ಪಾಕ್ ಮಗುವಿಗೆ ಭಾರತದಲ್ಲಿ ಚಿಕಿತ್ಸೆ: ಸುಶ್ಮಾ ವೀಸಾ ಮಂಜೂರು
Team Udayavani, Oct 19, 2017, 12:13 PM IST
ಹೊಸದಿಲ್ಲಿ : ಪಾಕಿಸ್ಥಾನದ ಮಗುವಿಗೆ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ದೊರಕಿಸುವ ಸಲುವಾಗಿ ವೀಸಾ ನೀಡುವಂತೆ ಇಸ್ಲಾಮಾಬಾದ್ನಲ್ಲಿನ ಭಾರತೀಯ ಹೈಕಮಿಷನ್ಗೆ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ನಿರ್ದೇಶನ ನೀಡಿದ್ದಾರೆ.
ತನ್ನ ಮಗು ಅಬ್ದುಲ್ಲಾ ಗೆ ಲಿವರ್ ಕಸಿ ಶಸ್ತ್ರಚಿಕಿತ್ಸೆ ಬಳಿಕದ ಚಿಕಿತ್ಸೆ ಅಗತ್ಯವಿದ್ದು ಆತನಿಗೆ ವೈದ್ಯಕೀಯ ವೀಸಾ ಮಂಜೂರು ಮಾಡುವಂತೆ ಮಗುವಿನ ತಂದೆ ಕಾಶೀಫ್ ಅವರು ಟ್ವಿಟರ್ನಲ್ಲಿ ಸುಶ್ಮಾ ಸ್ವರಾಜ್ ಅವರನ್ನು ವಿನಂತಿಸಿದ್ದರು.
ಭಾರತದಲ್ಲಿ ಲಿವರ್ ಸರ್ಜರಿಗೆ ಒಳಪಡುವ ಪಾಕ್ ಮಹಿಳೆಯೊಬ್ಬರಿಗೆ ಕೂಡ ಇದೇ ವೇಳೆ ವೈದ್ಯಕೀಯ ವೀಸಾ ನೀಡಲಾಗಿದೆ ಎಂದು ಸಚಿವೆ ಸುಶ್ಮಾ ಟ್ವೀಟ್ ಮಾಡಿದ್ದಾರೆ.
ಈ ಮಹಿಳೆಯ ಪುತ್ರ ರಫೀಕ್ ಮೆಮೋನ್ ಎಂಬವರು ತನ್ನ ತಾಯಿಗೆ ವೈದ್ಯಕೀಯ ವೀಸಾ ಕೊಡಿಸುವಂತೆ ಸುಶ್ಮಾ ಸ್ವರಾಜ್ ಅವರನ್ನು ಕೋರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.