ಧರ್ಮ ಸಂಸದ್: ಸುಧರ್ಮ ರಥಕ್ಕೆೆ ಚಾಲನೆ
Team Udayavani, Oct 26, 2017, 10:39 AM IST
ಉಡುಪಿ: ಉಡುಪಿಯಲ್ಲಿ ನ. 24, 25 ಮತ್ತು 26ರಂದು ಜರಗಲಿರುವ ಸಂತ ಸಮ್ಮೇಳನ, ಸಾಮರಸ್ಯ ಸಭೆ ಮತ್ತು ವಿರಾಟ್ ಹಿಂದೂ ಸಮಾಜೋತ್ಸವಗಳನ್ನೊಳಗೊಂಡ “ಧರ್ಮಸಂಸದ್ ಉಡುಪಿ – 2017′ ಒಂದು ಮಹ ತ್ಕಾರ್ಯ. ಇದರ ಮೂಲಕ ಹಿಂದೂ ವಿರೋಧಿಗಳಿಗೆ ಸ್ಪಷ್ಟ ಸಂದೇಶ ನೀಡುವಂತಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಹೇಳಿದ್ದಾರೆ. ಧರ್ಮಸಂಸದ್ ಪ್ರಚಾರಾರ್ಥ ಜಿಲ್ಲೆಯಾದ್ಯಂತ ಸಂಚರಿಸಲಿರುವ ಸುಧರ್ಮ ರಥಯಾತ್ರೆಗೆ ಅ. 25ರಂದು ಚಾಲನೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಇದು ರಾಜಕೀಯ, ಪಕ್ಷಭೇದ ರಹಿತವಾದುದು. ಹಿಂದೂ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರಕ್ಕಾಗಿ ಇಂತಹ ಕಾರ್ಯಗಳು ನಡೆಯುತ್ತಿವೆ. ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈ ಹಿಂದೆ ನಡೆದ ಧರ್ಮ ಸಂಸದ್‌ಗಳ ಅನುಭವಗಳನ್ನು ಪರಿಗಣಿಸಿದರೆ ಈ ಬಾರಿ 3,000 ಸಂತರು ಪಾಲ್ಗೊಂಡರೂ ಆಶ್ಚರ್ಯವಿಲ್ಲ. ಅಚ್ಚು ಕಟ್ಟಾಗಿ ಧರ್ಮಸಂಸದ್ ನಡೆಯುವುದಕ್ಕಾಗಿ ಹಿರಿಯರ ಮಾರ್ಗದರ್ಶನದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಆಗ ಮಿಸುವ ಸಂತರು, ಇತರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ಹೇಳಿದರು.
ರಥಕ್ಕೆ ಚಾಲನೆ ನೀಡಿದ ನ್ಯಾಯವಾದಿ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ ಅವರು ಮಾತನಾಡಿ, ಬುದ್ಧಿಜೀವಿಗಳ ಟೀಕೆಗೆ ಉತ್ತರಿಸಲು ಹಿಂದೂ ಸಮಾಜ ಒಂದಾಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಆವಶ್ಯಕ ಎಂದು ಹೇಳಿದರು.
ವಿಹಿಂಪ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ನಗರಾಧ್ಯಕ್ಷ ಸಂತೋಷ್ ಸುವರ್ಣ, ಬಜರಂಗ ದಳ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ಪ್ರಾಂತ ಕಾರ್ಯದರ್ಶಿ ಕೃಷ್ಣಮೂರ್ತಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಬಜರಂಗದಳ ಮಂಗಳೂರು ವಿಭಾಗ ಸಹಸಂಚಾಲಕ ಸುನಿಲ್ ಕೆ.ಆರ್. ಸ್ವಾಗತಿಸಿ ಮಾಧ್ಯಮ ಪ್ರಮುಖ್ ಭಾಗ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ರತ್ನಾಕರ ಅಮೀನ್ ವಂದಿಸಿದರು.
ಒಗ್ಗೂಡಿಸುವ ಪ್ರಯತ್ನ
ಸಮಾಜವನ್ನು ಜಾತಿ, ಧರ್ಮ, ಅಹಿಂದ ಮೊದಲಾದ ಹೆಸರಿನಲ್ಲಿ ವ್ಯವಸ್ಥಿತವಾಗಿ ವಿಚ್ಛಿದ್ರಗೊಳಿಸುವ, ಹಾಳು ಮಾಡುವ ಕೆಲಸಗಳು ನಡೆ ಯುತ್ತಿವೆ. ಹಿಂದೂ ಧರ್ಮವನ್ನು ಒಗ್ಗೂಡಿಸುವ, ಆಚರಣೆಯಲ್ಲಿರುವ ಲೋಪ, ದೌರ್ಬಲ್ಯಗಳನ್ನು ಪರಿ ಹರಿಸಿ ಹಿಂದೂ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ನಮ್ಮದು. ಜೀವನ ಪರ್ಯಂತ ನೆನಪಿನಲ್ಲಿ ಉಳಿ ಯುವ ಧರ್ಮಸಂಸದ್ ಇದಾಗ ಬೇಕು ಎಂದು ಪ್ರೊ| ಎಂ.ಬಿ. ಪುರಾಣಿಕ್ ಹೇಳಿದರು.
250 ಸ್ಥಳಗಳಲ್ಲಿ ಸಭೆ
ಸುಧರ್ಮ ರಥವು ಅ. 26ರಿಂದ 28ರ ವರೆಗೆ ಬೈಂದೂರು, 29ರಿಂದ ನ. 1ರ ವರೆಗೆ ಕುಂದಾಪುರ, ನ. 2 ಮತ್ತು 3ರಂದು ಬ್ರಹ್ಮಾವರ, 4ರಿಂದ 8ರ ವರೆಗೆ ಕಾರ್ಕಳ, 9 ಮತ್ತು 10ರಂದು ಕಾಪು, 11ರಿಂದ 13ರ ವರೆಗೆ ಉಡುಪಿ ಗ್ರಾಮಾಂತರ, 14ರಿಂದ 24ರ ವರೆಗೆ ಉಡುಪಿ ನಗರದಲ್ಲಿ ಸಂಚರಿಸಲಿದೆ. ಒಟ್ಟು 250 ಸ್ಥಳಗಳಲ್ಲಿ ಸಭೆ ನಡೆಯಲಿದೆ ಎಂದು ಪ್ರಸ್ತಾವನೆಗೈದ ಬಜರಂಗ ದಳ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.