ಗಾಂಜಾ ಮಾರಾಟ  ಮಂಗಳೂರಿನ ನಕಲಿ ಪತ್ರಕರ್ತ ಸೇರಿ ಇಬ್ಬರ ಬಂಧನ


Team Udayavani, Oct 20, 2017, 3:13 PM IST

Arrest-20-2017.jpg

ಬೆಂಗಳೂರು: ಆನ್‌ಲೈನ್‌ ಮೂಲಕ ಚರಸ್‌ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ನಕಲಿ ಪತ್ರಕರ್ತ ಸೇರಿದಂತೆ ಇಬ್ಬರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಕಲಿ ಪತ್ರಕರ್ತ, ಮಂಗಳೂರು ಮೂಲದ ಅಮೂಲ್‌ ಹಸನ್‌ (23) ಮತ್ತು ರಾಕೇಶ್‌ (26) ಬಂಧಿತರು. ಇವರಿಂದ 3,200 ರೂಪಾಯಿ ಮೌಲ್ಯದ ಒಂದು ಕೆ.ಜಿ. ತೂಕದ ಚರಸ್‌, ನಗದು ಮತ್ತು ಮೂರು ಮೊಬೈಲ್‌ಗ‌ಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಮಂಗಳೂರು, ಬೀದರ್‌ ಮತ್ತು ಒಡಿಶಾದಿಂದ ಚರಸ್‌ ಮತ್ತು ಗಾಂಜಾವನ್ನು ತರಿಸುತ್ತಿದ್ದು, ಇದನ್ನು ಗ್ರಾಹಕರ ಆದ್ಯತೆ ಮೇರೆಗೆ ಪ್ಯಾಕೆಟ್‌ಗಳ ಮೂಲಕ ಸಿದ್ಧಪಡಿಸಿ ಪ್ರತ್ಯೇಕ ವೆಬ್‌ಸೈಟ್‌ ಹಾಗೂ ಫೇಸ್‌ಬುಕ್‌ ಪೇಜ್‌ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಗಳೂರು ಮೂಲದ ಅಮೂಲ್‌ ಹಸನ್‌, ಚರಸ್‌ ಮತ್ತು ಗಾಂಜಾ ವ್ಯಸನಿಯಾಗಿದ್ದು, ಪತ್ರಿಕೋದ್ಯಮ ಪದವಿ ಪಡೆದಿದ್ದಾನೆ. ಮೂರು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಈತನಿಗೆ ವಿದ್ಯಾಭ್ಯಾಸಕ್ಕೆ ಸೂಕ್ತ ಕೆಲಸ ಸಿಗದೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ. ಎರಡು ವರ್ಷಗಳಿಂದ ಆಲ್‌ ಇಂಡಿಯಾ ನ್ಯೂಸ್‌ 24×7 ನ್ಯೂಸ್‌ನಲ್ಲಿ ವರದಿಗಾರ ಎಂಬ ಗುರುತಿನ ಚೀಟಿ ಸಿದ್ಧಪಡಿಸಿಕೊಂಡು ಸುದ್ದಿಗಳ ಸಂಗ್ರಹಿಸುತ್ತಿದ್ದ. ಜತೆಗೆ ನಗರದಲ್ಲಿ ನಡೆಯುತ್ತಿದ್ದ ಮಾದಕ ವಸ್ತು ಮಾರಾಟದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ ಎಂದು ಅವರು ತಿಳಿಸಿದರು.

ಈ ಮಧ್ಯೆ ಹಸನ್‌, 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ, ಗಾರೆ ಕೆಲಸ ಮಾಡಿಕೊಂಡು ಡ್ರಗ್ಸ್‌ ಮಾಫಿಯಾ ಜತೆ ನಂಟು ಹೊಂದಿದ್ದ ರಾಕೇಶ್‌ನನ್ನು ಸಂಪರ್ಕಿಸಿ ದಂಧೆ ಮೂಲಕ ಅಧಿಕ ಹಣ ಸಂಪಾದಿಸಲು ಸಂಚು ರೂಪಿಸಿದ್ದಾನೆ. ಬಳಿಕ ಬೀದರ್‌ನ ದೇವದಾಸ್‌ ಎಂಬಾತನಿಂದ ಚರಸ್‌ ಮತ್ತು ಗಾಂಜಾವನ್ನು ತರಿಸಿದ್ದ ರಾಕೇಶ್‌ ಇದನ್ನು ಬಸ್‌ ಮತ್ತು ರೈಲಿನ ಮೂಲಕ ನಗರಕ್ಕೆ ತರುತ್ತಿದ್ದ. ನಂತರ ಮಾದಕ ವಸ್ತುವನ್ನು ಪ್ರತಿಷ್ಠಿತ ಖಾಸಗಿ ಕಂಪೆನಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ನೇರವಾಗಿ ಮತ್ತು ಆನ್‌ಲೈನ್‌ ಮೂಲಕ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಸಂಗ್ರಹಿಸಿದ ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ, ಕೋರಮಂಗಲ ಠಾಣೆ ಪಿಐ ಮಂಜುನಾಥ್‌ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಗಳ ಪತ್ತೆಗೆ ಸೂಚಿಸಿದ್ದರು. ಅದರಂತೆ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದೆ ಎಂದು ಸೀಮಂತ್‌ ಕುಮಾರ್‌ ಸಿಂಗ್‌ ವಿವರಿಸಿದರು.

ಹಣದಾಸೆಗೆ ಕೃತ್ಯ
ಹಸನ್‌ ಪತ್ರಕರ್ತ ಹಾಗೂ ಪೊಲೀಸ್‌ ಮಾಹಿತಿದಾರ ಎಂದು ಹೇಳಿಕೊಂಡು ನಗರದ ಪೊಲೀಸ ಠಾಣೆಗಳು ಮತ್ತು ಸಿಸಿಬಿ ಅಧಿಕಾರಿಗಳನ್ನು ಭೇಟಿ ಪರಿಚಯಿಸಿಕೊಳ್ಳುತ್ತಿದ್ದ. ಈ ವೇಳೆ ಮಾದಕ ವಸ್ತು ಮಾರಾಟ ದಂಧೆ ಮತ್ತು ತಪ್ಪಿಸಿಕೊಳ್ಳುವ ರೀತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದ ಆರೋಪಿ, ಇತ್ತೀಚೆಗೆ ಕಸ್ತೂರ ಬಾ ರಸ್ತೆಯಲ್ಲಿರುವ ಐಷಾರಾಮಿ ಹೊಟೇಲ್‌ವೊಂದಕ್ಕೆ ಭೇಟಿ ನೀಡಿದ್ದ. ಇಲ್ಲಿ ಸಿಗುವ ಮಾದಕ ವಸ್ತುಗಳ ಮಾರಾಟದ ಬಗ್ಗೆ ಅಲ್ಲಿನ ಸಿಬಂದಿಯಿಂದ ಮಾಹಿತಿ ಸಂಗ್ರಹಿಸಿದ್ದ. ಇದನ್ನೇ ಬಂಡವಾಳವಾಗಿ ಮಾಡಿಕೊಂಡು ರಾಕೇಶ್‌ನನ್ನು ಸಂಪರ್ಕಿಸಿ ನಗರದಲ್ಲಿ ಬೃಹತ್‌ ಮಾದಕ ವಸ್ತು ಜಾಲ ಸೃಷ್ಟಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್‌ಸೈಟ್‌ ಕ್ರಿಯೆಟ್‌ ಮಾಡಿದ್ದ ಪೊಲೀಸರು ಇತ್ತ ಹೆಚ್ಚಾಗಿ ನಡೆಯುತ್ತಿದ್ದ ಆನ್‌ಲೈನ್‌ ದಂಧೆಗೆ ಕಡಿವಾಣ ಹಾಕಲು ಪೊಲೀಸರು ತಂತ್ರ ರೂಪಿಸಿದ್ದರು. ಅದರಂತೆ ವೆಬ್‌ಸೈಟ್‌ ಮತ್ತು ಫೇಸ್‌ಬುಕ್‌ನಲ್ಲಿ ಅಕೌಂಟ್‌ಗಳನ್ನು ಕ್ರಿಯೆಟ್‌ ಮಾಡಿದರು. ಬಳಿಕ ಆರೋಪಿ ಹಸನ್‌ನನ್ನು ಈ ಮೂಲಕ ಸಂಪರ್ಕಿಸಿದ್ದರು. ಅಷ್ಟೇ ಅಲ್ಲದೇ ಆನ್‌ಲೈನ್‌ನಲ್ಲೇ ಮಾದಕ ವಸ್ತುಗಳ ಖರೀದಿಗೆ ಮುಂದಾದರು. ಆದರೆ, ಆರಂಭದಲ್ಲಿ ಬಹಳ ಜಾಗರೂಕತೆಯಿಂದ ವರ್ತನೆ ತೋರಿದ ಹಸನ್‌, ಗ್ರಾಹಕರ ಮೊಬೈಲ್‌ ನಂಬರ್‌ಗಳನ್ನು ಪಡೆದು ಟ್ರೂಕಾಲರ್‌ನಲ್ಲಿ ಹೆಸರುಗಳನ್ನು ಪರಿಶೀಲಿಸುತ್ತಿದ್ದ. ಜತೆಗೆ ಪೊಲೀಸರು ಸೃಷ್ಟಿಸಿದ್ದ ಖಾತೆಗಳ ಬಗ್ಗೆ ಶಂಕಿಸಿದ್ದ. ಇದನ್ನು ಅರಿತ ಪೊಲೀಸರು ತಮ್ಮ ಖಾತೆಗಳಲ್ಲಿ ಮಾದಕ ವ್ಯಸನ ಮಾಡುತ್ತಿರುವ ಮತ್ತು ಐಷಾರಾಮಿ ಪಾರ್ಟಿಯಲ್ಲಿ ಡ್ರಗ್ಸ್‌ ತೆಗೆದುಕೊಳ್ಳುತ್ತಿರುವ ಫೋಟೋ ಮತ್ತು ವೀಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಿದ್ದರು. ಇದನ್ನು ಖಾತರಿ ಪಡಿಸಿಕೊಂಡ ಆರೋಪಿ ಕೊನೆಗೆ ಮಾದಕ ವಸ್ತು ಕೂಡಲು ನಿರ್ಧರಿಸಿದ್ದ. ಬಳಿಕ ಮೊದಲೇ ಪ್ಲಾನ್‌ನಂತೆ ತನಿಖಾ ತಂಡ ಹಸನ್‌ ಸೂಚಿಸಿದ ಸ್ಥಳಕ್ಕೆ ಅಪರಿಚಿತ ಯುವಕನೊಬ್ಬನನ್ನು ಕಳುಹಿಸಿ ಮಾಲು ಸಮೇತ ಬಂಧಿಸಲಾಯಿತು ಎಂದು ಅವರು ಅಧಿಕಾರಿಯೊಬ್ಬರು ತಿಳಿಸಿದರು.

ಗಿಫ್ಟ್ಬಾಕ್ಸ್‌ನಲ್ಲಿ ಮಾದಕ ವಸ್ತು
ಹಸನ್‌ ಬಂಧಿಸಿದ ಬಳಿಕ ಈತನ ಮಾಹಿತಿಯನಾ ° ಧರಿಸಿ ರಾಕೇಶ್‌ನ ಬಂಧನಕ್ಕೆ ಬಲೆ ಬೀಸಿದ ವಿಶೇಷ ತಂಡ ಮೊಬೈಲ್‌ ಮೂಲಕ ಈತನನ್ನು ಸಂಪರ್ಕಿಸಿ ಚರಸ್‌ ತರುವಂತೆ ಸೂಚಿಸಿತ್ತು. ಅದರಂತೆ ಆರೋಪಿ ಗಿಫ್ಟ್ ಬಾಕ್ಸ್‌ನಲ್ಲಿ ಒಂದು ಕೆ.ಜಿ.ಚರಸ್‌ ಅನ್ನು ಬಸ್‌ ಮೂಲಕ ನಗರಕ್ಕೆ ತಂದಿದ್ದ. ಈತ ಬಸ್‌ ನಿಲ್ದಾಣದಲ್ಲಿರುವಾಗಲೇ ಮಾಲು ಸಮೇತ ಆರೋಪಿಯನ್ನು ಬಂಧಿಸಲಾಯಿತು. ಈ ಹಿಂದೆಯೂ ಕೂಡ ಆರೋಪಿ ಸ್ವೀಟ್‌ ಬಾಕ್ಸ್‌ ಮತ್ತು ಗಿಫ್ಟ್ ಬಾಕ್ಸ್‌ಗಳಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಮಾದಕ ವಸ್ತುಗಳನ್ನು ತರುತ್ತಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಟ್ಸ್‌ಆ್ಯಪ್‌ ಗ್ರೂಪ್‌ ಕ್ರಿಯೇಟ್‌ ಮಾಡಿದ್ದ
ಈ ಹಿಂದೆ ಹಸನ್‌ ಸುದ್ದಿ ಸಂಗ್ರಹಿಸಲು ಹಲವು ಕಾರ್ಯಕ್ರಮಗಳು, ಪ್ರತಿಭಟನಾ ಸ್ಥಳಗಳಿಗೆ ಬರುತ್ತಿದ್ದ. ಈ ವೇಳೆ ಪರಿಚಯಿಸಿಕೊಂಡಿದ್ದ ಪ್ರತಿಷ್ಠಿತ ಮಾಧ್ಯಮಗಳ ಪತ್ರಕರ್ತರ ನಂಬರ್‌ಗಳನ್ನು ಪಡೆದು ವಾಟ್ಸ್‌ಆ್ಯಪ್‌ ಗ್ರೂಪ್‌ ಅನ್ನು ಕೂಡ ಕ್ರಿಯೆಟ್‌ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

MM-Singh

ದೇಶದ ಆರ್ಥಿಕತೆಗೆ ಹೊಸ ಭಾಷ್ಯ ಬರೆದ ಡಾ. ಮನಮೋಹನ್‌ ಸಿಂಗ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswamy

Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.