ಟಿಪ್ಪು ಸ್ಮರಣೆ: ಡಿಬಿಸಿ ಸಮರ್ಥನೆ
Team Udayavani, Oct 26, 2017, 7:50 AM IST
ಬೆಂಗಳೂರು: ವಿಧಾನಮಂಡಲದ ವಜ್ರಮಹೋತ್ಸವದ ಅಂಗವಾಗಿ ನಡೆದ ವಿಶೇಷ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನ್ ಹೆಸರು ಪ್ರಸ್ತಾಪಿಸಿದ್ದನ್ನು ಹಿರಿಯ ಸಂಸದೀಯ ಪಟು, ಬಿಜೆಪಿ
ನಾಯಕ ಡಿ.ಬಿ.ಚಂದ್ರೇಗೌಡ ಸಮರ್ಥಿಸಿಕೊಂಡಿದ್ದಾರೆ.
ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಟಿಪ್ಪು ಬಗ್ಗೆ ಪ್ರಸ್ತಾಪಿಸಿದ್ದು ತಪ್ಪಲ್ಲ. ವಿವಾದ ಮಾಡಲೇ ಬೇಕು ಅನ್ನೋರಿಗೆ ಟಿಪ್ಪು ವಿವಾದ ಆಗ್ತಾನೆ. ಟಿಪ್ಪು ಒಳ್ಳೆಯ ಆಡಳಿತಗಾರ ಮತ್ತು ಹೋರಾಟಗಾರನಾಗಿದ್ದ. ಅಭಿವೃದ್ಧಿಯ ಹರಿಕಾರನಾಗಿದ್ದ ಅನ್ನೋದು ಸಹ ನಮಗೆ ಗೊತ್ತಿದೆ. ಟಿಪ್ಪು ಕೂಡ ಮೈಸೂರು ಅರಸರಷ್ಟೇ ಪ್ರಭಾವಿಯಾಗಿದ್ದ ಎಂದು ಹೇಳಿದರು. ಟಿಪ್ಪು ವಿಚಾರವನ್ನು ಯಾಕೆ ಇವತ್ತಿನ ಭಾಷಣದಲ್ಲಿ ಪ್ರಸ್ತಾಪ ಮಾಡಬಾರದು. ಈ ಬಗ್ಗೆ ವಿರೋಧ ಮಾಡುವವರೇ ಸಮಜಾಯಿಷಿ ಕೊಡಬೇಕು.ನಮಗೆ ಗೊತ್ತಿರುವ ಇತಿಹಾಸದ ಪ್ರಕಾರ ನಾನು ಇದನ್ನು ಹೇಳಬಲ್ಲೆ. ಟಿಪ್ಪು ಅಭಿವೃದ್ಧಿಯ ಹರಿಕಾರ ಅಂತ ನಮಗೆ ಗೊತ್ತಿದೆ ಎಂದರು.
ವಜ್ರ ಮಹೋತ್ಸವ ಒಳ್ಳೆಯ ಕಾರ್ಯಕ್ರಮ ಅನ್ನೋ ತೃಪ್ತಿ ಇದೆ. ಬರಬೇಕಾದವರೆಲ್ಲಾ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಷ್ಟ್ರಪತಿಗಳು ಸಹ ರಾಜ್ಯದ ಬಗ್ಗೆ ಒಳ್ಳೆಯ ಭಾಷಣ ಮಾಡಿದ್ದಾರೆ. ನಮ್ಮ ರಾಜ್ಯದ ಬಗ್ಗೆ ಕೆಲವು ಒಳ್ಳೆಯ ವಿಚಾರ ಹೇಳಿದ್ದಾರೆ. ಇದು ಕೇವಲ ಸಚಿವಾಲಯದ ಕಾರ್ಯಕ್ರಮ ಅಲ್ಲ. ರಾಜ್ಯ ಸರ್ಕಾರದ ಕಾರ್ಯಕ್ರಮವೂ ಅಲ್ಲ ಅನ್ನೋದನ್ನು ಗಮನಿಸಬೇಕು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.