ಕೋಲ್ಕತ ಎಲ್‌ಐಸಿ ಕಟ್ಟಡದಲ್ಲಿ ಬೆಂಕಿ; ಜೀವ ಹಾನಿ ವರದಿ ಇಲ್ಲ
Team Udayavani, Oct 19, 2017, 4:20 PM IST
ಕೋಲ್ಕತ : ಮಧ್ಯ ಕೋಲ್ಕತ ದ ಜವಾಹರ್ ಲಾಲ್ ನೆಹರೂ ರಸ್ತೆಯಲ್ಲಿನ ಎಲ್‌ಐಸಿ ಕಟ್ಟಡದಲ್ಲಿ ಇಂದು ಗುರುವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿತು. ಸುಮಾರು 10 ಅಗ್ನಿ ಶಾಮಕಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ತೊಡಗಿಕೊಂಡವು. ಅಗ್ನಿ ಅನಾಹತದಲ್ಲಿ ಯಾವುದೇ ಸಾವು ನೋವು ಸಂಭವಿಸಿರುವ ವರದಿಯಾಗಿಲ್ಲ.
ಎಲ್‌ಐಸಿ ಕಟ್ಟಡದ 16ನೇ ಮಹಡಿಯಲ್ಲಿ ಬೆಳಗ್ಗೆ 10.20ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತು. ಅನಂತರ ಅದು 17ನೇ ಮಹಡಿಗೂ ಚಾಚಿಕೊಂಡಿತು.
ಹದಿನೇಳನೇ ಮಹಡಿಯಲ್ಲಿ ಎಸ್‌ಬಿಐ ಗ್ಲೋಬಲ್ ಮಾರ್ಕೆಟ್ ಕಾರ್ಯಾಲಯದ ಸರ್ವರ್ ರೂಮ್ ಆಗಿದ್ದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.
#WATCH: Fire continues to rage at LIC building on Jawahar Lal Nehru road in #Kolkata. 10 fire tenders working to douse the fire. #WestBengal pic.twitter.com/QWGgYy4mYL
— ANI (@ANI) October 19, 2017
ಮಹಡಿಯಲ್ಲಿ ಬ್ಯಾಂಕಿನ ಯಾವುದೇ ಸಿಬಂದಿ ಸಿಕ್ಕಿ ಹಾಕಿಕೊಂಡಿಲ್ಲ ಎಂದು ಎಸ್‌ಬಿಐ ನ ಕೋಲ್ಕತ ವಲಯದ ಚೀಫ್ ಜನರಲ್ ಮ್ಯಾನೇಜರ್ ಪಿ ಪಿ ಸೇನ್‌ಗುಪ್ತಾ ಹೇಳಿದರು.
ಬೆಂಕಿ ಅವಘಡ ಸಂಭವಿಸಿರುವ ಜೀವನ ಸುಧಾ ಕಟ್ಟಡದಲ್ಲಿ 19 ಮಹಡಿಗಳಿವೆ. ಇವುಗಳಲ್ಲಿ ಎಸ್‌ಬಿಐ, ಎಲ್‌ಐಸಿ ಮತ್ತು ಇತರ ಹಣಕಾಸು ಸೇವಾ ಸಂಸ್ಥೆಗಳ ಕಾರ್ಯಾಲಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ..ಮೀನುಗಾರಿಕಾ ದೋಣಿಯಲ್ಲಿದ್ದ 6 ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.