ತೈಲ ಬಿಟ್ಟು , ಮಂಗಳನತ್ತ ಅರಬ್ ಲಗ್ಗೆ?
Team Udayavani, Oct 23, 2017, 6:35 AM IST
ದುಬಾೖ: ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ಎಂದರೆ ತೈಲೋದ್ಯಮಕ್ಕೆ ಹೆಸರುವಾಸಿ. ಜತೆಗೆ ಅದ್ದೂರಿ ಮತ್ತು ವೈಭವೋಪೇತ ಕಟ್ಟಡಗಳ ನಿರ್ಮಾಣಕ್ಕೂ ಎತ್ತಿದ ಕೈ. ಬದಲಾಗಿರುವ ಕಾಲ ಸ್ಥಿತಿಯಲ್ಲಿ ಅರಬ್ ರಾಷ್ಟ್ರ ಯುಎಇ ತೈಲೋದ್ಯಮ ಕ್ಷೇತ್ರದ ಬಗ್ಗೆ ಈಗಾಗಲೇ ಪೂರಕವಲ್ಲದ ವರದಿಗಳು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ಆಯ್ಕೆಯ ಕ್ಷೇತ್ರವನ್ನು ಬದಲಾವಣೆ ಮಾಡಿಕೊಂಡಿದೆ.
ವಿಶ್ವದಲ್ಲಿಯೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಖಾತೆಯನ್ನು ಸೃಷ್ಟಿಸಿ, ಅದಕ್ಕೆ ಸಚಿವರನ್ನೇ ನೇಮಕ ಮಾಡಿದೆ. ಅಮೆರಿಕ ಮತ್ತಿತರ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಯುತ್ತಿದ್ದರೂ ಸರಕಾರದ ಮಟ್ಟದಲ್ಲಿ ಅಧಿಕೃತವಾಗಿ ಬೆಂಬಲ ನೀಡಿದ್ದು ವಿಶ್ವದಲ್ಲಿ ಇದೇ ಮೊದಲು.
ಅಮೆರಿಕದ ನಾಸಾ ಮಂಗಳ ಗ್ರಹದ ಮೇಲ್ಮೆ„ಯಲ್ಲಿ ಮಾನ ವನ ವಾಸಕ್ಕೆ ಯೋಗ್ಯವಾದ ಅಂಶಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವಂತೆಯೇ 2117ರ ವೇಳೆಗೆ ಅಲ್ಲಿ 6 ಲಕ್ಷ ಮಂದಿಗೆ ಅನು ಕೂಲವಾಗುವಂಥ ನಗರ ನಿರ್ಮಾಣದ ಗುರಿಯನ್ನು ಯುಎಇ ಹಾಕಿಕೊಂಡಿದೆ. ಅದಕ್ಕಾಗಿಯೇ ಒಮರ್ ಬಿನ್ ಸುಲ್ತಾನ್ ಅಲ್ ಒಲಾಮ (27) ಅವರನ್ನು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಖಾತೆಯ ಸಚಿವರನ್ನಾಗಿ ನೇಮಿಸಿದೆ.
ಮಂಗಳನಲ್ಲಿ ನೆಲೆಯೂರಲು ಅಮೆರಿಕ, ಚೀನ, ರಷ್ಯಾ, ಐರೋಪ್ಯ ಒಕ್ಕೂಟ ರಾಷ್ಟ್ರಗಳು ಈಗಾಗಲೇ ಪ್ರಯತ್ನ ನಡೆಸುತ್ತಿವೆ. ಅದಕ್ಕಿಂತ ಭಿನ್ನವಾಗಿ ಅಲ್ಲಿ ತನ್ನ ಛಾಪು ಮೂಡಿಸಲು ಮುಂದಾಗಿದೆ ಯುಎಇ. ಸ್ಪೇಸ್ ಎಕ್ಸ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಮತ್ತು ಅಮೆರಿಕದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ನ ಸಂಸ್ಥೆಯೂ ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದೆ.
ತೈಲದಿಂದ ಮಂಗಳನತ್ತ: ತೈಲೋದ್ಯಮ ಕ್ಷೇತ್ರದಲ್ಲಿ 2014ರಲ್ಲಿ ಉಂಟಾದ ತಾತ್ಕಾಲಿಕ ಹಿನ್ನಡೆ ಅರಬ್ ರಾಷ್ಟ್ರ ಹಾಕಿಕೊಂಡಿರುವ ಮಂಗಳನಲ್ಲಿ ನಗರ ನಿರ್ಮಾಣ ಯೋಜನೆಗೆ ಕೊಂಚ ಬ್ರೇಕ್ ನೀಡಿತ್ತು. ತೈಲ ಕ್ಷೇತ್ರದಲ್ಲಿ ಉಂಟಾದ ಬೆಲೆ ಕುಸಿತದ ಬಿಕ್ಕಟ್ಟು ಅಲ್ಲಿನ ಆರ್ಥಿಕತೆ ಮೇಲೆ ಬೀರಿರುವ ನೇತ್ಯಾತ್ಮಕ ಪರಿಣಾಮ ಇನ್ನೂ ಮುಕ್ತಾಯ ಕಂಡಿಲ್ಲ. ಇದರ ಹೊರತಾಗಿಯೂ ಅರಬ್ ರಾಷ್ಟ್ರವು ಮಂಗಳ ಗ್ರಹದಲ್ಲಿನ ಪ್ರಸ್ತಾವಿತ ಯೋಜನೆ ಬಗ್ಗೆ ವಿವಿಧ ಕಂಪೆನಿಗಳಲ್ಲಿ ಹೂಡಿಕೆ ಮಾಡುತ್ತಿದೆ.
ಬಾಹ್ಯಾಕಾಶ ಕ್ಷೇತ್ರವನ್ನು ಒಂದು ಕೈಗಾರಿಕೆ ಎಂದು ಪರಿಗಣಿಸಿರುವ ಯುಎಇ ಸರಕಾರ, ಇದುವರೆಗೆ ಈ ಉದ್ದೇಶಕ್ಕಾಗಿ 32,500 ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಮೊತ್ತವನ್ನು ವಿನಿಯೋಗ ಮಾಡಿದೆ. ಅದರಲ್ಲಿ ನಾಲ್ಕು ಉಪಗ್ರಹಗಳನ್ನು ಈಗಾಗಲೇ ಉಡಾಯಿಸಿದೆ. ಇದೇ ಉದ್ದೇಶಕ್ಕಾಗಿ 2018ರಲ್ಲಿ ಮತ್ತೂಂದು ಉಪಗ್ರಹವನ್ನು ಹಾರಿ ಬಿಡಲಾಗುತ್ತದೆ.
ಬಾಹ್ಯಾಕಾಶದಲ್ಲಿ ಹೂಡಿಕೆ ಅಥವಾ ಸ್ಪೇಸ್ ಮೈನಿಂಗ್ ಎಂಬ ಹೊಸ ಕ್ಷೇತ್ರದಲ್ಲಿ ಅಮೆರಿಕದ ಶ್ರೀಮಂತ ಕುಳಗಳಾದ ಸ್ಪೇಸ್ ಎಕ್ಸ್‌ನ ಎಲಾನ್ ಮಸ್ಕ್ ಮತ್ತು ಅಮೆಜಾನ್‌ನ ಜೆಫ್ ಬೆಜೋಸ್ ಕೂಡ ಆಸಕ್ತಿ ತೋರಿಸಿ, ಅಲ್ಲಿನ ಸರಕಾರದ ಜತೆಗೆ ಪಾಲುದಾರಿಕೆ ಪಡೆದುಕೊಳ್ಳುವತ್ತ ಮುಂದಾಗಿದ್ದಾರೆ. ಅಮೆರಿಕದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಗೋಲ್ಡ್‌ಮನ್ ಸ್ಯಾಶ್ ಈ ಕ್ಷೇತ್ರದ ಬಗ್ಗೆ ಸಿದ್ಧಪಡಿಸಿರುವ ಟಿಪ್ಪಣಿ ಪ್ರಕಾರ “ಈ ಕ್ಷೇತ್ರ ಊಹಿಸಿದ್ದಕ್ಕಿಂತಲೂ ವಾಸ್ತವಿಕವಾಗಿರಬಹುದು. ನೀರನ್ನು ಇಂಧನವನ್ನಾಗಿಸಿಕೊಳ್ಳುವ ಪ್ರಸ್ತಾವ ಕೂಡ ಕ್ರಾಂತಿಯನ್ನು ಎಬ್ಬಿಸಬಹುದು’ ಎಂದು ಪ್ರತಿಪಾದಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.