ಸುಬ್ರಹ್ಮಣ್ಯ: ಭಕ್ತರ ದೇಣಿಗೆಯಲ್ಲೇ ಬ್ರಹ್ಮರಥ ನಿರ್ಮಾಣಕ್ಕೆ ಆಗ್ರಹ
Team Udayavani, Oct 23, 2017, 10:19 AM IST
ಸುಬ್ರಹ್ಮಣ್ಯ: ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಬ್ರಹ್ಮರಥವು ಒಬ್ಬರ ದಾನಕ್ಕಿಂತ ಸರ್ವ ಭಕ್ತರ ದೇಣಿಗೆಯಲ್ಲಿ ನಿರ್ಮಾಣವಾಗಲಿ ಎಂದು ಕೂಜುಗೋಡು- ಕಟ್ಟೆಮನೆಯವರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರವಿವಾರ ಪತ್ರಿಕಾಗೋಷ್ಠಿಯಲ್ಲಿ ಕೂಜುಗೋಡು-ಕಟ್ಟೆಮನೆ ಮನೆತನದ ಪ್ರಮುಖರಾದ ಸೋಮಸುಂದರ ಕೂಜುಗೋಡು ಮಾತನಾಡಿದರು. ಪ್ರಸಿದ್ಧ ಕ್ಷೇತ್ರ ಸುಬ್ರಹ್ಮಣ್ಯದ ಸ್ವಯಂಭೂ ಗರ್ಭಗುಡಿ ಮತ್ತು ಪ್ರಾಚೀನ ಕಾಲದ ಬ್ರಹ್ಮರಥ ಅತ್ಯಂತ ಪಾವಿತ್ರ್ಯದಿಂದ ಕೂಡಿವೆೆ. ದಶಕದ ಹಿಂದೆ ಗರ್ಭಗುಡಿ ಭಕ್ತರ ದೇಣಿಗೆ, ಸೇವೆಯಿಂದಲೇ ನವೀಕರಣವಾಗಿತ್ತು. ಇದೀಗ ಶಿಥಿಲಾವಸ್ಥೆಯಲ್ಲಿರುವ ಸುಮಾರು 400 ವರ್ಷಗಳ ಹಿಂದಿನ ಬ್ರಹ್ಮರಥವನ್ನೂ ಭಕ್ತರ ದೇಣಿಗೆಯಲ್ಲೇ ನಿರ್ಮಿಸಬೇಕು. ಈಗಿನ ಆಡಳಿತ ಸಮಿತಿ ಬ್ರಹ್ಮರಥ ನಿರ್ಮಾಣಕ್ಕೆ ದಾನಿಗಳಿಂದ ದಾನ ಪಡೆದು ನಿರ್ಮಿಸಲು ಹೊರಟಿರುವುದು ಬೇಸರ ತಂದಿದೆ ಎಂದರು.
ತಾಲೂಕು ಬೋರ್ಡ್ ಮಾಜಿ ಸದಸ್ಯ ದುರ್ಗಾದಾಸ್ ಮಲ್ಲಾರ, ನಿವೃತ್ತ ಅಧ್ಯಾಪಕ ಪದ್ಮಯ್ಯ ಗೌಡ ಕಟ್ಟೆಮನೆ, ದುರ್ಗಾದಾಸ್ ಮಲ್ಲಾರ, ಹೊನ್ನಯ್ಯ ಗೌಡ ಕಟ್ಟೆಮನೆ, ಜಯಪ್ರಕಾಶ್ ಕೂಜುಗೋಡು, ಡಾ| ಸೋಮಶೇಖರ್ ಕಟ್ಟೆಮನೆ, ದಯಾನಂದ ಕಟ್ಟೆಮನೆ, ಪದ್ಮನಾಭ ಕೆದಿಲ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.