ಕಠಿನ ಸವಾಲು: ವಿಲಿಯಮ್ಸನ್
Team Udayavani, Oct 22, 2017, 6:30 AM IST
ಮುಂಬಯಿ: ಭಾರತವನ್ನು ಅವರದೇ ನೆಲದಲ್ಲಿ ಎದುರಿಸುವುದು ನಿಜಕ್ಕೂ ಕಠಿನ ಸವಾಲು ಎಂದಿದ್ದಾರೆ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್.
ಶನಿವಾರದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.”ಭಾರತ ತಂಡ ತವರಿನಲ್ಲಿ ಅತ್ಯುತ್ತಮ ದಾಖಲೆ ಹೊಂದಿದೆ. ತವರಿನಲ್ಲಿ ಭಾರತ ವಿಶ್ವದಲ್ಲೇ ಅತ್ಯಂತ ಬಲಿಷ್ಠ ತಂಡ. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನು ನೀಡುವುದು ಅನಿವಾರ್ಯ. ಕಳೆದ ಸಲ ನಮ್ಮ ಆಟ ಶ್ರೇಷ್ಠವಲ್ಲದಿದ್ದರೂ ಉತ್ತಮ ಮಟ್ಟದಲ್ಲೇ ಇತ್ತು. ಈ ಬಾರಿ ಅದಕ್ಕಿಂತಲೂ ಮಿಗಿಲಾದ ಪ್ರದರ್ಶನ ನೀಡುವುದು ಮುಖ್ಯ’ ಎಂದು ವಿಲಿಯಮ್ಸನ್ ಹೇಳಿದರು.
ಕಳೆದ ವರ್ಷ ಭಾರತಕ್ಕೆ ಬಂದಾಗ ನ್ಯೂಜಿಲ್ಯಾಂಡ್ ಏಕದಿನ ಸರಣಿಯನ್ನು 3-2 ಅಂತರದಿಂದ ಕಳೆದುಕೊಂಡಿತ್ತು. ವಿಶಾಖಪಟ್ಟಣದ ಸರಣಿ ನಿರ್ಣಾಯಕ ಪಂದ್ಯವನ್ನು ಕಿವೀಸ್ 190 ರನ್ನುಗಳಿಂದ ಸೋತದ್ದನ್ನು ವಿಲಿಯಮ್ಸನ್ ನೆನಪಿಸಿಕೊಂಡರು. ಇಂಥ ಫಲಿತಾಂಶ ಮರುಕಳಿಸಬಾರದು ಎಂದರು.
“ಗಪ್ಟಿಲ್-ಮುನ್ರೊ ನಮ್ಮ ಆರಂಭಿಕರು. ಇಬ್ಬರೂ ಬೀಸು ಹೊಡೆತದ ಬ್ಯಾಟ್ಸ್‌ಮನ್‌ಗಳು. ಲ್ಯಾಥಂ ಮಧ್ಯಮ ಕ್ರಮಾಂಕದಲ್ಲಿ ಬರಲಿದ್ದಾರೆ’ ಎಂದೂ ಕಿವೀಸ್ ಕಪ್ತಾನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.