ರಹಾನೆ 3ನೇ ಓಪನರ್: ಕೊಹ್ಲಿ
Team Udayavani, Oct 22, 2017, 6:45 AM IST
ಮುಂಬಯಿ: ಅಜಿಂಕ್ಯ ರಹಾನೆ ನಮ್ಮ ತಂಡದ ತೃತೀಯ ಓಪನರ್ ಎನ್ನುವ ಮೂಲಕ ನಾಯಕ ವಿರಾಟ್ ಕೊಹ್ಲಿ, ಇನ್-ಫಾರ್ಮ್ ಬ್ಯಾಟ್ಸ್‌ಮನ್ ರಹಾನೆಗೆ ಪ್ರಸಕ್ತ ಸರಣಿಯಲ್ಲಿ ಯಾವ ಜಾಗ ಕಾದಿದೆ ಎಂಬುದನ್ನು ಸ್ಪಷ್ಟಪಡಿಸಿದಂತಾಗಿದೆ. ಶಿಖರ್ ಧವನ್ ಆಗಮನದಿಂದ ರಹಾನೆ ಆರಂಭಿಕನ ಸ್ಥಾನವನ್ನು ಕಳೆದುಕೊಳ್ಳಲಿದ್ದು, ಅವರಿಗೆ ಮಧ್ಯಮ ಕ್ರಮಾಂಕದಲ್ಲೂ ಜಾಗ ಇಲ್ಲ ಎಂಬುದು ಖಾತ್ರಿಯಾಗಿದೆ.
“ತೃತೀಯ ಆರಂಭಿಕನಾಗಿ ರಹಾನೆ ತಮ್ಮ ಅವಕಾಶವನ್ನು ಖಂಡಿತ ಗಳಿಸಲಿದ್ದಾರೆ. ಈ ಸ್ಥಾನಕ್ಕೆ ಕೆ.ಎಲ್. ರಾಹುಲ್ ಅವರಿಂದಲೂ ಪೈಪೋಟಿ ಇದೆ. ಆದರೆ “ಜಿಂಕ್ಸ್’ (ರಹಾನೆ) ಉತ್ತಮ ಪ್ರದರ್ಶನ ನೀಡಿದ್ದಾರೆ. ಒಂದೇ ಸ್ಥಾನಕ್ಕೆ 4 ಮಂದಿಯ ಸ್ಪರ್ಧೆ ಇದೆ. ಆದರೆ ರಹಾನೆ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂಬುದು ನಮ್ಮ ಉದ್ದೇಶ. ಅವರು ಅಗ್ರ ಕ್ರಮಾಂಕದಲ್ಲಿ ತಾಂತ್ರಿಕವಾಗಿ ಉತ್ತಮ ಲಯ ಕಂಡುಕೊಂಡಿದ್ದಾರೆ. ಅವರಿಗೂ ಇದು ಮನದಟ್ಟಾಗಿದೆ. ತಂಡಕ್ಕೆ ಆರಂಭಿಕನ ಅಗತ್ಯ ಬಿದ್ದಾಗ ರಹಾನೆ ಖಂಡಿತ ನೆರವಿಗೆ ನಿಲ್ಲಲಿದ್ದಾರೆ’ ಎಂದು ಕೊಹ್ಲಿ ಹೇಳಿದರು.
“ರಾಹುಲ್ ಅವರೂ ರಹಾನೆ ಸ್ಥಿತಿಯಲ್ಲೇ ಇದ್ದಾರೆ. ಅವರೂ ಆರಂಭಕಾರ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಆಡಿಸುವುದು ಸೂಕ್ತವಲ್ಲ ಎಂಬುದು ನಮ್ಮ ಅಭಿಪ್ರಾಯ. ಇಲ್ಲಿ ರಾಹುಲ್ ಬದಲು ದಿನೇಶ್ ಕಾರ್ತಿಕ್ ಇದ್ದಾರೆ’ ಎಂದರು.
“ವಿಶ್ವಕಪ್ ಮುನ್ನ ನಿಧಾನ ಗತಿಯ ಬೌಲರ್‌ಗಳ ಒಂದು ಬಲಿಷ್ಠ ಪಡೆಯನ್ನು ರಚಿಸುವುದು ನಮ್ಮ ಉದ್ದೇಶ. ಅಶ್ವಿನ್-ಜಡೇಜ ಸತತವಾಗಿ ಕಳೆದ ಆರೇಳು ವರ್ಷಗಳಿಂದ ಆಡುತ್ತಲೇ ಇದ್ದಾರೆ. ಈಗ ಯುವ ಬೌಲರ್‌ಗಳ ಸರದಿ…’ ಎಂದು ಕೊಹ್ಲಿ ಬೌಲಿಂಗ್ ವಿಭಾಗವನ್ನು ಸಮರ್ಥಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.