7ಡಿ ಸಿನಿಮಾ ನೋಡಿದ್ದೀರಾ?
Team Udayavani, Oct 21, 2017, 12:26 PM IST
7ಡಿ ಸಿನಿಮಾ ಪ್ರದರ್ಶನ ನಗರದಲ್ಲಿ ಏರ್ಪಾಡಾಗಿದೆ. 3ಡಿ ಸಿನಿಮಾ ಅಂದರೇನೆಂದು ಬಹುತೇಕರಿಗೆ ಗೊತ್ತೇ ಇರುತ್ತೆ. ಮೂವಿ ಪರದೆ ಮೇಲೆ ಮೂಡುವ ಚಿತ್ರಗಳು 3 ಆಯಾಮಗಳಲ್ಲಿ, ಸರಳವಾಗಿ ಹೇಳಬೇಕೆಂದರೆ ಕಣ್ಣಮುಂದೆಯೇ ನಡೆಯುತ್ತಿರುವಂತೆ ತೋರುತ್ತವೆ. ಆದರೆ 7ಡಿ ಬಗ್ಗೆ ಕೇಳಿದ್ದೀರಾ? 7ಡಿ ಬಗ್ಗೆ ತಿಳಿದುಕೊಳ್ಳೋ ಮುಂಚೆ 4ಡಿ, 5ಡಿ ಬಗ್ಗೆ ಹೇಳುವುದು ಸೂಕ್ತ. ನಗರದಲ್ಲಿ 4ಡಿ, 5ಡಿ ಸಿನಿಮಾಗಳ ಪ್ರದರ್ಶನ ಆಗ್ಗಾಗ್ಗೆ ನಡೆಯುತ್ತಲೇ ಇರುತ್ತವೆ.
ಈ ಸಿನಿಮಾಗಳ ವೈಶಿಷ್ಟವೆಂದರೆ, ಉದಾಹರಣೆಗೆ ಪರದೆ ಮೇಲೆ ಬಾಂಬ್ ಸಿಡಿದರೆ ಥಿಯೇಟರ್‌ನಲ್ಲಿ ನೀವು ಕೂತ ಸೀಟು ಕೂಡಾ ಅಲುಗಾಡುವುದು, ಸೊಂಡ್ ಎಫೆಕ್ಟ್ಗಳು ಎಷ್ಟು ಪರಿಣಾಮಕಾರಿ ಎಂದರೆ ನಿಮ್ಮ ಹತ್ತಿರದಲ್ಲೇ ಸ್ಫೋಟಿಸಿದ ಅನುಭವ ನಿಮ್ಮದಾಗುತ್ತದೆ. ಈ ರೀತಿ ರಿಯಲ್ ಎಫೆಕ್ಟುಗಳನ್ನು ಈ ಸಿನಿಮಾ ಥಿಯೇಟರ್‌ಗಳು ಒದಗಿಸುತ್ತವೆ.
7ಡಿ ಎಂದರೇನು?
ಸಿನಿಮಾ ವೀಕ್ಷಣೆಯ ನೆಕ್ಸ್ಟ್ ಲೆವೆಲ್ 7ಡಿ ಸಿನಿಮಾ. ಇಲ್ಲಿ ನಿಮ್ಮ ಕಣ್ಮುಂದೆ ನಡೆಯುತ್ತಿರುವ ದೃಶ್ಯಗಳಿಗನುಣವಾಗಿ ಥಿಯೇಟರ್‌ನಲ್ಲಿ ಎಫೆಕ್ಟುಗಳನ್ನು ಬಳಸಲಾಗುತ್ತದೆ. ತಣ್ಣೀರ ಸಿಂಚನ, ಬಿಸಿ ಗಾಳಿ, ಮಂಜಿನ ಎಫೆಕ್ಟು, ಇವೆಲ್ಲದರ ಜೊತೆಗೆ ಕಣ್ಮುಂದೆ ನಡೆಯುವ ದೃಶ್ಯಗಳನ್ನು ಪ್ರತಿಯೊಬ್ಬ ವೀಕ್ಷಕನೂ ನಿಯಂತ್ರಿಸಬಹುದಾಗಿದೆ. ಅದು ಹೇಗೆ ಸಾಧ್ಯವಾಗುತ್ತದೆಯೆಂದರೆ ಇಲ್ಲಿ ಪ್ರತಿ ಗ್ರಾಹಕರಿಗೂ ವರ್ಚುವಲ್ ಗಾಗಲ್ಸ್‌ಅನ್ನು ನೀಡಲಾಗುತ್ತದೆ.
ಇಂಥ ರಿಯಲ್ ಅನುಭವವನ್ನು ನಿಮ್ಮದಾಗಿಸಿಕೊಳ್ಳಲು ಒಂದು ಅವಕಾಶ ಇಲ್ಲಿದೆ. ಇಲ್ಲಿನ ಥಿಯೇಟರ್ ರೋಬೋಟಿಕ್ ತಂತ್ರಜ್ಞಾನವನ್ನು ಹೊಂದಿದೆ. 4ಡಿ, 5ಡಿ ಸಿನಿಮಾಗಳ ಎಫೆಕ್ಟುಗಳನ್ನೂ ಒಳಗೊಂಡಿದೆ ಈ ಥಿಯೇಟರ್. ಮಳೆ, ಗಾಳಿ, ಸಿಡಿಲು, ಗುಡುಗನ್ನೂ ನೀವು ಸೀಟ್‌ನಲ್ಲಿ ಕುಳಿತುಕೊಂಡೇ ನೀವು ಅನುಭವಿಸಬಹುದು.
ಎಲ್ಲಿ?: ಲೋನಾ ಎಂಟರ್‌ಟೇನ್ಮೆಂಟ್ ಪ್ರೈ. ಲಿ, ವರ್ಜಿನಿಯಾ ಮಾಲ್, ವೈಟ್‌ಫೀಲ್ಡ್
ಯಾವಾಗ?: ಅಕ್ಟೋಬರ್ 21-31
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.