ಪುತ್ತೂರು ಗ್ರಾಮಾಂತರ ಜಿಲ್ಲೆಯ ಬೇಡಿಕೆಗೆ ಇನ್ನಷ್ಟು ಬಲ
Team Udayavani, Oct 26, 2017, 3:52 PM IST
ಪುತ್ತೂರು: ಪುತ್ತೂರನ್ನು ಗ್ರಾಮಾಂತರ ಜಿಲ್ಲಾ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರಕಾರದ ಮುಂದೆ ಬೇಡಿಕೆ ಸಲ್ಲಿಸಿದ್ದು, ಕಡಬ ತಾಲೂಕು ಕೇಂದ್ರವಾಗಿ ಘೋಷಣೆ ಆಗಿರುವುದರಿಂದ ಬೇಡಿಕೆಗೆ ಮತ್ತಷ್ಟು ಬಲ ಬಂದಿದೆ.
ಬ್ರಿಟಿಷ್ ಕಾಲದ ಸೌತ್ ಕೆನರಾ ಜಿಲ್ಲೆಯಲ್ಲಿ ಪುತ್ತೂರು ತಾಲೂಕು ಕೇಂದ್ರವಾಗಿತ್ತು. ದಾಖಲೆಗಳ ಪ್ರಕಾರ 1927ರಲ್ಲಿ ಉಪ್ಪಿನಂಗಡಿ ತಾಲೂಕು ಕೇಂದ್ರವನ್ನು ಪುತ್ತೂರಿಗೆ ವರ್ಗಾಯಿಸಿದ್ದು, ಅಂದರೆ ತಾಲೂಕು ಕೇಂದ್ರವಾಗಿ 90 ವರ್ಷ ತುಂಬಿದೆ.
ಸ್ಮಾರ್ಟ್ ಸಿಟಿ, ಕಡಲ ತಡಿ ಮಂಗಳೂರಿನಿಂದ 56 ಕಿ.ಮೀ. ದೂರದಲ್ಲಿರುವ ಪುತ್ತೂರು ಸಾಹಿತ್ಯಿಕ, ಸಾಂಸ್ಕೃತಿಕ, ರಾಜಕೀಯ, ಕೃಷಿ, ಶಿಕ್ಷಣ, ಕ್ರೀಡೆ ಕ್ಷೇತ್ರದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ. ಹತ್ತು ವರ್ಷಗಳಲ್ಲಿ ಎಲ್ಲ ರಂಗಗಳಲ್ಲಿ ಪ್ರಗತಿ ಸಾಧಿಸಿದೆ. ಜಿಲ್ಲಾ ಕೇಂದ್ರವಾಗಬೇಕು ಎಂಬ ಮಹದಾಸೆಯನ್ನು ಮಡಿಲಲ್ಲಿ ಇಟ್ಟುಕೊಂಡ ಕಳೆದ ಹಲವು ಸರಕಾರಗಳ ಅವಧಿಯಲ್ಲಿ ಬೇಡಿಕೆ ಸಲ್ಲಿಸಲಾಗಿತ್ತು.
ಕೇಂದ್ರ ಸ್ಥಾನ
ಕೇರಳ ರಾಜ್ಯದ ಗಡಿ, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಕಡಬ, ವಿಟ್ಲ ಗಡಿ ಭಾಗಕ್ಕೆ ಅಂಟಿಕೊಂಡಿರುವ ಪುತ್ತೂರು ಮಾಣಿ-ಮೈಸೂರು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ರಾಜಧಾನಿಗೆ ಸಂಪರ್ಕ ಕಲ್ಪಿಸುತ್ತಿದೆ. ಮಂಗಳೂರು ಅನಂತರದ ಸ್ಥಾನದಲ್ಲಿರುವ ಪುತ್ತೂರು ಎಲ್ಲ ದೃಷ್ಟಿಯಲ್ಲೂ ಗ್ರಾಮಾಂತರ ಜಿಲ್ಲೆಯಾಗಲು ಅರ್ಹವಿದೆ.
ಹೈಟೆಕ್ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ವಿಭಾಗೀಯ ಕೇಂದ್ರ, ಮಿನಿ ವಿಧಾನಸೌಧ, ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿಕೆ ಮೊದಲಾದ ಪ್ರಗತಿ ಕಾರ್ಯ ಜಿಲ್ಲಾ ಕೇಂದ್ರದ ಕನಸಿಗೆ ಪೂರಕವೇ ಆಗಿದೆ. ನಗರದಿಂದ ಕೆಲವು ಕಿ.ಮೀ. ದೂರದಲ್ಲಿರುವ ಆನೆಮಜಲಿನಲ್ಲಿ ಸರಕಾರಿ ಮಹಿಳಾ ಕಾಲೇಜು ಮತ್ತು ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸ್ಥಳ ಕಾದಿರಿಸಲಾಗಿದೆ.
ಇದರೊಂದಿಗೆ ಸರಕಾರಿ ಮೆಡಿಕಲ್ ಕಾಲೇಜಿಗೆ 40 ಎಕರೆ ಸ್ಥಳ ಮೀಸಲಿರಿಸಲಾಗಿದೆ. ಬಲಾ°ಡಿನಲ್ಲಿ ಪೊಲೀಸ್ ತರಬೇತಿ ಕೇಂದ್ರ ಸ್ಥಾಪನೆಗೆ ಪ್ರಯತ್ನ ನಡೆದಿದೆ. ಜಿಲ್ಲೆಯ ಎರಡನೆ ಮಹಿಳಾ ಠಾಣೆ ಸ್ಥಾಪನೆಯಾಗಿದೆ.
ಜಿಲ್ಲೆಗಿರುವ ಅರ್ಹತೆ ಏನು?
ಈ ಹಿಂದೆ ರಚಿಸಲಾದ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಿಂತ ಅಧಿಕ ವಿಸ್ತೀರ್ಣ, ಜನಸಂಖ್ಯೆಯನ್ನು ಪುತ್ತೂರು ಹೊಂದಿದೆ ಎನ್ನುವುದು ಜಿಲ್ಲಾ ಕೇಂದ್ರದ ಬೇಡಿಕೆಗೆ ಇರುವ ಫ್ಲ ಸ್ ಪಾಯಿಂಟ್. ರಾಮನಗರ ಜಿಲ್ಲೆಯ ಒಟ್ಟು ವಿಸ್ತೀರ್ಣ 3,575.58 ಚದರ ಮೀ., ಜನಸಂಖ್ಯೆ 10.5 ಲಕ್ಷ ಇದೆ. ಚಿಕ್ಕಾಬಳ್ಳಾಪುರ ಜಿಲ್ಲೆಯಲ್ಲಿ 10 ಲಕ್ಷ ಜನಸಂಖ್ಯೆ ಮತ್ತು 4100 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. 2011ರ ಜನಗಣತಿ ಪ್ರಕಾರ ಪುತ್ತೂರು ಜಿಲ್ಲಾ ವ್ಯಾಪ್ತಿಗೆ ಸೇರುವ ನಾಲ್ಕು ತಾಲೂಕಿನ ಒಟ್ಟು ಜನಸಂಖ್ಯೆ 10.15 ಲಕ್ಷ ಇದೆ. 3,979 ಚದರ ವಿಸ್ತೀರ್ಣ ಹೊಂದಿದೆ. ಈ ಅಂಕಿ ಅಂಶವನ್ನು ಪರಿಗಣಿಸಿದರೆ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಸ್ತೀರ್ಣ ಮತ್ತು ಜನಸಂಖ್ಯೆಗಿಂತ ಪ್ರಸ್ತಾವಿತ ಪುತ್ತೂರು ಜಿಲ್ಲೆ ದೊಡ್ಡದಿದೆ.
ಕಡಬ ತಾಲೂಕು
ಪುತ್ತೂರು ತಾಲೂಕಿನೊಳಗಿದ್ದ ಕಡಬ ಪ್ರತ್ಯೇಕ ತಾಲೂಕು ಆಗಿ ಘೋಷಿತವಾದ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶದ ಜಿಲ್ಲಾ ಕೇಂದ್ರಕ್ಕೆ ಐದು ತಾಲೂಕು ಸೇರ್ಪಡೆಗೊಳಿಸಬಹುದು ಎಂಬ ಲೆಕ್ಕಾಚಾರವೂ ಇದೆ. ಹಾಗಾಗಿ ಕಡಬ ಹೊಸ ತಾಲೂಕು ಆದಂತೆ, ಪುತ್ತೂರು ಹೊಸ ಜಿಲ್ಲಾ ಕೇಂದ್ರ ಆಗಬೇಕು ಎನ್ನುವುದು ಜನಾಭಿಪ್ರಾಯ.
ಬೇಡಿಕೆ ಪಟ್ಟಿ
ಮಂಗಳೂರು ನಗರಕ್ಕೆ ಕಮಿಷನರೇಟ್ ಸ್ಥಾನ ಸಿಕ್ಕಿದ ಅನಂತರ ಎಸ್‌ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಬೇಕೆಂಬ ಕೂಗು ಕೇಳಿ ಬಂದಿತ್ತು. ವಿ.ಎಸ್.ಆಚಾರ್ಯ ಗೃಹಮಂತ್ರಿಯಾಗಿದ್ದ ಅವಧಿಯಲ್ಲಿ ಇದಕ್ಕೆ ಚಾಲನೆಯು ಸಿಕ್ಕಿತ್ತು. ಆದರೆ ಅದು ಈಡೇರಲಿಲ್ಲ. ಕಮಿಷನರೇಟ್ ವ್ಯಾಪ್ತಿಗೆ ಒಳಪಟ್ಟ ಮಂಗಳೂರಿನಲ್ಲಿ ಎಸ್‌ಪಿ ಕಚೇರಿಯ ಆವಶ್ಯಕತೆ ಇಲ್ಲ. ಬದಲಿಗೆ ಅದರ ಕಾರ್ಯವ್ಯಾಪ್ತಿ ಇರುವ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯದಲ್ಲಿ ಕಚೇರಿ ತೆರೆದರೆ ಅನುಕೂಲ ಎಂಬ ವಾದಕ್ಕೆ ಮನ್ನಣೆ ಸಿಕ್ಕಿಲ್ಲ.
ಬೇಡಿಕೆ ಇಡಲಾಗಿದೆ
ಪುತ್ತೂರು ಜಿಲ್ಲಾ ಕೇಂದ್ರವಾಗಬೇಕು ಎಂದು ಸರಕಾರದ ಮುಂದೆ ಈ ಹಿಂದೆಯೇ ಬೇಡಿಕೆ ಇಡಲಾಗಿದೆ. ಅದಕ್ಕೆ ಪೂರಕವಾಗಿ ಬೇಕಾದ ಮೂಲ ಸೌಕರ್ಯಗಳಿಗೆ ಜಾಗ ಮೀಸಲಿರಿಸುವ ಪ್ರಯತ್ನ ನಡೆಯುತ್ತಿದೆ. ಯಾವಾಗ ಆಗುತ್ತದೆ ಎಂದು ನಿರ್ದಿಷ್ಟವಾಗಿ ಹೇಳುವುದು ಅಸಾಧ್ಯ. ಆದರೆ ಕಮಿಷನರೇಟ್ ವ್ಯಾಪ್ತಿಯಿಂದ ನಾಲ್ಕು ತಾಲೂಕು ಪ್ರತ್ಯೇಕಗೊಂಡಿದೆ. ಬೆಂಗಳೂರಿನಲ್ಲಿಯೂ ಕಮಿಷನರೇಟ್ ವ್ಯಾಪ್ತಿ ಪ್ರತ್ಯೇಕ ಆದ ಅನಂತರ ಅಲ್ಲಿ ಗ್ರಾಮಾಂತರ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ.
–ಶಕುಂತಳಾ ಟಿ. ಶೆಟ್ಟಿ,
ಶಾಸಕರು
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.