ಅನಾಥ ಮಕ್ಕಳ ಅಣ್ಣಯ್ಯ
Team Udayavani, Oct 21, 2017, 1:17 PM IST
ರಾಮದುರ್ಗ ತಾಲೂಕಿನ ಎಂ. ಚಂದರಗಿ ಹತ್ತಿರದ ಕೊರಕೊಪ್ಪದ ರೇವಣಸಿದ್ಧೇಶ್ವರ ಶರಣರು ತಾವು ಶಿಕ್ಷಣ ವಂಚಿತರಾದರೂ ಶಿಕ್ಷಣಾಕಾಂಕ್ಷಿಗಳಿಗೆ ಆಶ್ರಯ ನೀಡಿ ಅವರ ಜ್ಞಾನದ ದೀಪ ಬೆಳಗುತ್ತಿದ್ದಾರೆ.
ಕಾಯಕಯೋಗಿಗಳಾಗಿರುವ ಇವರದು ವಿಶಿಷ್ಟ ಮತ್ತು ಅನುಕರಣೀಯ ಸೇವೆ. ಸಮಾಜಮುಖೀ ವ್ಯಕ್ತಿತ್ವ. ಅನಾಥರ ಪಾಲನೆ ಮಾಡುತ್ತ ಅನಾಥಪ್ರಜ್ಞೆ ಕಾಡದಂತೆ ಅವರ ವ್ಯಕ್ತಿತ್ವ ರೂಪಿಸುತ್ತಿರುವುದು ಇವರ ಹೆಗ್ಗಳಿಕೆ.
ಮೂಲತಃ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ಕಡುಬಡ ಕುಟುಂಬದಲ್ಲಿ ಜನಿಸಿದ ರೇವಣ ಸಿದ್ದೇಶ್ವರ ಶರಣರು(ಮೂಲ ಹೆಸರು ಯಲ್ಲಪ್ಪ ಸಿದ್ದಪ್ಪ ಬಾಂಗಿ). ಕುರುಬ ಸಮುದಾಯಕ್ಕೆ ಸೇರಿದವರು.
ಶಾಲೆ ಕಲಿಯಬೇಕೆಂಬ ಅದಮ್ಯ ಆಸೆ ಇವರಿಗಿತ್ತು. ಆದರೆ ಮನೆಯಲ್ಲಿ ಬಡತನವಿದ್ದುದರಿಂದ ಹಿರಿಯ ಸಹೋದರನನ್ನು ಮಾತ್ರ ಶಾಲೆಗೆ ಕಳುಹಿಸಲಾಯಿತು. ಇವರನ್ನು ಕುರಿ ಮೇಯಿಸಲು ಕಳುಹಿಸಲಾಯಿತು. ಬೇಸರಗೊಂಡ ಇವರು, ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ಸಂಕಲ್ಪ ಮಾಡಿ ಗ್ರಾಮದಲ್ಲಿರುವ ಕೆಂಪಯ್ಯಸ್ವಾಮಿ ಮಠದಲ್ಲಿ ಮೊದಲು ಪೂಜೆ ಮಾಡುತ್ತಾ ಕೆಲ ದಿನಗಳವರೆಗೆ ಕಾಲ ನೂಕಿದರು. ನಂತರ 9 ವರ್ಷ ಕಲ್ಲಿನ ಕ್ವಾರಿಯಲ್ಲಿ ಕಾರ್ಮಿಕರಾಗಿ, ಗೌಂಡಿಗಳ ಕೈಯಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ಆಮೇಲೆ ದೈವತ್ವದ ಕಡೆಗೆ ಮನಸ್ಸು ವಾಲಿದ್ದರಿಂದ ಸನ್ಯಾಸ ಸ್ವೀಕರಿಸುವ ನಿರ್ಧಾರಕ್ಕೆ ಬಂದರು. ಎಂ.ಚಂದರಗಿ ಗಡದೇಶ್ವರ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳಿಂದ 1999ರಲ್ಲಿ ಲಿಂಗದೀಕ್ಷೆ ಹಾಗೂ ಸನ್ಯಾಸ ದೀಕ್ಷೆ ಪಡೆದು ಕಠೊರ ಮೌನಾನುಷ್ಠಾನ ಮಾಡಿದರು.
ಕುಟೀರ ನಿರ್ಮಾಣ
ನಂತರ ಅನಾಥ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಕೊರಕೊಪ್ಪ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನೆಲೆ ನಿಂತರು. ಗ್ರಾಮಸ್ಥರ ಸಹಕಾರದಿಂದ ದೇವಸ್ಥಾನದ ಪಕ್ಕದಲ್ಲಿ ಸಣ್ಣದೊಂದು ಕುಟೀರ ನಿರ್ಮಿಸಿಕೊಂಡು ಅನಾಥ ಮಕ್ಕಳಿಗೆ ಸಂಪೂರ್ಣ ಶಿಕ್ಷಣ ಒದಗಿಸುವ ಕಾಯಕವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ 20ಕ್ಕೂ ಹೆಚ್ಚು ಅನಾಥ ಮಕ್ಕಳನ್ನಿಟ್ಟುಕೊಂಡು ಅವರಿಗೆ ಅಡುಗೆ ಮಾಡುವುದಲ್ಲದೇ ಪ್ರೀತಿ ಮಮತೆಯಿಂದ ನೋಡಿಕೊಳ್ಳುತ್ತಿದ್ದಾರೆ.
ಇದೇ ಅನಾಥ ಕುಟೀರದಲ್ಲಿದ್ದುಕೊಂಡು ಶಿಕ್ಷಣ ಪಡೆದ 10 ಮಕ್ಕಳು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಇವರಲ್ಲಿ ನಾಲ್ವರು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು, ಇಬ್ಬರು ಎಂಜನೀಯರ್‌ಗಳಾಗಿದ್ದು, ಇಬ್ಬರು ಯೋಧರು ಹಾಗೂ ಇಬ್ಬರು ಖಾಸಗಿ ಉದ್ಯೋಗ ಪಡೆದುಕೊಂಡಿದ್ದಾರೆ.
ಶರಣರ ಜೋಳಿಗೆಯೇ ಆಧಾರ
ಶರಣರು ಆಸುಪಾಸಿನ ಗ್ರಾಮಗಳಿಗೆ ಭೇಟಿ ನೀಡಿ ಭಿಕ್ಷೆ ಬೇಡುವ ಮೂಲಕ ಆಹಾರ ಧಾನ್ಯಗಳನ್ನು, ಬಟ್ಟೆ ಬರೆಗಳನ್ನು, ಹಣವನ್ನು ಸಂಗ್ರಹಿಸಿ, ಅನಾಥ ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. 4 ವರ್ಷದಿಂದ 14 ವರ್ಷದ ಮಕ್ಕಳು ಅನಾಥಾಶ್ರಮದಲ್ಲಿದ್ದು, ಅವರಿಗೆ ಎಲ್ಲರ ರೀತಿಯ ಸೌಕರ್ಯ ಒದಗಿಸಿದ್ದಾರೆ. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಸ್ನಾನಗೃಹ, ವಸತಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸ್ನಾನದ ಬಿಸಿನೀರಿಗಾಗಿ ಬಾಯ್ಲರ್, ಬೆಳಕಿಗಾಗಿ ಸೋಲಾರ್ ಪ್ಯಾನೆಲ್ ಅಳವಡಿಸಿದ್ದಾರೆ.
ಆಶ್ರಮದ ದಿನಚರಿ
ನಿತ್ಯ ಬೆಳಗ್ಗೆ 5.30ಕ್ಕೆ ಮಕ್ಕಳನ್ನು ಎಬ್ಬಿಸಿ 6 ಗಂಟೆಗೆ ಪ್ರಾರ್ಥನೆ, ಯೋಗ, ಧ್ಯಾನ ಮಾಡಿಸುತ್ತಾರೆ. 7 ಗಂಟೆಗೆ ಚಹಾ-ಬಿಸ್ಕೆಟ್, ಸ್ನಾನದ ನಂತರ ಉಪಹಾರ ಮುಗಿಸಿ ಶಾಲೆಗೆ ಹೋಗುವ ವೇಳೆವರೆಗೂ ಓದುವುದು. ನಂತರ ಮಕ್ಕಳು ಶಾಲೆಗಳಿಗೆ ಹೋಗುತ್ತಾರೆ. ಮಧ್ಯಾಹ್ನ ಶಾಲೆಯಲ್ಲೇ ಬಿಸಿಯೂಟ ಮಾಡುತ್ತಾರೆ. ನಂತರ ಸಂಜೆ ಆಶ್ರಮಕ್ಕೆ ಮರಳಿದ ಮೇಲೆ ಉಪಾಹಾರ (ಚುರಮರಿ, ಚೂಡಾ) ನೀಡುತ್ತಾರೆ. ಸಂಜೆ ವೇಳೆ ವಚನ, ಪ್ರವಚನ, ಧಾರ್ಮಿಕ ನೀತಿಪಾಠ ಮಾಡುತ್ತಾರೆ. ನಂತರ ಶಾಲೆಯ ಚಟುವಟಿಕೆಗಳ ಗೃಹಪಾಠ ಮಾಡುತ್ತಾರೆ. ರಾತ್ರಿ 8-30 ರಿಂದ 9 ರ ವರೆಗೂ ರಾತ್ರಿ ಇಂತಹ ಆಶ್ರಮಗಳಿಗೆ ಧನಸಹಾಯ ಮಾಡಿದರೆ ಅನಾಥ ಮಕ್ಕಳಿಗೆ ಆಸರೆ ಒದಗಿಸಿದಂತಾಗುತ್ತದೆ.
ಮನುಷ್ಯ ಜನ್ಮ ಎತ್ತಿದ ಮೇಲೆ ಸಾರ್ಥಕ ಬದುಕು ಸಾಗಿಸಬೇಕೆಂಬ ಮಹಾತ್ಮರ ವಾಣಿಯಂತೆ ಲಿಂಗದೀಕ್ಷೆ, ಸನ್ಯಾಸದೀಕ್ಷೆ ಪಡೆದುಕೊಂಡು ಅನಾಥ ಮಕ್ಕಳಿಗೆ ಸಹಾಯ ಮಾಡುವ ಕಾಯಕ ಮಾಡುತ್ತಿದ್ದೇನೆ. ರಾಮದುರ್ಗ ಶಾಸಕ ಅಶೋಕ ಪಟ್ಟಣ ಸೇರಿದಂತೆ ಅನೇಕ ದಾನಿಗಳು ವೈಯಕ್ತಿಕವಾಗಿ ಧನ ಸಹಾಯ ಮಾಡುತ್ತಿದ್ದಾರೆ ಎನ್ನುತ್ತಾರೆ ಶ್ರೀರೇವಣ ಸಿದ್ದೇಶ್ವರ ಸ್ವಾಮೀಜಿ, ಕೊರಕೊಪ್ಪ.
ಈರನಗೌಡ ಪಾಟೀಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್ ಚೋಲ್‌ಗೆ ಬೇಡಿಕೆ
IPL Auction: ಗುಜರಾತ್ ಟೈಟಾನ್ಸ್ ಪಾಲಾದ ಸಿರಾಜ್; ಆರ್‌ಸಿಬಿಗೆ ಹೃದಯಸ್ಪರ್ಶಿ ಸಂದೇಶ
EVM Issue: ಇವಿಎಂಗೂ ಮುನ್ನ ರಾಹುಲ್‌ರನ್ನು ಬದಲಿಸಿ ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್
MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ
Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.