ಅವರು ಕರೆದಾಗ ನಾನು ಒಪ್ಪಬಾರದಿತ್ತು …
Team Udayavani, Oct 24, 2017, 12:06 PM IST
ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಂಗೆ ನೋವಾಗಿದೆ. ಅದಕ್ಕೆ ಕಾರಣ, ಇತ್ತೀಚೆಗೆ ಕೇಳಿ ಬಂದ ಟೀಕೆಗಳು. ವಿಧಾನಸೌಧದ ವಜ್ರ ಮಹೋತ್ಸವದ ಅಂಗವಾಗಿ “ಶಾಸನ ಸಭೆ ನಡೆದು ಬಂದ ದಾರಿ …’ ಎಂಬ ವಿಷಯದ ಕುರಿತಾಗಿ ಒಂದು ಸಾಕ್ಷ್ಯಚಿತ್ರವನ್ನು ಮಾಡಿಕೊಡುವಂತೆ ಸರ್ಕಾರ ಕೋರಿತ್ತು. ಈ ಸಂಬಂಧ ಟಿ.ಎನ್. ಸೀತಾರಾಂ ಅವರು ಕೆಲಸವನ್ನೂ ಶುರು ಮಾಡಿದ್ದರು.
ಆದರೆ, ಸಾಕ್ಷ್ಯಚಿತ್ರಕ್ಕೆ ಕೋಟಿ ರೂಪಾಯಿ ಖರ್ಚು ಮಾಡುವ ಔಚಿತ್ಯವೇನಿತ್ತು ಎಂದು ಟೀಕೆಗಳು ಹರಿದು ಬಂದ ಕಾರಣ ಅವರು, ಈ ಪ್ರಾಜೆಕ್ಟ್ನಿಂದ ಹೊರಬರುವುದಕ್ಕೆ ತೀರ್ಮಾನಿಸಿದ್ದಾರೆ. ಈ ಕುರಿತು ಅವರು ನಿನ್ನೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.”ಶಾಸನ ಸಭೆ ನಡೆದು ಬಂದ ದಾರಿ – ಏಳು ಚಿತ್ರದ ಪೈಕಿ ಎರಡನ್ನು ಮುಗಿಸಿದ್ದೇನೆ. ಅವರಿಗೆ ಕೊಟ್ಟು ಕೈ ಮುಗಿದು ಬರುತ್ತೇನೆ.
ಮಿಕ್ಕ ಐದು ಮಾಡಲಾರೆ…ಅವರು ಹಿಂದೆ ಹೇಳಿದಂತೆ ಪೂರ್ತಿ ಹಣ ಕೊಡುತ್ತೇನೆಂದರೂ ನನಗೆ ಬೇಡ…ಬೇರೆ ಯಾರಿಗಾದರೂ ಕೊಡಲಿ ..ಯಾವುದೇ ಸರಕಾರದ ಹಣ involve ಆದ ಕೆಲಸಗಳ ಸಹವಾಸ ಬೇಡ. ಅವರು ಕರೆದಾಗ ನಾನು ಒಪ್ಪಬಾರದಿತ್ತು. ಒಳ್ಳೆಯ product ಮಾಡಲು ಹೋಗಿ ತೀವ್ರ ಅವಮಾನ ಮತ್ತು ನೋವು ಅನುಭವಿಸಿದೆ. ಈ ಸಮಯದಲ್ಲಿ ನನಗೆ ಮಾನಸಿಕ ಸ್ಥೆರ್ಯ ಕೊಟ್ಟ ಎಲ್ಲರಿಗೆ ಕೃತಜ್ಞ … ‘ ಎಂದು ಬರೆದುಕೊಂಡಿದ್ದಾರೆ.
ಸೀತಾರಾಂ ಅವರು ಈ ಸಾಕ್ಷ್ಯಚಿತ್ರ ಮಾಡುವ ಸಲುವಾಗಿ, “ಡ್ರಾಮಾ ಜ್ಯೂನಿಯರ್’ನ ಎರಡನೆಯ ಸೀಸನ್‌ನಿಂದ ಹೊರಬಂದಿದ್ದರು. ಅಷ್ಟೇ ಅಲ್ಲ, ಅಮೇರಿಕಾದಲ್ಲಿ “ಕಾಫಿ ತೋಟ’ದ ಪ್ರದರ್ಶನವಾದ ಸಂದರ್ಭದಲ್ಲಿ, ಅಲ್ಲಿಗೆ ಹೋಗದೇ ಇಲ್ಲೇ ಸಾಕ್ಷ್ಯಚಿತ್ರದ ಕೆಲಸದಲ್ಲಿ ನಿರತರಾಗಿದ್ದರು. ಈಗ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಬೇಸರಗೊಂಡು, ಪ್ರಾಜೆಕ್ಟ್ನಿಂದ ಹೊರಬರುವುದಕ್ಕೆ ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.