ಲೋಪದೋಷದತ್ತ ಗಮನ ಹರಿಸಲಿ: ರಾಷ್ಟ್ರೀಯ ಶಿಕ್ಷಣ ನೀತಿ


Team Udayavani, Oct 24, 2017, 9:32 AM IST

24-23.jpg

ರಾಷ್ಟ್ರೀಯ ಶಿಕ್ಷಣ ನೀತಿ ಬಹುಕಾಲದಿಂದ ಚರ್ಚೆಯಲ್ಲಿರುವ ವಿಷಯ. ಎನ್‌ಡಿಎ ಸರಕಾರ ಅಧಿಕಾರಕ್ಕೇರಿದ ಬೆನ್ನಿಗೆ ದೇಶದ ಶಿಕ್ಷಣ ಪದ್ಧತಿಯನ್ನು ಆಮೂಲಾಗ್ರವಾಗಿ ಬದಲಾಯಿಸುವ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ರೂಪಿಸುವ ವಿಚಾರ ಪ್ರಸ್ತಾವಕ್ಕೆ ಬಂದಾಗ ಭಾರೀ ವಾದ-ವಿವಾದಗಳು ನಡೆದು ಅನಂತರ ತಣ್ಣಗಾಗಿತ್ತು. ಇದೀಗ ಕೇಂದ್ರ ಸಚಿವ ಸತ್ಯಪಾಲ್‌ ಸಿಂಗ್‌ ಮತ್ತೂಮ್ಮೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವ ವಿಷಯವನ್ನು ಪ್ರಸ್ತಾವಿಸುವುದರೊಂದಿಗೆ ಈ ಚರ್ಚೆ ಪ್ರಾರಂಭವಾಗಿದೆ. ತಿರುವನಂತಪುರದಲ್ಲಿ ಈ ಕುರಿತು ಮಾತನಾಡಿರುವ ಸಿಂಗ್‌ ಡಿಸೆಂಬರ್‌ನಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬಹಿರಂಗಪಡಿಸಲಿದ್ದೇವೆ ಎಂದಿದ್ದಾರೆ. ಬಿಜೆಪಿ ಹಾಗೂ ಅದರ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್‌ಗೆ ಹಿಂದಿನಿಂದಲೂ ಪ್ರಸಕ್ತ ಶಿಕ್ಷಣ ಪದ್ಧತಿಯ ಬಗ್ಗೆ ತೀವ್ರವಾದ ಅಸಮಾಧಾನವಿದೆ. ಈಗಿನ ಶಿಕ್ಷಣ ಪದ್ಧತಿ ಭಾರತೀಯತೆಯನ್ನು ಪ್ರತಿಪಾದಿಸುತ್ತಿಲ್ಲ.

ದೇಶದ ಸಂಸ್ಕೃತಿಯನ್ನು ತಿಳಿಸಿ ಮೌಲ್ಯವನ್ನು ಬಿತ್ತುವಲ್ಲಿ ಶಿಕ್ಷಣ ವಿಫ‌ಲಗೊಂಡಿದೆ. ಈಗಲೂ ನಾವು ಬ್ರಿಟಿಷರು ಬಿಟ್ಟು ಹೋಗಿರುವ ಮೆಕಾಲೆ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ವಸಾಹತುಶಾಹಿ ಮನೋಧರ್ಮವನ್ನು ಕುರುಡಾಗಿ ಅನುಸರಿಸುವ ಶಿಕ್ಷಣ ಪದ್ಧತಿ ಬದಲಾಗಬೇಕು. ಪ್ರಸಕ್ತ ಶಿಕ್ಷಣ ಮಕ್ಕಳಲ್ಲಿ ಎಡಪಂಥೀಯ ಧೋರಣೆಯನ್ನು ಬೆಳೆಸುತ್ತದೆ ಎನ್ನುವುದು ಆರ್‌ಎಸ್‌ಎಸ್‌ನ ಆಳದಲ್ಲಿರುವ ಆತಂಕ. ಹೀಗಾಗಿ ಶಿಕ್ಷಣ ಪದ್ಧತಿಯಲ್ಲಾಗಿರುವ ತಪ್ಪುಗಳನ್ನು ಸರಿಪಡಿಸಿ ಸಮಗ್ರವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಚಿಸಬೇಕೆಂಬ ಕೂಗು ಎನ್‌ಡಿಎಯ ಆರಂಭದ ದಿನಗಳಲ್ಲಿ ಜೋರಾಗಿಯೇ ಕೇಳಿ ಬಂದಿತ್ತು. ಇದಕ್ಕೆ ಪೂರಕವಾಗಿ ಪ್ರತಿಸ್ಪಂದಿಸಿದ ಕೇಂದ್ರ ಸರಕಾರ ಟಿ.ಎಸ್‌.ಆರ್‌.ಸುಬ್ರಮಣಿಯನ್‌ ನೇತೃತ್ವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲು ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಎರಡು ಸಂಪುಟಗಳಲ್ಲಿ ಸಲ್ಲಿಸಿರುವ ಬೃಹತ್‌ ವರದಿಯ ಹಲವು ಅಂಶಗಳನ್ನು ಎತ್ತಿಕೊಂಡು ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಜನರ ಅಭಿಪ್ರಾಯ ತಿಳಿಯುವ ಸಲುವಾಗಿ ಕಳೆದ ವರ್ಷವೇ ಶಿಕ್ಷಣ ನೀತಿಯನ್ನು ಸರಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ. ಸಹಜವಾಗಿಯೇ ವಿಪಕ್ಷಗಳು ಇದು ಶಿಕ್ಷಣದ ಕೇಸರೀಕರಣ ಎಂಬ ಕೂಗೆಬ್ಬಿಸಿವೆ. 

ಸ್ವಾತಂತ್ರ್ಯ ಲಭಿಸಿದ ಬಳಿಕ ದೇಶದ ಶಿಕ್ಷಣ ವ್ಯವಸ್ಥೆ ಎಡಪಂಥೀಯ ಧೋರಣೆಗಳಿಂದ ಪ್ರಭಾವಿತವಾಗಿದೆ. ದುರದೃಷ್ಟವಶಾತ್‌ ಬ್ರಿಟಿಷರ ಮತ್ತು ಪಾಶ್ಚಾತ್ಯ ವಿದ್ವಾಂಸರ ಹೆಜ್ಜೆಗಳನ್ನು ಅನುಸರಿಸುವ ಸಲುವಾಗಿ ಭಾರತೀಯ ಸಂಸ್ಕೃತಿಯನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ. ಹೀಗಾಗಿ ನಮ್ಮ ಶಿಕ್ಷಣ ಪದ್ಧತಿ ನಮ್ಮದಾಗಿ ಉಳಿದಿಲ್ಲ. ಇದು ಪಾಶ್ಚಾತ್ಯ ಮತ್ತು ದೇಶೀಯ ಮಿಶ್ರಣದಿಂದ ಕಲಸುಮೇಲೋಗರವಾಗಿದೆ ಎನ್ನುತ್ತಿರುವ ಸರಕಾರ ಹೊಸ ನೀತಿಯಲ್ಲಿ ದೇಶೀಯತೆಯನ್ನು ತುಂಬಲು ಪ್ರಯತ್ನಿಸಿದೆ. ಪ್ರಾಥಮಿಕ ಹಂತದಿಂದಲೇ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಬೇಕೆಂಬ ಪ್ರಾಮಾಣಿಕ ಕಾಳಜಿ ಹೊಂದಿರುವುದು ಅಭಿನಂದನೀಯ. ಆದರೆ ಈ ನೆಪದಲ್ಲಿ ಅತಿಯಾದ ದೇಶೀಯತೆಯನ್ನು ತುಂಬಿ ವಿಪಕ್ಷಗಳ ಆರೋಪಗಳನ್ನು ನಿಜವೆಂದು ಸಾಬೀತುಪಡಿಸಲು ಪ್ರಯತ್ನಿಸಬಾರದು. ಹಿಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳಲ್ಲಿ ಮಾಹಿತಿಗಳನ್ನು ತುಂಬುತ್ತಿದೆಯೇ ಹೊರತು ಜ್ಞಾನವನ್ನು ತುಂಬುವುದಿಲ್ಲ ಎನ್ನುವ ಆರೋಪದಲ್ಲಿ ಹುರುಳಿದೆ. ಇಂತಹ ಕೆಲವು ಮೂಲಭೂತ ತಪ್ಪುಗಳನ್ನು ಸರಿಪಡಿಸಲು ಹೊಸ ಶಿಕ್ಷಣ ನೀತಿ ಹೆಚ್ಚು ಗಮನಹರಿಸಬೇಕು. 

ಹಾಗೆಂದು ರಾಷ್ಟ್ರೀಯ ಶಿಕ್ಷಣ ನೀತಿ ರಚನೆಯಾಗುತ್ತಿರುವುದು ಇದೇ ಮೊದಲಲ್ಲ. 1979ರಲ್ಲಿ ಜನತಾ ಪಾರ್ಟಿ ಸಮಗ್ರವಾದ ನೀತಿಯನ್ನು ರಚಿಸಲು ಮುಂದಾಗಿತ್ತು. ಆಗ ಜನಸಂಘವೂ ಜನತಾ ಪಾರ್ಟಿಯ ಅಂಗವಾಗಿತ್ತು ಎನ್ನುವುದು ಗಮನಾರ್ಹ ಅಂಶ. ಆದರೆ ಕೇಂದ್ರೀಯ ಶಿಕ್ಷಣ ಸಲಹಾ ಸಮಿತಿಯ ನಿರಾಕರಣೆಯಿಂದಾಗಿ ಈ ಉದ್ದೇಶ ಈಡೇರಲಿಲ್ಲ. ಅನಂತರ 1968ರಲ್ಲಿ ಇಂದಿರಾ ಗಾಂಧಿ ಮತ್ತು 1986ರಲ್ಲಿ ರಾಜೀವ ಗಾಂಧಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಚಿಸಿದ್ದಾರೆ. 1992ರಲ್ಲಿ ಆಗ ಪ್ರಧಾನಿಯಾಗಿದ್ದ ಪಿ. ವಿ. ನರಸಿಂಹ ರಾವ್‌ ಶಿಕ್ಷಣ ನೀತಿಯನ್ನು ಸಮಗ್ರವಾಗಿ ಪರಿಷ್ಕರಿಸುವ ಪ್ರಯತ್ನ ಮಾಡಿದ್ದರು. ಪ್ರಸ್ತುತ ಎನ್‌ಡಿಎ ಸರಕಾರ ದೇಶದ ಹೊಸ ಪೀಳಿಗೆಯ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಶಿಕ್ಷಣದ ಗುಣಮಟ್ಟದ ಸಮಗ್ರ ಸುಧಾರಣೆ ಹಾಗೂ ಆವಿಷ್ಕಾರ ಹಾಗೂ ಸಂಶೋಧನಾ ಪ್ರವೃತ್ತಿಗೆ ಒತ್ತು ನೀಡುವ ನೀತಿಯನ್ನು ಜಾರಿಗೊಳಿಸಲುದ್ದೇಶಿಸಿದೆ. ದೇಶದಲ್ಲಿ ಧಾರಾಳ ಶಿಕ್ಷಣ ಸಂಸ್ಥೆಗಳು ಇದ್ದರೂ ನಮ್ಮ ಶಿಕ್ಷಣದ ಗುಣಮಟ್ಟ ಇನ್ನೂ ಜಾಗತಿಕ ಮಟ್ಟ ತಲುಪಿಲ್ಲ ಎನ್ನುವುದು ಕಟು ವಾಸ್ತವ. ಈಗಲೂ ಜಗತ್ತಿನ ಟಾಪ್‌ 100 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆಯಲು ಭಾರತದ ವಿವಿಗಳು ವಿಫ‌ಲವಾಗುತ್ತಿ¤ವೆ. ಪ್ರತಿವರ್ಷ ಮೂವತ್ತರಿಂದ ನಲುವತ್ತು ಸಾವಿರ ಪಿಎಚ್‌ಡಿ ಪದವೀಧರರು ಹೊರಬರುತ್ತಿದ್ದರೂ ಜಾಗತಿಕ ಆರ್ಥಿಕತೆಗೆ ಭಾರತದ ಕೊಡುಗೆ ಮಾತ್ರ ಬರೀ ಶೇ. 0.2. ಉನ್ನತ ಶಿಕ್ಷಣವೆಂದರೆ ಅಮೆರಿಕ, ಇಂಗ್ಲಂಡ್‌, ಆಸ್ಟ್ರೇಲಿಯ ಎಂಬ ನಂಬಿಕೆಯೇ ಈಗಲೂ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ ಈ ಅಂಶಗಳು ಸೇರಿದಂತೆ ಎಲ್ಲ ಲೋಪದೋಷಗಳತ್ತ ಗಮನಹರಿಸಬೇಕು.

ಟಾಪ್ ನ್ಯೂಸ್

Shimoga: Brother killed by brother with stone on his head

Shimoga: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಅಣ್ಣನಿಂದಲೇ ತಮ್ಮನ ಕೊಲೆ

hardik

Team India: ಪಾಂಡ್ಯಾಗೆ ಉಪನಾಯಕತ್ವವೂ ಇಲ್ಲ: ಈ ಆಟಗಾರನಿಗೆ ಹೊಸ ಜವಾಬ್ದಾರಿ

Chikkamagaluru: ಮಲಗಿದ್ದವನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ

Chikkamagaluru: ಮಲಗಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ…

Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ

Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ

Champions Trophy: New Zealand squad announced; Three mark key players return to the team

Champions Trophy: ನ್ಯೂಜಿಲ್ಯಾಂಡ್‌ ತಂಡ ಪ್ರಕಟ; ತಂಡಕ್ಕೆ ಮರಳಿದ ಮೂವರು ಘಟಾನುಘಟಿಗಳು

4-bng

Bengaluru Crime: ಪ್ರಿಯಕರ ಆತ್ಮಹತ್ಯೆ: ಪ್ರೇಯಸಿಯೂ ನೇಣಿಗೆ ಶರಣು

1-cc

ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

6-bng

Bengaluru: 40 ಲಕ್ಷ ರೂ. ನಕಲಿ ಸಿಗರೆಟ್‌ ಜಪ್ತಿ: ಕೇರಳದ ಇಬ್ಬರು ಆರೋಪಿಗಳ ಸೆರೆ

5-bng

Bengaluru: ಐಶ್ವರ್ಯ ಗೌಡಳಿಂದ ಇನ್ನೊಂದು ಬೆಂಜ್‌ ಕಾರು ಜಪ್ತಿ

National Youth Day: Swami Vivekananda, the guide of the young generation

National Youth Day: ಯುವ ಪೀಳಿಗೆಯ ಮಾರ್ಗದರ್ಶಿ ಸ್ವಾಮಿ ವಿವೇಕಾನಂದ

ashoka

The Rise Of Ashoka: ಅಶೋಕನ ರಕ್ತಚರಿತೆ

Shimoga: Brother killed by brother with stone on his head

Shimoga: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಅಣ್ಣನಿಂದಲೇ ತಮ್ಮನ ಕೊಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.