ಹಗರಣ ಬಯಲಿಗೆಳೆದರೂ ಸಿಕ್ಕಿಲ್ಲ ಬಹುಮಾನ!

Team Udayavani, Oct 26, 2017, 8:43 AM IST

26-12.jpg

ಬೆಳಗಾವಿ: 17 ವರ್ಷಗಳ ಹಿಂದೆ ರಾಜಸ್ತಾನದ ಅಜ್ಮಿರದಲ್ಲಿ ಬಹು ಕೋಟಿ ನಕಲಿ ಛಾಪಾ ಕಾಗದದ ಹಗರಣದ ಕಿಂಗ್‌ಪಿನ್‌ ಅಬ್ದುಲ್‌ ಕರೀಂ ಲಾಲ ತೆಲಗಿ ಕರ್ನಾಟಕದ ಪೊಲೀ ಸರಿಗೆ ಸೆರೆ ಸಿಕ್ಕ ಎಂಬ ಮಾಹಿತಿ ದೇಶವನ್ನೇ ಬೆಚ್ಚಿ ಬೀಳಿಸಿತ್ತು.  ಬಂಧನದ ನಂತರ ತೆಲಗಿ ಬಾಯಿಬಿಟ್ಟ ಸ್ಫೋಟಕ ಸುದ್ದಿಗಳು ದೇಶದ ರಾಜಕಾರಣವನ್ನೇ ಅಲುಗಾಡಿಸಿತ್ತು. ಆದರೆ, ಬಂಧನಕ್ಕೆ ಕಾರಣವಾಗಿದ್ದ ವ್ಯಕ್ತಿಗೆ ಬಹು ಮಾನವಾಗಿ ಸಿಗಬೇಕಿದ್ದ 44 ಕೋಟಿ ರೂ. ಇದುವರೆಗೂ ಬಂದಿಲ್ಲ!

ಅಂದು ಬಂಧನಕ್ಕೊಳಗಾದ ತೆಲಗಿ ಈಗ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಆದರೆ ಬಂಧನಕ್ಕೊಳಗಾದ ನಂತರ ಆತ ಹೇಳಿದ ಸತ್ಯ ಹಾಗೂ ಡೈರಿಯಲ್ಲಿ ಬರೆದಿಟ್ಟ ಪ್ರಭಾವಿಗಳ ಹೆಸರು ಇನ್ನೂ ಬಹಿರಂಗವಾಗಿಲ್ಲ. ಆದರೆ ತೆಲಗಿಯ ಭಾರಿ ಪ್ರಮಾಣದ ಹಗರಣವನ್ನು ಬಯಲಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಾನಾಪುರದ ಸಾಮಾಜಿಕ ಹೋರಾಟಗಾರ
ಜಯಂತ ತಿನೇಕರಗೆ ಸರ್ಕಾರದಿಂದ ಬರ ಬೇಕಾಗಿದ್ದ ಬಹುಮಾನದ ಮೊತ್ತ ಇದು ವರೆಗೂ ಬಂದಿಲ್ಲ. ಕಾಂಗ್ರೆಸ್‌ ಪ್ರಭಾವಿ ರಾಜಕಾರಣಿಗಳ ಅಕ್ರಮ ಬಯಲಿಗೆಳೆದ ಕಾರಣಕ್ಕೆ ನೀಡಿದ್ದ ಭದ್ರತೆಯನ್ನೂ ಕಾರಣ ವಿಲ್ಲದೆ ಹಿಂಪಡೆಯಲಾಗಿದೆ. ಈ ಕುರಿತು ಪೊಲೀಸ್‌ ಇಲಾಖೆಗೆ ಪ್ರತ್ರ ಬರೆದರೂ ಉತ್ತರ ಸಿಕ್ಕಿಲ್ಲ.

ತೆಲಗಿ ಬಂಧನದ ಬಳಿಕ ಬಂದ ಮಾಹಿತಿ ಯಿಂದ ದೆಹಲಿ ಮಟ್ಟದ ನಾಯಕರಲ್ಲದೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಪ್ರಭಾವಿ ರಾಜಕಾರಣಿಗಳು, ಸಚಿವರು, ಉನ್ನತ ಮಟ್ಟದ ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದಾರೆ. ತೆಲಗಿಯ ನಕಲಿ ದಂಧೆಗೆ ಇವರ ಸಂಪೂರ್ಣ ಸಹಕಾರ ಇದೆ ಎಂಬ ಆರೋಪ ಗಳು ವ್ಯಾಪಕವಾಗಿದ್ದವು ಆದರೆ ಅವರ ಹೆಸರು ಮಾತ್ರ ಹೊರ ಬಂದಿರಲಿಲ್ಲ.

ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಬೆಂಗಳೂರು ಪೊಲೀಸ್‌ ಆಯುಕ್ತ ಎಚ್‌.ಟಿ. ಸಾಂಗ್ಲಿಯಾನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿದ್ದರು. ಅದರಂತೆ ಪ್ರಕರಣ ಸಿಬಿಐಗೆ ಹಸ್ತಾಂತರ ವಾಯಿತು. ತೆಲಗಿಗೆ ಶಿಕ್ಷೆ ಸಹ ಪ್ರಕಟವಾಗಿತ್ತು. ಬಹುಕೋಟಿ ನಕಲಿ ಛಾಪಾ ಕಾಗದದ ಹಗರಣದಲ್ಲಿ ಪ್ರಭಾವಿ ನಾಯಕರ ಕೈವಾಡವಿದೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಪ್ರತಿಪಕ್ಷಗಳು ಮೇಲಿಂದ ಮೇಲೆ ಒತ್ತಾಯಿಸಿದರೂ ಅದು ಫಲ ನೀಡಿಲ್ಲ. ಬದಲಾಗಿ ಮುಚ್ಚಿ ಹೋಗುವ ಬಗ್ಗೆ ಆರೋಪ ಕೇಳಿ ಬಂದಿದೆ.

ಯಾರು ಈ ತೆಲಗಿ?: ವಿಜಯಪುರ ಜಿಲ್ಲೆಯ ತೆಲಗಿ ಗ್ರಾಮದ ಅಬ್ದುಲ್‌ ಕರೀಂ ಲಾಲ ತೆಲಗಿ ಬಿಕಾಂ ಪದವೀಧರ. ತಂದೆ ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿದ್ದರಿಂದ ತೆಲಗಿ ಬೆಳಗಾವಿಯಲ್ಲಿ ಪದವಿ ಮುಗಿಸಿದ್ದ. ನಂತರ 1982ರಲ್ಲಿ ಕೆಲಸಕ್ಕೆ ದುಬೈಗೆ ತೆರಳಿ ಮುಂಬೈಗೆ ಮರಳಿದ್ದ. ಅಲ್ಲಿ ಭೂಗತ ಜಗತ್ತಿನ ಪರಿಚಯವಾಗಿ ನಕಲಿ ಛಾಪಾ ಕಾಗದ ತಯಾರಿಕೆಯ ದಂಧೆಗೆ ಇಳಿದ. ಇದರಲ್ಲಿ
ಕೋಟಿಗಟ್ಟಲೇ ಹಣ ಸಂಪಾದಿಸಿ ಮುಂಬೈನಲ್ಲಿಯೇ ಮೆಟ್ರೋ ಕಾರ್ಪೊರೇಶನ್‌ ಎಂಬ ಆಮದು ಮತ್ತು ರಫ್ತು ಸಂಸ್ಥೆ ಆರಂಭಿಸಿದ್ದ.

ಸುಳಿವು ಕೊಟ್ಟವರಿಗೆ ಜೀವಭಯ
17 ವರ್ಷಗಳ ಹಿಂದೆ ತೆಲಗಿ ನಕಲಿ ಛಾಪಾ ಕಾಗದ ತಯಾರಿಕೆ ಅವ್ಯವಹಾರವನ್ನು ಖಾನಾಪುರದ ಜಯಂತ ತಿನೇಕರ ಜಗಜ್ಜಾಹೀರು ಮಾಡಿದ್ದರು. ಭ್ರಷ್ಟರ ಕೃತ್ಯ ಬಯಲಿಗೆ ಎಳೆದಿದ್ದಕ್ಕೆ ಸಿಕ್ಕಿದ್ದು ಜೀವ ಬೆದರಿಕೆ. ರಕ್ಷಣೆಗಾಗಿ ನೀಡಿದ್ದ ಸಿಬ್ಬಂದಿ ವಾಪಸ್‌. ಆದರೆ ಅದೇ ಜೈಲು ಶಿಕ್ಷೆಗೆ ಗುರಿಯಾಗಿರುವ ಆರೋಪಿಗೆ ರಾಜೋಪಚಾರ. ಈ ಕಡೆ ಹಗರಣದಲ್ಲಿ ಸಿಲುಕಿರುವ ಪ್ರಭಾವಿಗಳ ಹೆಸರೂ ಹೊರಬರಲಿಲ್ಲ. ಅವರಿಗೆ ಶಿಕ್ಷೆಯನ್ನೂ ನೀಡಲಿಲ್ಲ. ಇನ್ನೊಂದೆಡೆ ನನಗೆ ಸಿಗುವ ಬಹುಮಾನ 17 ವರ್ಷವಾದರೂ ಸೇರಿಲ್ಲ
ಎಂದು ಜಯಂತ್‌ “ಉದಯವಾಣಿ’ಯೊಂದಿಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

ತೆಲಗಿಗೆ ಡಯಾಲಿಸಿಸ್‌
ಬೆಂಗಳೂರು: ನಕಲಿ ಛಾಪಾ ಕಾಗದ ಹಗರಣದ ಅಪರಾಧಿ ಅಬ್ದುಲ್‌ ಕರೀಂಲಾಲ್‌ ತೆಲಗಿ ಆರೋಗ್ಯ ಕೋಮಾ ಸ್ಥಿತಿ ತಲುಪಿದ್ದು, ಬುಧವಾರ ಡಯಾಲಿಸಿಸ್‌ ಮಾಡಲಾಗಿದೆ. ಮೆದುಳು ಜ್ವರ , ಎಚ್‌ಐವಿ ಸೇರಿದಂತೆ ಬಹುಅಂಗಾಂಗ ವೈಫ‌ಲ್ಯಗಳಿಂದ ಬಳಲುತ್ತಿರುವ ಕರೀಂಲಾಲ್‌ ತೆಲಗಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ, ಇನ್ನೂ ಚೇತರಿಕೆ ಕಂಡು ಬಂದಿಲ್ಲ. ತೆಲಗಿಯ ಪುತ್ರಿ ಮತ್ತು ಅಳಿಯ ಆಸ್ಪತ್ರೆಯಲ್ಲಿ ಇದ್ದು ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ವಿಕ್ಟೋರಿಯಾ ಆಸ್ಪತ್ರೆ ಹೊರ ವಿಭಾಗದ ಪೊಲೀಸರು ತೆಲಗಿ ಚಿಕಿತ್ಸೆ ಪಡೆಯುತ್ತಿರುವ ಕೊಠಡಿಗೆ ಬೆಳಗ್ಗೆ ಮತ್ತು ಸಂಜೆ ಭೇಟಿ ನೀಡಿ ಆತನ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೇಂದ್ರ ಸರ್ಕಾರವೇ ಹೇಳಿದಂತೆ ತೆಲಗಿಯಿಂದ ವಶಪಡಿಸಿಕೊಂಡಿದ್ದ ಆಸ್ತಿಯಲ್ಲಿನ ಒಟ್ಟು ಮೌಲ್ಯದಲ್ಲಿ ತಮಗೆ 44 ಕೋಟಿ ರೂ. ಬಹುಮಾನ ಬರಬೇಕಿತ್ತು. ಆದರೆ ಇದುವರೆಗೆ ಹಣ ಬಂದಿಲ್ಲ. ಇದರ ಬದಲಾಗಿ ಆಗಾಗ ನನಗೆ ಜೀವ ಬೆದರಿಕೆಗಳು ಬರುತ್ತಿವೆ. ಈ ಮೊದಲು ನನಗೆ ನೀಡಿದ್ದ ಭದ್ರತೆಯನ್ನು ಸಹ ಹಿಂದಕ್ಕೆ ಪಡೆಯಲಾಗಿದೆ. ಬಹುಮಾನದ ಮೊತ್ತ ನೀಡದಿರುವ ಬಗ್ಗೆ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಆಲ್ಲಿಂದಲೂ ಇನ್ನು ಉತ್ತರ ಬಂದಿಲ್ಲ.
 ●ಜಯಂತ ತಿನೇಕರ್‌, ಸಾಮಾಜಿಕ ಕಾರ್ಯಕರ್ತ

ಕೇಶವ ಆದಿ

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

“40 ಪರ್ಸೆಂಟ್‌ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ

Congress: “40 ಪರ್ಸೆಂಟ್‌ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.