ಪದ್ಮಾವತಿ ಪುರಾಣ
Team Udayavani, Oct 20, 2017, 4:40 PM IST
ಸಂಜಯ್ ಲೀಲಾ ಭನ್ಸಾಲಿಯ ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಧರಿಸಿದ ಒಡವೆಗಳು ಮತ್ತು ಉಡುಪು ಈಗ ಬಾಲಿವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಎಷ್ಟೆಂದರೆ ಬಾಹುಬಲಿಯಂತಹ ಅದ್ಭುತ ಚಿತ್ರವನ್ನು ನಿರ್ದೇಶಿಸಿದ ರಾಜಾಮೌಳಿ ಕೂಡ ಪದ್ಮಾವತಿಯ ದೃಶ್ಯ ವೈಭವವನ್ನು ಕಂಡು ಬೆರಗಾಗಿದ್ದಾರಂತೆ. ಬಾಹುಬಲಿಯ ಬಳಿಕ ಭಾರತದ ಚಿತ್ರರಂಗದ ಇತಿಹಾಸದಲ್ಲಿ ಪದ್ಮಾವತಿ ಇನ್ನೊಂದು ಮೈಲುಗಲ್ಲಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ ರಾಜಾಮೌಳಿ.
ಇಷ್ಟಕ್ಕೂ ಪದ್ಮಾವತಿ ಈ ಪರಿ ಕುತೂಹಲ ಕೆರಳಿಸಲು ಕಾರಣ ನಾಯಕಿ ದೀಪಿಕಾ ಪಡುಕೋಣೆಯ ಒಡವೆಗಳು. 13ನೇ ಶತಮಾನದ ಇತಿಹಾಸದ ಮರುಸೃಷ್ಟಿಯಾಗಿರುವ ಪದ್ಮಾವತಿಯಲ್ಲಿ ದೀಪಿಕಾ ಪಡುಕೋಣೆ ರಜಪೂತ ರಾಣಿ ಪದ್ಮಿನಿಯಾಗಿ ನಟಿಸುತ್ತಿದ್ದಾಳೆ. ರಾಜ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಹೀದ್ ಕಪೂರ್ ಮತ್ತು ಅಲ್ಲಾವುದ್ದೀನ್ ಖೀಲ್ಜಿಯಾಗಿ ರಣವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಮೂವರಿಗೂ ಪದ್ಮಾವತಿ ಒಂದಲ್ಲ ಒಂದು ಕಾರಣಕ್ಕಾಗಿ ಛಾಲೆಂಜಿಂಗ್ ಆಗಿದೆ. ಪದ್ಮಾವತಿಯಲ್ಲಿ ದೀಪಿಕಾ ಪಡುಕೋಣೆ ಭರ್ತಿ 400 ಕೆಜಿ ಒಡವೆಗಳನ್ನು ಧರಿಸಿದ್ದಾಳೆ. ಇವೆಲ್ಲ ಅಪ್ಪಟ ಚಿನ್ನದಿಂದಲೇ ತಯಾರಿಸಿರುವ ಆಭರಣಗಳು. ಮೂಗುತಿಯಿಂದ ಹಿಡಿದು ಕಾಲುಂಗುರ ತನಕ ಪ್ರತಿಯೊಂದು ಒಡವೆಯನ್ನು 13ನೇ ಶತಮಾನದ ರಜಪೂತ ಶೈಲಿಯಲ್ಲಿ ಮರುಸೃಷ್ಟಿಸಲಾಗಿದೆ. ನೂರಾರು ಅಕ್ಕಸಾಲಿಗರು ದಿನಗಟ್ಟಲೆ ಈ ಆಭರಣಗಳ ಕುಸುರಿ ಕೆಲಸ ಮಾಡಿದ್ದಾರೆ.
200ಕ್ಕೂ ಹೆಚ್ಚು ಚಿನ್ನದ ಕುಸುರಿ ಕೆಲಸಗಾರರು ಸುಮಾರು 600 ದಿನ ಕೆಲಸ ಮಾಡಿ ನಾಲ್ಕು ಕ್ವಿಂಟಾಲ್ ಆಭರಣಗಳನ್ನು ಸಿದ್ಧಪಡಿಸಿದ್ದಾರೆ. ಪ್ರತಿಯೊಂದು ದೃಶ್ಯವೂ ನೈಜವಾಗಿರಬೇಕೆಂಬ ಉದ್ದೇಶದಿಂದ ಎಲ್ಲ ಆಭರಣಗಳನ್ನು ಅಪ್ಪಟ ಚಿನ್ನದಲ್ಲಿಯೇ ತಯಾರಿಸಲಾಗಿದೆ. ಆಭರಣ ಮಳಿಗೆ ತನಿಷ್ ಈ ಕೆಲಸದಲ್ಲಿ ಭನ್ಸಾಲಿ ಜತೆಗೆ ಕೈಜೋಡಿಸಿದೆ. ರಾಣಿ ಪದ್ಮಾವತಿ ಶೌರ್ಯ ಮಾತ್ರವಲ್ಲದೆ ಶ್ರೀಮಂತಿಕೆಯಲ್ಲೂ ಉಚ್ಛಾ†ಯ ಸ್ಥಿತಿಯಲ್ಲಿದ್ದ ರಜಪೂತ ರಾಜಮನೆತನಕ್ಕೆ ಸೇರಿದವಳು. ಹೀಗಾಗಿ, ಚಿತ್ರದಲ್ಲಿ ಉಪಯೋಗಿಸಿದ ಪ್ರತಿಯೊಂದು ವಸ್ತುವಿಗೂ ರಾಜವೈಭವದ ಸ್ಪರ್ಷ ನೀಡಲಾಗಿದೆ.
“”ಮಣಭಾರದ ಒಡವೆಗಳು ಮತ್ತು ಉಡುಪುಗಳನ್ನು ಧರಿಸಿ ಗಂಟೆಗಟ್ಟಲೆ ಚಿತ್ರೀಕರಣದಲ್ಲಿ ಭಾಗವಹಿಸುವುದೇ ಒಂದು ವಿಶಿಷ್ಟ ಅನುಭವವಾಗಿತ್ತು. ಆಭರಣಗಳ ಭಾರಕ್ಕೆ ಕೆಲವೊಮ್ಮೆ ಕುಸಿದು ಹೋದಂತಾಗುತ್ತಿತ್ತು. ಒಡವೆಗಳನ್ನು ಧರಿಸಲು ಮತ್ತು ಕಳಚಳು ಹಲವು ತಾಸುಗಳ ಬೇಕಾಗುತ್ತಿತ್ತು. ಇಷ್ಟೆಲ್ಲ ಕಷ್ಟಪಟ್ಟ ಫಲಿತಾಂಶ ಈಗ ಕಂಡು ಬರುತ್ತಿದೆ”ಎಂದು ದೀಪಿಕಾ ಚಿತ್ರೀರಕರಣದ ಅನುಭವ ಬಿಚ್ಚಿಟ್ಟಿದ್ದಾಳೆ. ಡಿ. 1ರಂದು ತೆರೆಗೆ ಬರಲಿರುವ ಪದ್ಮಾವತಿ ಈಗಾಗಲೇ ಅಪಾರ ಕುತೂಹಲ ಕೆರಳಿಸಿದ್ದಾಳೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.