ಹಣ ಕಳೆದುಕೊಂಡ ವೃದ್ಧೆ  ಗಿರಿಜಕ್ಕಗೆ ಸಿಕ್ಕಿತು ನ್ಯಾಯ


Team Udayavani, Oct 26, 2017, 10:53 AM IST

26-29.jpg

ಉಡುಪಿ: ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶ್ಯಾನುಭಾಗ್‌ ಅವರ ತಂಡದ ಹೋರಾಟದಿಂದ ಮಂಗಳೂರಿನಲ್ಲಿ ಅನ್ಯಾಯಕ್ಕೊಳಗಾದ 80 ವರ್ಷದ ವಯೋವೃದ್ಧೆ ಯೋರ್ವರಿಗೆ ಶೀಘ್ರ ನ್ಯಾಯ ಸಿಗಲಿದೆ.

ವೃದ್ಧೆ ಗಿರಿಜಕ್ಕ ಅವರಿಗೆ ಮಗನಂತೆ ನೋಡಿಕೊಂಡಿದ್ದ ವ್ಯಕ್ತಿ ರಾಮ ಪೂಜಾರಿ ಎಂಬಾತ ಮೋಸ ಮಾಡಿದ್ದು, 2 ಲಕ್ಷ ರೂ. ಪಡೆದು ಮೋಸ ಮಾಡಿದ್ದ. ಪ್ರಕರಣದಲ್ಲಿ ಮಂಗಳೂರಿನ ಜೆ.ಎಂ.ಎಫ್.ಸಿ ನ್ಯಾಯಲಯ ಆರೋಪಿ ರಾಮ ಪೂಜಾರಿಯ ಚರ ಸೊತ್ತು ವಶ ಸಹಿತ ಬಂಧಿಸುವಂತೆ ಪೊಲೀಸ್‌ ಅಧೀಕ್ಷಕರಿಗೆ ಆದೇಶಿಸಿದೆ. ವಶಕ್ಕೆ ಪಡೆವ ಸೊತ್ತನ್ನು ಮಾರಿ ಸಂತ್ರಸ್ತೆಗೆ 2,25,000 ರೂ. ಹಣವನ್ನು ಪಾವತಿಸಲು ಆದೇಶದಲ್ಲಿ ಸೂಚಿಸಲಾಗಿತ್ತು.

ಘಟನೆಯ ಹಿನ್ನೆಲೆ
ಗಿರಿಜಕ್ಕ ಬಳೆಗಾರ ಜನಾಂಗದವರು. ಅವರಿಗೆ ಮಕ್ಕಳಿಲ್ಲ. ಬೀದಿ ಸುತ್ತಿ, ಸಂತೆ-ಜಾತ್ರೆಗಳಿಗೆ ಹೋಗಿ ಬಳೆ ಮಾರಿ ಗಳಿಸಿದ 2 ಲ.ರೂ. ಹಣವನ್ನು ಮಂಗಳೂರಿನ ಕದ್ರಿ ಸಹಕಾರಿ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇರಿಸಿದ್ದರು. ಎಲ್ಲಿಂದಲೋ ಬಂದ ರಾಮ ಪೂಜಾರಿಯು ವೃದ್ಧೆಯನ್ನು ನಂಬಿಸಿ ನೀವು ನನ್ನ ತಾಯಿ ಇದ್ದಂತೆ. ಕೊನೆಗಾಲದಲ್ಲಿ ನಾನೇ ನೋಡಿಕೊಳ್ಳುತ್ತೇನೆ ಎಂದು ಆಶ್ವಾಸನೆ ನೀಡಿದ್ದು, ಆಕೆಯ ಆಜೀವ ಉಳಿತಾಯವನ್ನೆಲ್ಲ ಲಪಟಾಯಿಸಿದ್ದ. ಬಡ್ಡಿ ನೀಡುತ್ತೇನೆ, ನಿಮಗೆ ಬೇಕಾದಾಗ ಅಸಲನ್ನೂ ನೀಡುತ್ತೇನೆ ಎಂದು ಮಾತು ನೀಡಿ ಕೊನೆಗೆ ಹಣ ವಾಪಸು ಮಾಡಿರಲಿಲ್ಲ.

ನ್ಯಾಯಕ್ಕೆ ಮೊರೆ
2014ರಲ್ಲಿ ಮಂಗಳೂರಿನ ಸಿವಿಲ್‌ ನ್ಯಾಯಾಲಯದಲ್ಲಿ ಗಿರಿಜಕ್ಕ ದಾವೆ ಹೂಡಿದ್ದು, 2016ರಲ್ಲಿ ಇತ್ಯರ್ಥವಾಯಿತು. ಬಡ್ಡಿ ಸಹಿತ 2,20,000 ರೂ. ಹಣ ಪಾವತಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದರು. ಹಣ ಪಡೆಯಲು ಸುಮಾರು 10 ತಿಂಗಳ ಕಾಲ ಪರದಾಡಿದ ಗಿರಿಜಕ್ಕನಿಗೆ ಅನಾರೋಗ್ಯ ವಿಪರೀತವಾಗಿ ಕಾಡತೊಡಗಿತ್ತು. ಕೊನೆಗೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋದರು. ಪ್ರತಿಷ್ಠಾನವು ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು ನೀಡಿತ್ತು. ಮಂಗಳೂರಿನ ಉಪ ವಿಭಾಗಾಧಿಕಾರಿಯವರು ವೃದ್ಧೆಯ ಹಣ ತೆಗೆಸಿಕೊಡುವಂತೆ ಕೊಣಾಜೆ ಪೊಲೀಸ್‌ ಠಾಣೆಗೆ ಆದೇಶಿಸಿದ್ದರು. ಆನಂತರವೂ 6 ತಿಂಗಳು ಅವರಿಗೆ ನ್ಯಾಯ ಸಿಕ್ಕಿರಲಿಲ್ಲ.

ಆರೋಪಿ ಬಂಧನ, ಚರಾಸ್ತಿ ವಶ
ಗಿರಿಜಕ್ಕನ ಪ್ರಕರಣದಲ್ಲಿ ವಕೀಲ ಪ್ರಸಾದ ಭಂಡಾರಿ ಅವರು ಕಳೆದ ವಾರ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಿದ್ದು, ಆರೋಪಿ ರಾಮ ಪೂಜಾರಿಯ ಚರ ಸೊತ್ತುಗಳನ್ನು ಮುಟ್ಟುಗೋಲು ಹಾಕಿ ಗಿರಿಜಮ್ಮನ ಹಣ ಕೊಡಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಧೀಶರು ನೀಡಿದ ಆದೇಶದನ್ವಯ ಕೊಣಾಜೆ ಪೊಲೀಸರು ರಾಮ ಪೂಜಾರಿಯನ್ನು ಬಂಧಿಸಿದ್ದಾರೆ. ಹಾಗೂ ಆತನ ಹೆಸರಿನಲ್ಲಿರುವ ಮಾಕ್ಸಿಕ್ಯಾಬ್‌ ಅನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನ ಚರ ಸೊತ್ತನ್ನು ಮಾರಿ ಗಿರಿಜಕ್ಕನ ಹಣ ಪಾವತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಡಾ| ರವೀಂದ್ರ ನಾಥ ಶಾನುಭಾಗ್‌ ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.