ಪಾರಿವಾಳಗಳ ಉಪಟಳ ನಿಗ್ರಹಕ್ಕೆ ಬಲೆ ಅಳವಡಿಕೆ
Team Udayavani, Oct 21, 2017, 12:47 PM IST
ಹುಮನಾಬಾದ: ಬಸ್ ನಿಲ್ದಾಣದಲ್ಲಿ ಆಸನಗಳ ಮೇಲೆ ಪಾರಿವಾಳಗಳು ಗಲೀಜು ಮಾಡುತ್ತವೆ ಎಂದು ಬಲೆ ಅಳವಡಿಸಿದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಹಲವು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಪಾರಿವಾಳಗಳು ಸಾವಿನ ದವಡೆಗೆ ಸಿಲುಕಿ ನರಳುತ್ತಿವೆ.
ಬಸ್ ನಿಲ್ದಾಣದ ಆಸನಗಳ ಮೇಲೆ ಪಕ್ಷಿಗಳು ಹಿಕ್ಕೆ ಹಾಕಿ ಆಸನಗಳನ್ನು ಹಾಳು ಮಾಡುತ್ತಿವೆ ಎಂದು ಸಾರಿಗೆ ಘಟಕದ ವ್ಯವಸ್ಥಾಪಕರು ಪಕ್ಷಿಗಳು ಕುಳಿತುಕೊಳ್ಳುವ ಸ್ಥಳದಲ್ಲಿ ಬಲೆ ಅಳವಡಿಸಿದ್ದಾರೆ. ಆ ಬಲೆಯಲ್ಲಿ ಸಿಲುಕಿ ಹತ್ತಾರು ಪಕ್ಷಿಗಳು ಸಾವನ್ನಪ್ಪುತ್ತಿವೆ. ಇದನ್ನು ನೋಡಿದ ಪ್ರಯಾಣಿಕರು ಕರುಣೆ ತೊರುತ್ತಿದ್ದರೆ, ಅಲ್ಲಿನ ಅಧಿಕಾರಿಗಳು ಅವುಗಳ ಕಡೆಗೆ ತಿರುಗಿಯೂ ನೋಡದೇ ಮಾನವೀಯತೆ ಮರೆತಿದ್ದಾರೆ.
ಹಲವು ವರ್ಷಗಳಿಂದ ನೂರಾರು ಪಕ್ಷಿಗಳು ಬಸ್ ನಿಲ್ದಾಣದಲ್ಲಿ ವಾಸವಾಗಿವೆ. ಗಲೀಜು ಮಾಡುತ್ತಿರುವುದೇನೊ ಸತ್ಯ. ಆದರೆ
ಅವುಗಳ ವಾಸಕ್ಕೆ ಅಡ್ಡಿಪಡಿಸಿ, ಮರಣಕ್ಕೆ ನೂಕಿರುವ ಹಿನ್ನೆಲೆಯಲ್ಲಿ ಜನರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಬಸ್ ನಿಲ್ದಾಣ ಪಕ್ಕದ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಕೂಡ ಪ್ರತಿನಿತ್ಯ ನೂರಾರು ಪಕ್ಷಿಗಳು ವಾಸ ಮಾಡುತ್ತವೆ. ಪೊಲೀಸ್ ಅಧಿಕಾರಿಗಳು ಅವುಗಳನ್ನು ಓಡಿಸದೇ ಪ್ರತ್ಯೆಕ ವ್ಯವಸ್ಥೆ ಕಲ್ಪಿಸಿ ವಾಸಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೇ ಪಕ್ಷಿಗಳಿಗೆ ಕುಡಿಯಲು ನೀರು, ಆಹಾರವನ್ನೂ ನೀಡಲಾಗುತ್ತಿದೆ. ಹಾಗಾಗಿ ಪಕ್ಷಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿವೆ. ಬಸ್ ನಿಲ್ದಾಣದ ಅಧಿಕಾರಿಗಳು ಕೂಡ ಇದನ್ನು ಅನುಸರಿಸಿ ಪಕ್ಷಿ ಪ್ರೇಮ ಬೆಳೆಸಿಕೊಳ್ಳಬೇಕಾಗಿದೆ.
ಇಂದಿನ ದಿನಗಳಲ್ಲಿ ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅವುಗಳ ರಕ್ಷಣೆಗೆ ಅಧಿಕಾರಿಗಳು ಮುಂದಾಗಬೇಕು. ಬಸ್ ನಿಲ್ದಾಣದಲ್ಲಿ ವಾರಿವಾಳಗಳೇ ಹೆಚ್ಚು ಸಂಖ್ಯೆಯಲ್ಲಿದ್ದು, ಅವುಗಳ ಜೀವನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಕರ್ನಾಟಕದ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಮನೋಜ ಸಿತಾಳೆ, ಖಯುಮ ಮೌಜನ್, ಬಾಬುಮಿಯ್ನಾ, ರಾಮು ಪರಿಟ, ರಾಜಕುಮಾರ ಜಟಗೊಂಡ, ಸಂತೋಷರೆಡ್ಡಿ, ಅಮರಸಿಂಗ್ ಠಾಕುರ್, ರಾಜಕುಮಾರ ಸ್ವಾಮಿ, ಅನಿಲಸಿಂಗ್, ನಿತಿನಸಿಂಗ್ ರಾಜಕುಮಾರ ಯಾದಲೆ, ಕಾರ್ತಿಕ ಮುತ್ತಂಗಿ ಬಸ್ ಘಟಕದ ಮುಖ್ಯಸ್ಥರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.