ವಿದೇಶಿ ನಾಯಕರು, ಲಾಮಾ ಭೇಟಿ ಅಪರಾಧ: ಚೀನ
Team Udayavani, Oct 22, 2017, 7:10 AM IST
ಬೀಜಿಂಗ್: ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರನ್ನು ವಿದೇಶಿ ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರು, ನಾಯಕರು ಭೇಟಿಯಾದರೆ ಅದು ಗಂಭೀರ ಅಪರಾಧ. ಹೀಗೆಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನ (ಸಿಪಿಸಿ) ಎಚ್ಚರಿಕೆ ನೀಡಿದೆ. ಇಂಥ ಕ್ರಮ ಚೀನ ನಾಗರಿಕರ ಭಾವನೆಗಳಿಗೆ ವಿರುದ್ಧವಾದದನ್ನು ಎಂದು ಅದು ಪ್ರತಿಪಾದಿಸಿದೆ. “ನಮ್ಮ ಪ್ರಕಾರ ದಲೈಲಾಮಾ ದೇಶದ ಜನರ ನೆಮ್ಮದಿಗೆ ಭಂಗ ತರುವ ವ್ಯಕ್ತಿ’ ಎಂದು ಪಕ್ಷಗ ನಾಯಕ ಝಾಂಗ್ ಯಿಜಿಯಾಂಗ್ ಹೇಳಿದ್ದಾರೆ.
ಪಕ್ಷದ ಸಭೆಯ ಬಳಿಕ ಮಾತನಾಡಿದ ಅವರು ದಲೈ ಲಾಮಾರನ್ನು ಧಾರ್ಮಿಕ ಮುಖಂಡ ಎಂಬ ಹಿನ್ನೆಲೆಯಲ್ಲಿ ಭೇಟಿ ಮಾಡುವುದನ್ನು ನಾವು ವಿರೋಧಿಸುತ್ತೇವೆ. ಚೀನ ದಿಂದ ಟಿಬೆಟ್ ಪ್ರತ್ಯೇಕಿಸಲು ದಂಗೆಯೆಬ್ಬಿಸಿದ್ದ ದಲಾಯಿ ಲಾಮಾ ಸದ್ಯದ ಸನ್ನಿವೇಶದಲ್ಲಿ ರಾಜಕೀಯ ಮುಖಂಡ ರಾಗಿದ್ದಾರೆ ಎಂದಿದ್ದಾರೆ ಅವರು. ಭಾರತದ ಹೆಸರನ್ನು ಉಲ್ಲೇಖೀಸದೆ ಹೇಳಿದ ಝಾಂಗ್ ಟಿಬೆಟಿಯನ್ ನಾಯಕ 1959ರಲ್ಲಿ ದಂಗೆ ವಿಫಲವಾದ ನಂತರ ಬೇರೊಂದು ದೇಶಕ್ಕೆ ಪಲಾಯನ ಮಾಡಿದ್ದರು ಎಂದು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.