ಭಾರತ ಮಾತ್ರವಲ್ಲದೆ ಪಾಕಿಸ್ಥಾನ ಸೇರಿ ವಿಶ್ವಾದ್ಯಂತ ದೀಪಾವಳಿ
Team Udayavani, Oct 20, 2017, 1:22 PM IST
ಹೊಸದಿಲ್ಲಿ: ಬೆಳಕಿನ ಹಬ್ಬ ದೀಪಾವಳಿ ಯನ್ನು ಭಾರತ ಮಾತ್ರವಲ್ಲದೆ, ಅಮೆರಿಕ,ಸಿಂಗಾಪುರ, ಹಾಂಕಾಂಗ್, ಪಾಕಿಸ್ಥಾನ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಜಗತ್ತಿನಾದ್ಯಂತ ಇರುವ ಹಿಂದೂಗಳು ತಮ್ಮ ಮನೆಗಳ ಸಮೀಪದಲ್ಲಿರುವ ದೇಗುಲಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರಲ್ಲದೆ, ಬಾಣ, ಬಿರುಸುಗಳನ್ನು ಸಿಡಿಸಿ ಮಕ್ಕಳು ಹಾಗೂ ಕುಟುಂಬದವರೊಂದಿಗೆ ಹಬ್ಬ ಆಚರಿಸಿದರು. ಇವರ ಈ ಸಂಭ್ರಮಾಚರಣೆಗೆ ಅವರ ಸ್ನೇಹಿತರೂ ವಿದೇಶೀಯರೂ ಸಾಥ್ ನೀಡಿದರು.
ಹಲವಾರು ದೇಶಗಳ ಪ್ರತಿಷ್ಠಿತ ಕಂಪೆನಿಗಳೂ ತಮ್ಮಲ್ಲಿನ ಹಿಂದೂ ನೌಕರರ ಸಂಭ್ರಮದಲ್ಲಿ ಪಾಲ್ಗೊಂಡು ಕಚೇರಿಗಳಿಗೆ ದೀಪಾಲಂಕಾರ ಮಾಡಿಸಿದ್ದು ವಿಶೇಷವಾಗಿತ್ತು. ಹಿಂದೂಗಳು ಮಾತ್ರ ವಲ್ಲದೆ, ಇತರೆ ಧರ್ಮೀಯರೂ ಬೆಳಕಿನ ಹಬ್ಬಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಭಾರತೀಯರು ಹೆಚ್ಚಾಗಿರುವ ಅಮೆರಿಕ, ಯುರೋಪ್ ರಾಷ್ಟ್ರಗಳಲ್ಲಿರುವ ನಾನಾ ಪ್ರಾಂತ್ಯ ಗಳಲ್ಲಿನ ಭಾರತೀಯ ಮಾಲ್‌ಗಳು ಭಾರತೀ ಯರಿಂದ ಕಿಕ್ಕಿರಿದು ಹೋಗಿದ್ದವು. ಹಬ್ಬದ ಪ್ರಯುಕ್ತ ಪೂಜಾ ಸಾಮಗ್ರಿಗಳು, ಉಡುಪುಗಳು, ಹೂವು, ಹಣ್ಣು, ವಿಶೇಷ ತಿನಿಸು, ಪಟಾಕಿಗಳ ಮಾರಾಟ ಭರದಿಂದ ಸಾಗಿದ್ದವು. ಅದರಲ್ಲೂ ಹೋಳಿಗೆ ಸೇರಿದಂತೆ ಕೆಲವು ಬ್ರಾಂಡ್‌ಗಳ ಸಂಸ್ಕರಿತ ಸಿಹಿ ತಿನಿಸುಗಳ ಮಾರಾಟ ಭರ್ಜರಿಯಾಗಿತ್ತು. ಇನ್ನು, ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನ ಹಲವಾರು ಕಡೆ ಪಟಾಕಿ ಮಾರಾಟ ಜೋರಾಗಿತ್ತು.
ಡಿಜಿಟಲ್ ದೀಪಾವಳಿ: ಏತನ್ಮಧ್ಯೆ, ಸಾಮಾಜಿಕ ಜಾಲ ತಾಣಗಳಲ್ಲೂ ದೀಪಾವಳಿಯ ಭರಾಟೆ ಜೋರಾ ಗಿಯೇ ಇತ್ತು. ಜನಪ್ರಿಯ ಸಾಮಾಜಿಕ ಜಾಲ ತಾಣಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂಗಳಲ್ಲಿ ಜನರು ತಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಹಬ್ಬದ ಶುಭಾಶಯ ಹೇಳಿದರು. ಇಂಥ ಕೋಟ್ಯಂತರ ಸಂದೇಶಗಳು ಈ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಅಲ್ಲದೆ, ಪಟಾಕಿಯ ಸಿಡಿಸುವ ಆ್ಯಪ್‌ಗ್ಳೂ ಬಿಡುಗಡೆ ಯಾಗಿದ್ದು, ಮೊಬೈಲ್, ಲ್ಯಾಪ್‌ಟಾಪ್ ಪರದೆಯ ಮೇಲೆ ಪಟಾಕಿ ಸಿಡಿಸಿ ಹಲವಾರು ಮಂದಿ “ಡಿಜಿಟಲ್ ದೀಪಾವಳಿ’ ಆಚರಿಸಿದ್ದೂ ಕಂಡುಬಂತು.
ಷೇರು ಪೇಟೆಗೆ ಬೆಳಕಿಲ್ಲ: ಹಾಲಿ ಸಾಲಿನ ದೀಪಾವಳಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ಬೆಳಕನ್ನೇನೂ ತಂದಿಲ್ಲ. ಗುರುವಾರ ನಡೆದ ಮುಹೂರತ್ ಟ್ರೇಡಿಂಗ್ ಪ್ರಯುಕ್ತ ನಡೆಸಲಾದ ವಿಶೇಷ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 194 ಅಂಕ ಗಳಷ್ಟು ಕುಸಿದು ಸೂಚ್ಯಂಕ 32,389.96ರಲ್ಲಿ ಮುಕ್ತಾಯವಾಯಿತು.
ಶ್ವೇತಭವನದಲ್ಲಿ ದೀಪ ಬೆಳಗಿದ ಟ್ರಂಪ್
ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಹಣತೆ ಹಚ್ಚುವ ಮೂಲಕ ದೀಪಾವಳಿಯ ಸಂಭ್ರಮಕ್ಕೆ ಚಾಲನೆ ನೀಡಿದರು. ಭಾರತೀಯ- ಅಮೆರಿಕನ್ನರಿಗೆ ಬೆಳಕಿಗೆ ಹಬ್ಬಕ್ಕೆ ಶುಭಕೋರಿದ ಟ್ರಂಪ್ ಅವರು, ಪ್ರಧಾನಿ ಮೋದಿ ಅವರೊಂ ದಿಗಿನ ತಮ್ಮ ಆತ್ಮೀಯತೆಯನ್ನೂ ಪ್ರಸ್ತಾವಿಸಿ ದರು. ಭಾರತೀಯರನ್ನು “ಶ್ರೇಷ್ಠ ಅಮೆರಿಕದ ಕುಟುಂಬದ ಅಮೂಲ್ಯ ಹಾಗೂ ಪ್ರೀತಿಯ ಸದಸ್ಯರು’ ಎಂದೇ ಉಲ್ಲೇಖೀಸಿದರಲ್ಲದೆ, ಜಗ ತ್ತಿಗೆ ಭಾರತೀಯರು ನೀಡಿರುವ ಕೊಡುಗೆ ಗಳನ್ನು ಶ್ಲಾ ಸಿದರು. ಅವರ ಪುತ್ರಿ ಹಾಗೂ ಸಲಹೆಗಾರ್ತಿ ಇವಾಂಕಾ ಟ್ರಂಪ್ ಅವರು ಟ್ವಿಟರ್ ಮೂಲಕ ಭಾರತೀಯರಿಗೆ ಶುಭ ಕೋರಿದರು. ಶ್ವೇತಭವನದ ದೀಪಾವಳಿ ಆಚರಣೆಯ ಫೋಟೋ, ವಿಡಿಯೋಗಳನ್ನು ಹಾಗೂ ಅಧ್ಯಕ್ಷ ಟ್ರಂಪ್ ಅವರ ಸಂದೇಶ ವನ್ನು ಕೂಡ ಅಧ್ಯಕ್ಷರ ಫೇಸ್‌ಬುಕ್ ಪೇಜ್‌ಗೆ ಅಪ್‌ಲೋಡ್ ಮಾಡ ಲಾಗಿದೆ.
ಇವಾಂಕಾ ಅವರು ಮುಂದಿನ ತಿಂಗಳು ಹೈದರಾಬಾದ್‌ಗೆ ಆಗಮಿಸಲಿದ್ದಾರೆ. ನ.28ರಂದು ವಾರ್ಷಿಕ ಜಾಗತಿಕ ಉದ್ಯಮ ಶೀಲತೆ ಶೃಂಗದಲ್ಲಿ ಅವರು ಪಾಲ್ಗೊಂಡು, ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರೂ ಈ ಕಾರ್ಯ ಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಚಿನ್ನದ ದರ 250 ರೂ. ಇಳಿಕೆ
ದೀಪಾವಳಿ ಹಿನ್ನೆಲೆಯಲ್ಲಿ ಗುರುವಾರ ಚಿನಿವಾರ ಪೇಟೆಯಲ್ಲಿ ನಡೆದ ವಿಶೇಷ ದಿವಾಳಿ ಮುಹೂರ್ತ ವ್ಯಾಪಾರದ ವೇಳೆ ಚಿನ್ನದ ದರ ಗ್ರಾಂಗೆ 250 ರೂ. ಇಳಿಕೆಯಾಗಿ, 10 ಗ್ರಾಂಗೆ 30,750 ಆಯಿತು. ಇದೇ ವೇಳೆ, ಬೆಳ್ಳಿ ದರ 200 ರೂ. ಕುಸಿದು, ಕೆ.ಜಿಗೆ 40,800ಕ್ಕೆ ತಲುಪಿತು.
ಬಸ್ಸು, ರೈಲುಗಳಲ್ಲಿ ಬೆಳಕಿನ ತೋರಣ
ಸಿಂಗಾಪುರದಲ್ಲಿ ದೀಪಾವಳಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗಿದೆ. ಅಲ್ಲಿನ ಬಸ್ಸುಗಳು, ರೈಲುಗಳಲ್ಲಿ ರಂಗೋಲಿಗಳು, ಬೆಳಕಿನ ಹಬ್ಬವನ್ನು ಪ್ರತಿಬಿಂಬಿಸುವ ವಿನ್ಯಾಸಗಳು, ಕಲಾಕೃತಿಗಳು ರಾರಾಜಿಸಿವೆ. ಜತೆಗೆ, ಈ ದೀಪಾವಳಿ ಥೀಮ್ ಇರುವ ಹೆಚ್ಚುವರಿ ಬಸ್ಸುಗಳನ್ನು ಹೊಸ ರೂಟ್‌ಗಳಲ್ಲಿ ಬಿಡಲಾಗಿದ್ದು, “ದೀಪಾವಳಿಯ ಸಂಭ್ರಮದ ಪಯಣ ನಿಮ್ಮದಾಗಲಿ’ ಎಂದು ಹಾರೈಸಲಾಗಿದೆ.
ಅಲ್ಪಸಂಖ್ಯಾಕರ ಹಕ್ಕುಗಳ ರಕ್ಷಣೆಗೆ ಬದ್ಧ: ಪಾಕ್ ಪ್ರಧಾನಿ
ಪಾಕ್ ಪ್ರಧಾನಿ ಶಾಹಿದ್ ಖಖಾನ್ ಅಬ್ಟಾಸಿ ಅವರೂ ಗುರುವಾರ ಭಾರತೀಯರು ಹಾಗೂ ಹಿಂದೂ ಧರ್ಮೀಯ ರಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಬೆಳಕಿನ ಹಬ್ಬ ಆಚರಿ ಸುತ್ತಿರುವ ಎಲ್ಲರಿಗೂ ಸಂತೋಷ, ಶಾಂತಿ ಹಾಗೂ ಸಮೃದ್ಧಿ ಸಿಗಲಿ ಎಂದು ಹೇಳಿರುವ ಅವರು, ನಮ್ಮ ಸರಕಾರವು ಅಲ್ಪಸಂಖ್ಯಾ ಕರ ಹಕ್ಕುಗಳ ರಕ್ಷಣೆಗೆ ಬದ್ಧವಾ ಗಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ, ಅಟ್ಟಾರಿ-ವಾಘಾ ಗಡಿಯಲ್ಲಿ ಬಿಎಸ್‌ಎಫ್ ಯೋಧರು ಪಾಕಿಸ್ಥಾನದ ರೇಂಜರ್‌ಗಳಿಗೆ ಸಿಹಿ ಹಂಚಿ ದೀಪಾವಳಿಯನ್ನು ಆಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ
ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.