ಮುಂಬಯಿಯಲ್ಲಿ  ಯಕ್ಷ ತುಳುಪರ್ಬ-2017 ಉದ್ಘಾಟನೆ 


Team Udayavani, Oct 24, 2017, 2:21 PM IST

22-Mum03b.jpg

ಮುಂಬಯಿ: ಇತಿಹಾಸದ ಸಂಗತಿಗಳನ್ನು ದಾಖಲೆ ಸಹಿತ ಸ್ಮರಿಸುವುದೇ ಸಂಸ್ಮರಣೆಯಾಗಬೇಕು. ಸಾಧಕರು ಏರಿದ ಎತ್ತರ, ನಡೆ-ನುಡಿ, ಆದರ್ಶ ಕಲಾವಿದರಾಗಿ ಮೆರೆದ ರೀತಿ ಮುಂದಿನ ಕಲಾವಿದರಿಗೆ ಮಾದರಿಯಾಗಬೇಕು. ಬೆಳ್ಮಣ್‌ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳವನ್ನು ಕಟ್ಟಿ ತಾನೋರ್ವ ಸಮರ್ಥ ಸಂಘಟಕರೆನಿಸಿಕೊಂಡ ಖ್ಯಾತ ಯಕ್ಷಗಾನ ಕಲಾವಿದ, ಪ್ರಸಂಗಕರ್ತ ದಿ| ಶೇಖರ ವಿ. ಶೆಟ್ಟಿ ಅವರು ಯಕ್ಷಗಾನ ಕ್ಷೇತ್ರದ ಇತಿಹಾಸದಲ್ಲೆ ಅಪರೂಪದ ವ್ಯಕ್ತಿಯಾಗಿದ್ದಾರೆ. ಅವರ ಸಂಸ್ಮರಣಾರ್ಥ ಜರಗುವ ಕಲಾಸೇವೆಯು ಪ್ರತಿಭಾವಂತ ಕಲಾವಿದರಿಗೆ ಪ್ರಾಣ ಪ್ರತಿಷ್ಠೆಯಾಗಲಿ. ಸಂಸ್ಕೃತಿಯೊಂದಿಗೆ ಬೆಸೆದು ಕೊಂಡಿರುವ ಯಕ್ಷಗಾನ ವಿಶ್ವದಾದ್ಯಂತ ವಿಸ್ತಾರಗೊಳ್ಳಲಿ ಎಂದು ವಿಶ್ವ ಹಿಂದೂ ಪರಿಷತ್‌ ಥಾಣೆಯ ಅಧ್ಯಕ್ಷ ಪೊಲ್ಯ ಉಮೇಶ್‌ ಶೆಟ್ಟಿ ನುಡಿದರು.

ಅ. 21ರಂದು ಮೀರಾರೋಡ್‌ ಪೂರ್ವದ ಅಯ್ಯಪ್ಪ ಮಂದಿರದ ಸಭಾಂಗಣದಲ್ಲಿ ಮುಂಬಯಿಯಲ್ಲಿ ಯಕ್ಷ ತುಳುಪರ್ಬ-2017 ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಾಯನ, ವಾದನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಹೀಗೆ ಬಹು ಕಲಾವಿಶೇಷತೆಗಳನ್ನು ಯಕ್ಷಗಾನ ಹೊಂದಿದೆ. ಯಕ್ಷಗಾನ ಬಯಲಾಟದ ಅದ್ಭುತ ಪ್ರತಿಭೆ, ರಂಗರಾಜನಾಗಿ ಮೆರೆದ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈ ಅವರನ್ನು ಸಮ್ಮಾನಿಸಿದ್ದು, ಅರ್ಹತೆಗೆ ಸಂದ ಗೌರವವಾಗಿದೆ. ನಗರ ಹಾಗೂ ಉಪನಗರಗಳಲ್ಲಿ ಜರಗುವ ಸರಣಿ ಯಕ್ಷ ತುಳು ಪರ್ಬವೂ ದಟ್ಟ ಕಲಾಪ್ರೇಕ್ಷರೊಂದಿಗೆ ಯಶಸ್ವಿಯಾಗಲಿ ಎಂದು ನುಡಿದು ಹಾರೈಸಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಯತಿರಾಜ ಉಪಾಧ್ಯಾಯ ಅವರು, ಸನಾತನ ಧರ್ಮ, ವೇದ, ಪುರಾಣಗಳ ಅರಿವು ಸಾಮಾನ್ಯ ಜನತೆಗೆ ತಲುಪಲು ಯಕ್ಷಗಾನ ಬಯಲಾಟ ಉತ್ತಮ ಮಾಧ್ಯಮವಾಗಿದೆ. ಮೂಢನಂಬಿಕೆಗಳ ಅನುಕರಣೆಯಿಂದ ದೂರವಿದ್ದು, ಅದನ್ನು ಪರಾಮರ್ಶಿಸುವ ವಿವೇಕತೆಯೊಂದಿಗೆ ನಾವೆಲ್ಲರೂ ಮುನ್ನಡೆಯಬೇಕು ಎಂದರು.

ಭಾಯಂದರ್‌ ಸೈಂಟ್‌ ಆ್ಯಗ್ನೇಸ್‌ ಹೈಸ್ಕೂಲ್‌ನ ಕಾರ್ಯಾಧ್ಯಕ್ಷ ಅರುಣೋದಯ ರೈ ಬಿಳಿಯೂರುಗುತ್ತು, ನ್ಯಾಯವಾದಿ ಆರ್‌. ಜಿ. ಶೆಟ್ಟಿ, ಮೀರಾ-ಭಾಯಂದರ್‌ ದಕ್ಷಿಣ ಭಾರತೀಯ ಬಿಜೆಪಿ ಘಟಕದ ಅಧ್ಯಕ್ಷ ಉದಯ ಹೆಗ್ಡೆ ಎಲಿಯಾಳ, ಸಂಘಟಕ, ಉದ್ಯಮಿ ಸುಧಾಕರ ಪೂಜಾರಿ, ಪ್ರಭಾಕರ ಶೆಟ್ಟಿ ಪಾಂಗಾಳ, ಸುರೇಶ್‌ ಭಟ್‌ ಕುಂಟಾಡಿ ಅವರು ಮಾತನಾಡಿ ಶುಭ ಹಾರೈಸಿದರು.

ಸಂಸ್ಮರಣ ಸಮಿತಿಯ ಅಧ್ಯಕ್ಷ ಸರಪಾಡಿ ಅಶೋಕ್‌ ಶೆಟ್ಟಿ ಅವರು ಕಾರ್ಯಕ್ರಮದ ಧ್ಯೇಯೋದ್ಧೇಶದ ಬಗ್ಗೆ ವಿವರಿಸಿದರು. ಯಕ್ಷತುಳು ಪರ್ಬದ ಅಧ್ಯಕ್ಷ ಡಿ. ಮನೋಹರ ಕುಮಾರ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ಆನಂದ ಎನ್‌. ಶೆಟ್ಟಿ, ಸಂಪತ್‌ ಶೆಟ್ಟಿ ಪಂಜದಗುತ್ತು, ಮುಂಬಯಿ ಸಂಚಾಲಕ ಪ್ರಕಾಶ್‌ ಎಂ. ಶೆಟ್ಟಿ ಸುರತ್ಕಲ್‌, ಯಕ್ಷತುಳು ಪರ್ಬದ ಕಾರ್ಯದರ್ಶಿ ಕೆ. ಎಚ್‌. ದೇವಿಪ್ರಸಾದ್‌ ಮೊದಲಾದವರು ಉಪಸ್ಥಿತರಿದ್ದರು.

ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದ ಜಿ. ಕೆ. ಕೆಂಚನಕೆರೆ ಮತ್ತು ಲೇಖಕ ಅರುಣ್‌ ಕುಮಾರ್‌ ಶೆಟ್ಟಿ ಎರ್ಮಳ್‌ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ರೂವಾರಿ ಅಜಿತ್‌ ಜಿ. ಶೆಟ್ಟಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮನೋಹರ್‌ ಕುಮಾರ್‌ ರಚಿತ, ತವರೂರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಮಾತಾ ವೈಷ್ಣೋದೇವಿ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ತುಳು-ಕನ್ನಡಿಗರು, ಸ್ಥಳೀಯ ಸಂಘಟನೆಗಳ ಪ್ರತಿನಿಧಿಗಳು, ಕಲಾಭಿಮಾನಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಸಮಾರಂಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈ ಅವರನ್ನು ಶೇಖರ ವಿ. ಶೆಟ್ಟಿ ಬೆಳ್ಮಣ್‌ ಸಂಸ್ಮರಣ ಕಾರ್ಯಕ್ರಮದ ವ್ಯವಸ್ಥಾಪಕ ಅಜಿತ್‌ ಜಿ. ಶೆಟ್ಟಿ ಬೆಳ್ಮಣ್‌ ಅವರು, ಮೈಸೂರು ಪೇಟ ತೊಡಿಸಿ,  ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ ಹಾಗೂ ನಗದು ನಿಧಿಯೊಂದಿಗೆ ಸಮ್ಮಾನಿಸಿ ಗೌರವಿಸಿದರು. ಯಕ್ಷಗಾನ ಬಾಲಕಲಾವಿದ ಹಿಮಾಂಶು ಚಂದ್ರಹಾಸ ಅಮೀನ್‌, ಭರತನಾಟ್ಯ ಕಲಾವಿದೆ ಖುಷಿ ಹರೀಶ್‌ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.