ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ, ರಸ್ತೆ ತಡೆ
Team Udayavani, Oct 19, 2017, 2:40 PM IST
ಕುಂಬ್ರ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ರೋಷನ್ ಬೇಗ್ ರಾಜೀನಾಮೆಗೆ ಆಗ್ರಹಿಸಿ ಕುಂಬ್ರದಲ್ಲಿ ಬೃಹತ್ ಪ್ರತಿಭಟನೆ ಮತ್ತು ರಸ್ತೆ ತಡೆ ನಡೆಸಲಾಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ರಾಜ್ಯ ಸರಕಾರದ ಮಂತ್ರಿಗಳಿಂದ ರಾಜ್ಯದ ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳು ನಿರಂತರವಾಗಿ ಬರುತ್ತಿವೆ. ಸಚಿವ ರೋಶನ್ ಬೇಗ್ ಭ್ರಷ್ಟಾಚಾರಿಯಾಗಿದ್ದು, ಛಾಪಾ ಕಾಗದ ಹಗರಣ, ವಕ್ಫ್ ನಲ್ಲಿ ಹಗರಣ ನಡೆಸಿದ್ದಾರೆ. ಸಾರ್ವಜನಿಕರ ಹಣವನ್ನು ನುಂಗಿದ ಓರ್ವ ಭ್ರಷ್ಟ ಸಚಿವರಿಗೆ ಪ್ರಧಾನಿ ಕುರಿತು ಮಾತನಾಡುವ ಯೋಗ್ಯತೆ ಇಲ್ಲ. ಸಚಿವರಿಂದ ಅಸಾಂವಿಧಾನಿಕ ಪದ ಬಳಕೆ ಸರಿಯಲ್ಲ. ಅಂತಹವರನ್ನು ಇನ್ನೂ ಸಂಪುಟದಲ್ಲಿ ಉಳಿಸಿಕೊಂಡ ರಾಜ್ಯ ಸರಕಾರಕ್ಕೆ ನಾಚಿಕೆಯಾಗಬೇಕು. ರೋಷನ್ ಬೇಗ್ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ಕೆಳಗಿಳಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಸದಸ್ಯ ಸುರೇಶ್ ಆಳ್ವ, ಮಂಡಲ ಉಪಾಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ, ಕುಂಬ್ರ ಸಿಎ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ ಚಂದ್ರ ರೈ ಕೈಕಾರ, ತಾ.ಪಂ. ಸದಸ್ಯ ಹರೀಶ್ ಬಿಜತ್ರೆ, ನೆಟ್ಟಣಿಗೆ ಮುಟ್ನೂರು ಶಕ್ತಿ ಕೇಂದ್ರದ ಅಧ್ಯಕ್ಷ ಲೋಕೇಶ್ ಚಾಕೋಟೆ, ಕಾರ್ಯದರ್ಶಿ ವಿಜಯ ಕುಮಾರ್ ಕೋರಂಗ, ಭರತ್ ಈಶ್ವರಮಂಗಲ, ಪ್ರಕಾಶ್ಚಂದ್ರ ರೈ ಕೈಗಾರ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ಅರಿಯಡ್ಕ ಗ್ರಾ.ಪಂ. ಅಧ್ಯಕ್ಷೆ ಸವಿತಾ ಅಶೋಕ್, ಕೆದಂಬಾಡಿ ಗ್ರಾ. ಸಮಿತಿ ಅಧ್ಯಕ್ಷ ರತನ್ ರೈ ಕುಂಬ್ರ, ಗ್ರಾಮಸಮಿತಿ ಅಧ್ಯಕ್ಷರಾದ ರಾಜೇಶ್ ಪರ್ಪುಂಜ ( ಒಳಮೊಗ್ರು), ಹರೀಶ್ ರೈ (ಅರಿಯಡ್ಕ), ಬೂತ್ ಸಮಿತಿ ಅಧ್ಯಕ್ಷ ಮಾಧವ ರೈ ಕುಂಬ್ರ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಕರುಣಾಕರ ಎಲಿಯ, ಕೇಶವ ಶಾಂತಿವನ, ಪುರಂದರ ಶೆಟ್ಟಿ ಮುಡಾಲ, ಮಹೇಶ್ ಅಜ್ಜಿಕಲ್ಲು, ರಿತೇಶ್, ಸಂತೋಷ್ ರೈ ಕೋರಂಗ, ನಾರಾಯಣ ಪೂಜಾರಿ, ವಾಸು ಅಜ್ಜಿಕಲ್ಲು, ಹೊನ್ನಪ್ಪ ಪೂಜಾರಿ, ಮಹಾಬಲ ರೈ ಕುಕ್ಕುಜೋಡು, ರಾಧಾಕೃಷ್ಣ ರೈ ಕಲ್ಲಡ್ಕ, ರಾಜೇಶ್ ಮಣಿಯಾಣಿ, ಮಾಧವ ರೈ ಕುಂಬ್ರ, ಪೂವಪ್ಪ, ವಿನೋದ್ ಶೆಟ್ಟಿ ಅರಿಯಡ್ಕ, ಉದಯ ಇದ್ಯಪ್ಪೆ ಸಹಿತ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.