ಬದಲಾಗ್ತಿದೆ ಸೌದಿ ಅರೇಬಿಯಾ
Team Udayavani, Oct 26, 2017, 6:25 AM IST
ರಿಯಾದ್: “ನಾವು ಆಧುನಿಕ ಇಸ್ಲಾಂಗೆ ಹಿಂದಿರುಗುತ್ತೇವೆ. ಜತೆಗೆ ಎಲ್ಲ ರೀತಿಯ ಧರ್ಮದ ಜನರನ್ನು ಸ್ವಾಗತಿಸುತ್ತೇವೆ’ ಹೀಗೆಂದು ಹೇಳಿದ್ದು ಸೌದಿ ಅರೇಬಿಯಾದ ರಾಜ ಕುಮಾರ ಮೊಹಮ್ಮದ್ ಬಿನ್ ಸಲ್ಮಾನ್. ಅವರ ಈ ಹೇಳಿಕೆಯಿಂದಾಗಿ ಸೌದಿ ಅರೇಬಿಯಾದ ಆಡಳಿತ ವ್ಯವಸ್ಥೆ ಅಚ್ಚರಿಪಟ್ಟಿದೆ. ಹೇಳಿ ಕೇಳಿ ಸೌದಿ ಅರೇಬಿಯಾ ಸೇರಿದಂತೆ ಸಂಯುಕ್ತ ಅರಬ್ ಗಣರಾಜ್ಯದಲ್ಲಿ ಕಟ್ಟುನಿಟ್ಟಿನಲ್ಲಿ ಧಾರ್ಮಿಕ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ. ತೀವ್ರಗಾಮಿತನ ಹೋಗಲಾಡಿಸುವ ನಿಟ್ಟಿನಲ್ಲಿ ಈ ಕ್ರಮ ಅಗತ್ಯವಾಗಿದೆ ಎಂದು ರಾಜಕುಮಾರ ಮೊಹಮ್ಮದ್ ಹೇಳಿದ್ದಾರೆ.
ರಿಯಾದ್‌ನಲ್ಲಿ ಆಯೋಜಿಸಲಾಗಿದ್ದ ಭವಿಷ್ಯದ ಬಂಡವಾಳ ಹೂಡಿಕೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ತೀವ್ರ ಗಾಮಿ ತತ್ವಗಳನ್ನು ಮುಂದಿಟ್ಟುಕೊಂಡು ನಮ್ಮ ಮುಂದಿನ ಮೂವತ್ತು ವರ್ಷಗಳ ಜೀವನ ಹಾಳು ಮಾಡಲು ಬಯಸುವುದಿಲ್ಲ. ಅಂಥ ತತ್ವವನ್ನೇ ಇಲ್ಲವಾಗಿಸುವುದೇ ಆದ್ಯತೆ ಎಂದು ಹೇಳಿದ್ದಾರೆ.
ಉಗ್ರ ಸಂಘಟನೆ ಅಲ್-ಖೈದಾ ನಂಬಿಕೆ ಹೊಂದಿರುವ ಶುದ್ಧೀಕರಣ ಪ್ರಕ್ರಿಯೆ ಮತ್ತು ತೀವ್ರಗಾಮಿತನ, ರಾಜಮನೆತನದ ಮಾತೇ ಅಂತಿಮ ಎಂಬ ಹೇಳಿಕೆ ಇರುವ ಸೌದಿ ಅರೇಬಿಯಾದಲ್ಲಿ ರಾಜವಂಶಸ್ಥನಿಂದಲೇ ಬದಲಾವಣೆಯ ಮಾತುಗಳು ಬಂದಿರು ವುದು ಈಗ ಅಚ್ಚರಿಗೆ ಕಾರಣವಾಗಿದೆ. ತೈಲೋದ್ದಿಮೆಯ ಬಗ್ಗೆ ಡೋಲಾಯಮಾನದ ಸ್ಥಿತಿ ಇರುವ ಸಂದರ್ಭದಲ್ಲಿ ದೀರ್ಘ ಕಾಲೀನ ಆರ್ಥಿಕ ನೀತಿ ಮತ್ತು ಸಾಮಾಜಿಕ ಜೀವನ ಕ್ರಮಗಳ ಬಗ್ಗೆ ರಾಜಕುಮಾರ ಸಲ್ಮಾನ್ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.