ಟಿಕೆಟ್ ಸಿಗದಿದ್ರೆ ವಿಮಾನ ಏರಿ
Team Udayavani, Oct 24, 2017, 7:20 AM IST
ಹೊಸದಿಲ್ಲಿ: ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗಾಗಿ ತತ್ಕಾಲ್‌ನಲ್ಲಿ ಬುಕ್ ಮಾಡಿದ್ದೂ ಟಿಕೆಟ್ ಕನ್ಫರ್ಮ್ ಆಗಿಲ್ವಾ? ಸ್ವಲ್ಪ ಹಣ ಜಾಸ್ತಿ ಆದರೂ ಪರವಾಗಿಲ್ಲ ಎಂದು ತತ್ಕಾಲ್ ಪ್ರೀಮಿಯಂನಲ್ಲಿ ಬುಕ್ ಮಾಡಿಯೂ ಟಿಕೆಟ್ ಕನ್ಫರ್ಮ್ ಆಗಿಲ್ವಾ? ಚಿಂತೆ ಬಿಡಿ. ಪ್ರಯಾಣ ಸಾಧ್ಯವಾಗ್ತಿಲ್ಲ ಎಂದು ಆತಂಕಪಡುವ ಅಗತ್ಯವಿಲ್ಲ. ಹೆಚ್ಚು ಕಡಿಮೆ ಅದೇ ಟಿಕೆಟ್ ದರದಲ್ಲಿ ವಿಮಾನ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಸೇವೆ ಶೀಘ್ರದಲ್ಲಿಯೇ ಆರಂಭವಾಗಲಿದೆ!
ಹೌದು, ರೈಲ್ವೆ ಹಾಗೂ ಭಾರತೀಯ ವಿಮಾನಯಾನ ಇಲಾಖೆ ನಡುವಿನ ಒಪ್ಪಂದದ ಮೇರೆಗೆ ಇಂಥದ್ದೊಂದು ಸೇವೆ ಶುರುವಾಗಲಿದೆ. ಆದರೆ ಈ ಸೌಲಭ್ಯ ಎಲ್ಲರಿಗೂ ಸಿಗುತ್ತದೆಂದು ಭಾವಿಸಬೇಡಿ. ರಾಜಧಾನಿ ರೈಲಿನಲ್ಲಿ ಎಸಿ-1 ಅಥವಾ ಎಸಿ-2 ಟಿಕೆಟ್‌ಗಾಗಿ ವೇಯಿrಂಗ್ ಲಿಸ್ಟ್‌ನಲ್ಲಿ ಕಾದು ಕಾದು ಕಡೇ ಗಳಿಗೆಯಲ್ಲಿ ಟಿಕೆಟ್ ಕನ್ಫರ್ಮ್ ಆಗದೇ ಇದ್ದಾಗ, ಅಂಥ ಪ್ರಯಾಣಿಕರಿಗೆ ಇದೂ ಒಂದು ಆಯ್ಕೆಯಾಗಿರಲಿದೆ. ಸ್ಪರ್ಧಾತ್ಮಕ ದರದಲ್ಲಿಯೇ ಆ ಪ್ರಯಾಣಿಕರನ್ನು ಏರ್ ಇಂಡಿಯಾ ವಿಮಾನದಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಪ್ರಯಾಣಿಕ ಹೆಚ್ಚುವರಿಯಾಗಿ ಹಣ ನೀಡಿಯೇ ವಿಮಾನ ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳಬೇಕಾಗಲಿದೆ.
ಈ ಹಿಂದೆ ಏರ್ ಇಂಡಿಯಾ ಮುಖ್ಯಸ್ಥರಾಗಿದ್ದ, ಇಂದಿನ ರೈಲ್ವೇ ಬೋರ್ಡ್ ಚೇರ¾ನ್ ಅಶ್ವನಿ ಲೊಹಾನಿ, ಈ ಎರಡೂ ಇಲಾಖೆ ನಡುವೆ ಸೇತುವೊಂದನ್ನು ನಿರ್ಮಿಸಿ ಹೊಸ ವ್ಯವಸ್ಥೆಗೆ ಚಾಲನೆ ನೀಡುವ ಸಿದ್ಧತೆಯಲ್ಲಿ ಇದ್ದಾರೆ. ವ್ಯವಸ್ಥೆ ಹೇಗಿರಲಿದೆ, ಅಂದಾಜು ದರ ಎಷ್ಟಾಗಿರಲಿದೆ ಎನ್ನುವುದು ಶೀಘ್ರದಲ್ಲಿ ಗೊತ್ತಾಗಲಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.