ಸಾಲ ಮನ್ನಾ:ಒಂದೇ ಆಧಾರ್ ಸಂಖ್ಯೆಗೆ 100 ರೈತರ ಹೆಸರು ಲಿಂಕ್!
Team Udayavani, Oct 26, 2017, 4:05 PM IST
ಮುಂಬಯಿ:ಸಾಲ ಮನ್ನಾ ಅನುಷ್ಠಾನಕ್ಕೆ ಆನ್‌ಲೈನ್ ನೋಂದಣಿಯ ಮಹಾರಾಷ್ಟ್ರ ಸರಕಾರದ ಪ್ರಯತ್ನವು ಇದೀಗ ಸುಮಾರು 100 ರೈತರ ಹೆಸರನ್ನು ಒಂದೇ ಆಧಾರ್ ಸಂಖ್ಯೆಯೊಂದಿಗೆ ಜೋಡಿಸುವ ಮೂಲಕ ಇಡೀ ಆಡಳಿತವನ್ನೇ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ರಾಜ್ಯ ಸರಕಾರವು ತನ್ನ ಸಾಲ ಮನ್ನಾದ ಲಾಭ ಸೂಕ್ತ ವ್ಯಕ್ತಿಗೆ ತಲುಪುವಂತೆ ಮಾಡಲು ರೈತರ ಆಧಾರ್ ಸಂಖ್ಯೆಯೊಂದಿಗೆ ಆನ್‌ಲೈನ್ ನೋಂದಣಿಗೆ ಒತ್ತು ನೀಡಿತ್ತು. ಆದರೆ, ಈ ಆನ್‌ಲೈನ್ ನೋಂದಣಿಯಲ್ಲಿ 100ಕ್ಕಿಂತಲೂ ಹೆಚ್ಚಿನ ರೈತರ ಹೆಸರು ಒಂದೇ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದು ಕಂಡುಬಂದಿದೆ.
ಮಹಾರಾಷ್ಟ್ರ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ರೈತರ ಸಂಭಾವ್ಯ ಫಲಾನುಭವಿಗಳ ಪಟ್ಟಿಯೊಂದನ್ನು ತೋರಿಸಿದ್ದು, ಅದರಲ್ಲಿ ಎಲ್ಲರ ನೋಂದಣಿ ಒಂದೇ ಆಧಾರ್ ಸಂಖ್ಯೆಯೊಂದಿಗೆ ಆಗಿರುವುದು ಕಂಡುಬಂದಿದೆ. ಇದು ಸರಕಾರಕ್ಕೆ ಕಳವಳ ವನ್ನುಂಟುಮಾಡಿದೆ.
ಆಧಾರ್ ಸಂಖ್ಯೆ ನಕಲಿ ಫಲಾನುಭವಿಗಳನ್ನು ಪತ್ತೆ ಮಾಡುವಂತಹ ಒಂದು ಮುಖ್ಯ ಕೀಲಿ ಎಂದು ನಾವು ಯಾವಾಗಲೂ ಭಾವಿಸುತ್ತಿದ್ದೆವು. ಆದರೆ, ಈಗ ಇಷ್ಟೊಂದು ರೈತರ ಹೆಸರು ಒಂದೇ ಆಧಾರ್ ಸಂಖ್ಯೆಯಲ್ಲಿ ನೋಂದಣಿಯಾಗಿರುವುದನ್ನು ನೋಡುವಾಗ, ನಮಗೆ ಅದನ್ನು ಹೇಗೆ ಎದುರಿಸಬೇಕೆಂದು ಗೊತ್ತಾಗುತ್ತಿಲ್ಲ ಎಂದು ಅಧಿಕಾರಿ ನುಡಿದಿದ್ದಾರೆ.
ಒಂದೊಮ್ಮೆ ನಾವು ಇದರ ಹಸ್ತಚಾಲಿತ ಪರಿಶೀಲನೆ ನಡೆಸಿದರೆ, ಅದು ಇನ್ನಷ್ಟು ವಾರಗಳನ್ನು ತೆಗೆದುಕೊಳ್ಳಲಿದೆ. ಸಾಲ ಮನ್ನಾ ಯೋಜನೆಯ ಅನುಷ್ಠಾನದಲ್ಲಿ ವಿಳಂಬಕ್ಕಾಗಿ ರೈತ ಸಮುದಾಯವೂ ಈಗಾಗಲೇ ಆಕ್ರೋಶಗೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಏತನ್ಮಧ್ಯೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಸಮಸ್ಯೆಯನ್ನು ಬಗೆಹರಿಸಲು ಬುಧವಾರ ಬ್ಯಾಂಕ್ ಅಧಿಕಾರಿಗಳ ತುರ್ತು ಸಭೆಯೊಂದನ್ನು ಕರೆದು, ಸಾಲ ಮನ್ನಾ ಯೋಜನೆಯನ್ನು ವೇಗವಾಗಿ ಕಾರ್ಯ ಗತಗೊಳಿಸುವ ಸಂಬಂಧ ಚರ್ಚೆ ನಡೆಸಿದ್ದಾರೆ.
ಈ ಸಂದರ್ಭ ಕೆಲ ಬ್ಯಾಂಕ್ ಅಧಿಕಾರಿಗಳು,ಆನ್‌ಲೈನ್ ರಿಜಿಸ್ಟ್ರೇಶನ್ ಪೋರ್ಟಲ್(ಆಪ್ಲೆ ಸರ್ಕಾರ್)ನಿಂದ ಸಿಕ್ಕಿರುವ ದತ್ತಾಂಶವು ತಮ್ಮಲ್ಲಿರುವ ದಾಖಲೆಗಳಿಗಿಂತ ಭಿನ್ನವಾಗಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕೆಲವು ರೈತರ ಹೆಸರು ಕಾಣೆಯಾಗಿದೆ. ಅದೇ, ಇನ್ನೂ ಕೆಲವರ ಹೆಸರು ಭೂಮಿಯ ಗಾತ್ರ ಅಥವಾ ಸಾಲದ ಪ್ರಕಾರದೊಂದಿಗೆ ಹೊಂದಾಣಿಕೆ ಆಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರಕಾರವು ತನ್ನ 34,000 ಕೋ.ರೂ.ಗಳ ಕೃಷಿ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ಮೊದಲ ಹಂತವಾಗಿ ಕಳೆದ ವಾರ 4,000 ಕೋ.ರೂ. ಜಾರಿಗೊಳಿಸಿದೆ.ಕೇಂದ್ರ ಸರಕಾರವೂ ಈ ವರ್ಷ ಬೆಳೆ ವಿಮೆ ಯೋಜನೆಯ ಲಾಭ ನೀಡಲು ಆಧಾರ್ ಕಡ್ಡಾಯ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.