“ಸುವರ್ಣ’ ಕಾಲ !


Team Udayavani, Oct 23, 2017, 11:13 AM IST

23-30.jpg

ಸುವರ್ಣಗಡ್ಡೆಗೆ ಕೊಳೆ ರೋಗ, ಕೀಟಬಾಧೆ ಮುಂತಾದ ಸಮಸ್ಯೆ ಇರುವುದಿಲ್ಲ. ಹಾಗಾಗಿ, ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದಾಗಲೇ ಬೆಳೆ ಕೈಗೆ ಬಂದರೆ ಲಾಭ ಗ್ಯಾರಂಟಿ. 

    ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾವರೆಹಳ್ಳಿ ಗ್ರಾಮದ ಮಂಜುನಾಥ ಶೇಟ್‌ ಅವರು ರಬ್ಬರ್‌ ಜೊತೆ ಸುವರ್ಣ ಗಡ್ಡೆ ಬೆಳೆದು ಆದಾಯದ ಮಾರ್ಗ ಕಂಡುಕೊಂಡಿದ್ದಾರೆ. 

 ಆನಂದಪುರಂ-ಬಳ್ಳಿಬೈಲು ರಸ್ತೆಯಲ್ಲಿ ತ್ಯಾವರೆಹಳ್ಳಿಯಲ್ಲಿ ಮುಖ್ಯ ರಸ್ತೆಗೆ ತಾಗಿ ಕೊಂಡಂತೆ ಇವರ ಹೊಲವಿದೆ. ಇವರು 3 ವರ್ಷಗಳ ಹಿಂದೆ ರಬ್ಬರ್‌ ಗಿಡ ನೆಟ್ಟು ಬೆಳೆಸಿದ್ದಾರೆ.ರಬ್ಬರ ಸಸಿ ನೆಟ್ಟ ವರ್ಷ ಅಂತರ್‌ ಬೆಳೆಯಾಗಿ ಶುಂಠಿ ಕೃಷಿ ನಡೆಸಿದ್ದ ಇವರು ಕಳೆದ ವರ್ಷ ಮರಗೆಣಸು ಬೆಳೆಸಿದ್ದರು.ಈ ವರ್ಷ ಸುವರ್ಣ ಗಡ್ಡೆ ಮತ್ತು ಮೆಕ್ಕೆಜೋಳವನ್ನು ಅಂತರ್‌ ಬೆಳೆಯಾಗಿಸಿಕೊಂಡಿದ್ದಾರೆ. 

ಕೃಷಿ ಹೇಗೆ ?
ರಬ್ಬರ್‌ ಗಿಡಗಳ ಸಾಲಿನಲ್ಲಿ ಸುಮಾರು ಒಂದು ಎಕರೆ ವಿಸ್ತೀರ್ಣದಲ್ಲಿ 1,200 ಸುವರ್ಣಗಡ್ಡೆ ಸಸಿ ಬೆಳೆಸಿದ್ದಾರೆ. ನೆಡುವಾಗ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ 4 ಅಡಿ ಅಂತರದಲ್ಲಿ ಬೀಜ ನಾಟಿ ಮಾಡಿದ್ದಾರೆ. ಸರಾಸರಿ ಒಂದು ಅಡಿ ಚೌಕ ಮತ್ತು ಒಂದು ಅಡಿ ಆಳದ ಗುಂಡಿ ನಿರ್ಮಿಸಿ ಬೀಜ ಹಾಕಿದ್ದರು. ಕಿ.ಗ್ರಾಂ.ಗೆ ರೂ.30 ರ ದರದಲ್ಲಿ, ಸರಾಸರಿ 250 ಗ್ರಾಂ. ಗಾತ್ರದ ಬೀಜದ ಗಡ್ಡೆ ನಾಟಿ ಮಾಡಿದ್ದರು. ಗಿಡನೆಡುವಾಗ ಗುಂಡಿಗೆ ಸ್ವಲ್ಪ ಸಗಣಿ ಗೊಬ್ಬರ ಹಾಕಿದ್ದರು. ಬೀಜ  ಮೊಳೆತು ಎಲೆಗಳು ಕಾಣಿಸುತ್ತಿದ್ದಂತೆ 20:20 ಕಾಂಪ್ಲೆಕ್ಸ್‌ ಗೊಬ್ಬರ ಹಾಕಿ ಕೃಷಿ ಮುಂದುವರೆಸಿದರು. ಪ್ರತಿ 25 ದಿನಕ್ಕೆ ಒಮ್ಮೆಯಂತೆ ಒಟ್ಟು 4 ಸಲ ಗೊಬ್ಬರ ನೀಡಿದ್ದರು.ಪ್ರತಿ ಸಲ ಗೊಬ್ಬರ ನೀಡಿದಾಗ ಗುದ್ದಲಿ ಬಳಸಿ ಗಿಡಕ್ಕೆ ಮಣ್ಣು ಏರಿಸಿ ಗಡ್ಡೆ ಚೆನ್ನಾಗಿ ಬೆಳೆಯುವಂತೆ ಕೃಷಿ ಕೈಗೊಂಡಿದ್ದರು.

ಲಾಭ ಹೇಗೆ ?
ಗಿಡಗಳು ಚೆನ್ನಾಗಿ ಬೆಳೆದು ಪ್ರತಿ ಗಿಡದಿಂದ ಸರಾಸರಿ 8 ಕಿ.ಗ್ರಾಂ.ನಷ್ಟು ಗಾತ್ರದ ಗಡ್ಡೆ ಬೆಳೆದಿದೆ. ಇವರು ಒಟ್ಟು 1,200 ಗಿಡ ಬೆಳೆಸಿದ್ದಾರೆ.ಇದರಿಂದ ಸುಮಾರು 100 ಕ್ವಿಂಟಾಲ್‌ ಸುವರ್ಣ ಗಡ್ಡೆ ಸಿಕ್ಕಿದೆ. ಕ್ವಿಂಟಲ್‌ ಒಂದಕ್ಕೆ ರೂ.2000 ದರದಿಂದ ಇವರಿಗೆ ರೂ.2 ಲಕ್ಷ ಆದಾಯ ದೊರೆತಿದೆ.  ಬೀಜ ಖರೀದಿ, ಗಿಡ ನೆಡುವ ಕೂಲಿ, ಗೊಬ್ಬರ ಖರೀದಿ, ಕೃಷಿ ಕೂಲಿ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ಇವರಿಗೆ ಸುಮಾರು ರೂ.50 ಸಾವಿರ ಖರ್ಚು ತಗುಲಿದೆ. ಆದರೂ ಸಹ ರೂ.1.5 ಲಕ್ಷ ಲಾಭ.  ಸುವರ್ಣಗಡ್ಡೆಗೆ ಕೊಳೆ ರೋಗ, ಕೋಟ ಬಾಧೆ ಇತ್ಯಾದಿ ಸಮಸ್ಯೆ ಇಲ್ಲದ ಕಾರಣ ಲಾಭ ಅಧಿಕ ಎನ್ನುತ್ತಾರೆ ಮಂಜುನಾಥ್‌. 

ಮಾಹಿತಿಗೆ- 9449132702

ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.