ನನ್ನ ನಂಬಿಕೆ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ:ಗುಡುಗಿದ ಯೋಗಿ
Team Udayavani, Oct 20, 2017, 1:27 PM IST
ಲಕ್ನೋ: “ರಾಮ ಜನ್ಮಭೂಮಿಗೆ ಭೇಟಿ ನೀಡುವುದು ತಮ್ಮ ವೈಯಕ್ತಿಕ ನಂಬಿಕೆಯಾಗಿದ್ದು, ಇದನ್ನು ಪ್ರಶ್ನಿಸುವ ಹಕ್ಕು ವಿರೋಧ ಪಕ್ಷಗಳಿಗೆ ಇಲ್ಲ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುಡುಗಿದ್ದಾರೆ.
ಅಯೋಧ್ಯೆಯಲ್ಲಿ ಈ ಬಾರಿಯ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅಯೋಧ್ಯೆ ಬಳಿ ಯ ಸರಯೂ ನದಿಯಲ್ಲಿ ಸುಮಾರು 1.75 ಲಕ್ಷ ಹಣತೆಗಳ ದೀಪೋತ್ಸವ ನಡೆಯುತ್ತಿದೆ. ರಾಮ, ಸೀತೆ, ಲಕ್ಷ್ಮಣರ ವೇಷ ಧರಿಸಿದ್ದ ಕಲಾವಿದರು “ಪುಷ್ಪಕ ವಿಮಾನ'(ಹೆಲಿಕಾಪ್ಟರ್)ನಲ್ಲಿ ಆಗಮಿಸಿ ರಾಮಕಥಾ ಪಾರ್ಕ್‌ನಲ್ಲಿ ಲ್ಯಾಂಡಿಂಗ್ ಆದ ದೃಶ್ಯ ಎಲ್ಲರ ಗಮನ ಸೆಳೆಯಿತು. ರಾಮ, ಸೀತೆ, ಲಕ್ಷ್ಮಣರು ಬಂದಿಳಿ ಯುತ್ತಿದ್ದಂತೆ ಅವರಿಗೆ ಸಿಎಂ ಯೋಗಿ ಅವರೇ ಸ್ವತಃ ಹಾರ ಹಾಕಿ ಬರಮಾಡಿಕೊಂಡರು.
ತದನಂತರ ರಾಮಾಯಣಕ್ಕೆ ಸಂಬಂಧಿಸಿದ 22 ನಿಮಿಷಗಳ ಲೇಸರ್ ಶೋ, ಸರಯೂ ನದಿಗೆ ಮಹಾ ಆರತಿ ಹಾಗೂ ಅನೇಕ ಧಾರ್ಮಿಕ ಆಚರಣೆ ಗಳನ್ನು ಅದ್ದೂರಿ ಯಾಗಿ ಆಚರಿಸಲಾ ಯಿತು. ಮುಸ್ಲಿಂ ಸಮುದಾಯದವರು ಆಗಮಿಸಿ ರಾಮ್‌ಲೀಲಾ ಕಾರ್ಯ ಕ್ರಮ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿವಿಧ ರಾಜ್ಯಗಳ ಸಾವಿ ರಾರು ಕಲಾವಿದರು ಆಗಮಿಸಿದ್ದರು.
ಇದೇ ವೇಳೆ, ಯೋಗಿ ಅವರ ಅಯೋಧ್ಯೆ ಭೇಟಿಯನ್ನು ಟೀಕಿಸಿರುವ ವಿರೋಧ ಪಕ್ಷಗಳು, ತಮ್ಮ ಸರಕಾರದ ವೈಫಲ್ಯಗಳು ಜನರ ಕಣ್ಣಿಗೆ ರಾಚದಿರುವಂತೆ ಮಾಡಲು ಸಿಎಂ ಯೋಗಿ ಅವರು ಜನರ ಗಮನವನ್ನು ಅಯೋಧ್ಯೆ ಕಡೆಗೆ ಹರಿಸಿದ್ದಾರೆ ಎಂದಿವೆ. ಈ ಟೀಕೆಗಳಿಗೆ, ಪ್ರತ್ಯುತ್ತರ ನೀಡಿದ ಯೋಗಿ, ಅಯೋಧ್ಯೆ ವಿಚಾರ ದಲ್ಲಿ ತಾವು ಹಿಂದಿನಿಂದ ನಂಬಿಕೆ ಇಟ್ಟುಕೊಂಡಿದ್ದು ಇದನ್ನು ಪ್ರಶ್ನಿಸುವ ಹಕ್ಕು ವಿರೋಧ ಪಕ್ಷಗಳಿಗೆ ಇಲ್ಲ. ಅಯೋಧ್ಯೆಯಲ್ಲಿ ಅನಾದಿ ಕಾಲ ದಿಂದಲೂ ದೀಪಾವಳಿಯನ್ನು ಸಡಗರ ದಿಂದ ಆಚರಿಸಲಾಗುತ್ತಿದೆ ಎಂಬ ಸ್ಪಷ್ಟನೆಯನ್ನೂ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.