಗೆ ಪ್ರೋತ್ಸಾಹ ನೀಡುವವರನ್ನು ವಿರೋಧಿ ಸುವುದು ನಮ್ಮ ನೈತಿಕ ಬದ್ಧತೆ. ಹಾಫಿಜ್‌ ಸಯೀದ್‌ ಯುವಕರಿಗೆ ಹಿಂಸಾ ಚಾರ ನಡೆಸಲು ಕುಮ್ಮಕ್ಕು ನೀಡುತ್ತಿರುವುದು ಸಂಶಯಾತೀತವಾಗಿ ಸಾಬೀತಾಗಿದೆ. ಹಾಫಿಜ್‌ ಮತ್ತು ಅವನು ಪ್ರತಿಪಾದಿಸುತ್ತಿರುವ ಸಿದ್ಧಾಂತವನ್ನು ವಿರೋಧಿಸುವುದು ಅಗತ್ಯ ಎಂದು ಮದ್ರಸ ದಾರೂಲ್‌ ಉಲೂಮ್‌ ಅಲಿ ಹಸನ್‌ ಅಹ್ಲೆ ಸುನ್ನತ್‌ನ ಪೋಷಕ ರಾಗಿರುವ ಮೌಲಾನ ಮೊಹಮ್ಮದ್‌ ಹಾಶೀಂ ಆಶ್ರಫಿ ಹೇಳಿದ್ದಾರೆ. 

ಹಾಫಿಜ್‌ ಸಯೀದ್‌ ಪಾಕಿಸ್ಥಾನದಲ್ಲಿ ಮಿಲ್ಲಿ ಮುಸ್ಲಿಮ್‌ ಲೀಗ್‌ ಎಂಬ ರಾಜಕೀಯ ಪಕ್ಷ ಸ್ಥಾಪಿಸಿರುವುದಕ್ಕೂ ಸಮಾವೇಶದಲ್ಲಿ ಕಳವಳ ವ್ಯಕ್ತವಾಗಿದೆ. ಪಾಕಿಸ್ಥಾನ ಅಣ್ವಸ್ತ್ರ ಹೊಂದಿರುವ ದೇಶವಾಗಿದ್ದು, ಒಂದು ವೇಳೆ ಅವನ ಪಕ್ಷ ಅಧಿಕಾರಕ್ಕೆ ಬಂದರೆ ಉಗ್ರರ ಕೈಗೆ ಅಧಿಕೃತವಾಗಿ ಅಣ್ವಸ್ತ್ರಗಳು ಸಿಕ್ಕಿ ದಂತಾಗುತ್ತದೆ. ಇದು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ದೊಡ್ಡ ಬೆದರಿಕೆಯಗಿ ಪರಿಣಮಿಸಬಹುದು. ಅವನು ಜಾಗತಿಕವಾಗಿ ಮುಸ್ಲಿಮರ ಮೇಲೆ ಪ್ರಭಾವ ಬೀರಿ ಇನ್ನಷ್ಟು ಯುವಕರನ್ನು ಮತಾಂದರನ್ನಾಗಿ ಮಾಡ ಬಹುದು ಎಂದು 13 ಪುಟಗಳ ನಿರ್ಣಯದಲ್ಲಿ ಹೇಳಲಾಗಿದೆ.

ಟಾಪ್ ನ್ಯೂಸ್

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್‌ ಬಣದ ನಾಯಕ

Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್‌ ಬಣದ ನಾಯಕ

ಆಫ್ಘನ್‌ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?

India-Afghanistan: ಆಫ್ಘನ್‌ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?

ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್‌ ಕ್ಯಾನ್ಸರ್‌ ಬಗ್ಗೆ ಎಚ್ಚರವಿರಲಿ: ವೈದ್ಯರು

Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್‌ ಕ್ಯಾನ್ಸರ್‌ ಬಗ್ಗೆ ಎಚ್ಚರವಿರಲಿ

ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!

Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

11-kushtagi

Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

10-kodagu

Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್‌ ಮೇಜರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.