ಕುರುಂಜಿಬಾಗ್ ರಸ್ತೆಯಲ್ಲಿ ಕಿತ್ತುಹೋದ ‘ಇಂಟರ್ ಲಾಕ್’
Team Udayavani, Oct 26, 2017, 4:12 PM IST
ಸುಳ್ಯ: ಶಿಕ್ಷಣ ಸಂಸ್ಥೆಗಳಿಗೆ, ತಾಲೂಕು ಕಚೇರಿ, ನ್ಯಾಯಾಲಯ ಅಲ್ಲದೆ ವೈದ್ಯಕೀಯ ಚಿಕಿತ್ಸೆಗೆಂದು ನಿತ್ಯ ಸಾವಿರಾರು ಮಂದಿ ಓಡಾಡುವ ಕುರುಂಜಿಬಾಗ್‌ನ ವೃತ್ತದಲ್ಲಿ ಅಳವಡಿಸಿದ್ದ ಇಂಟರ್‌ಲಾಕ್ ಕಿತ್ತುಹೋಗಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಪ್ರತಿ ನಿತ್ಯ ವಾಹನಗಳು ಹರಸಾಹಸಪಡುತ್ತ ಸಂಚರಿಸಿದರೆ, ಪಾದಚಾರಿಗಳು ಕಿತ್ತುಹೋದ ಇಂಟರ್ ಲಾಕ್‌ನ ಕಲ್ಲುಗಳನ್ನು ಎಡವಿಕೊಂಡು ತೆರಳಬೇಕಾಗಿದ್ದು, ನಗರಾಡಳಿತಕ್ಕೆ ಹಿಡಿಶಾಪ ಹಾಕಿಕೊಂಡೇ ಮುಂದುವರಿಯುತ್ತಾರೆ.
ಕುರುಂಜಿಬಾಗ್‌ನ ಜಂಕ್ಷನ್ ನಗರದ ಪ್ರಮುಖ ವೃತ್ತಗಳಲ್ಲೊಂದು. ದಿ| ಕುರುಂಜಿ ವೆಂಕಟ್ರಮಣ ಗೌಡರ ಪುತ್ಥಳಿಯನ್ನು ಇಲ್ಲಿ ಅಳವಡಿಸಲಾಗಿದೆ. ಹಿಂದಿನ ನ.ಪಂ. ಆಡಳಿತದಲ್ಲಿ ಈ ಭಾಗದ ಸದಸ್ಯರಾಗಿದ್ದ ಎನ್.ಎ. ರಾಮಚಂದ್ರ ಅವರ ಪ್ರಯತ್ನದಿಂದ ಇಂಟರ್ ಲಾಕ್ ಅಳವಡಿಸಲಾಗಿತ್ತು. ಇದೀಗ ಇಂಟರ್‌ಲಾಕ್ ಕಿತ್ತುಹೋಗಿ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಅಡಚಣೆಯಾಗುತ್ತಿದೆ.
ಈ ವೃತ್ತ ನ.ಪಂ.ನ ಕುರುಂಜಿಬಾಗ್ ವಾರ್ಡ್‌ಗೆ ಒಳಪಟ್ಟಿದ್ದರೂ, ಇದೇ ಮಾರ್ಗವಾಗಿ ನ.ಪಂ.ನ ಇತರ ವಾರ್ಡ್‌ನ ಸದಸ್ಯರು ಸಂಚರಿಸಬೇಕಾಗಿದೆ. ಆದರೆ ಪ್ರಮುಖವಾಗಿ ಶಿಕ್ಷಣ ಸಂಸ್ಥೆ, ಹಲವಾರು ಸರಕಾರಿ ಕಚೇರಿಗಳ ಸಹಿತ ಆಡಳಿತ ಕೇಂದ್ರವಾಗಿರುವ ಈ ಜನಸಂಚಾರದ ವೃತ್ತಕ್ಕೆ ನ.ಪಂ. ಸದಸ್ಯರು ಸ್ವಲ್ಪಮಟ್ಟಿನ ಗಮನ ಹರಿಸುತ್ತಿದ್ದರೆ ಈ ಸಂಚಾರ ಅವ್ಯವಸ್ಥೆಯನ್ನು ಗೆಹರಿಸಬಹುದಾಗಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕಚೇರಿ, ಸಂಸ್ಥೆಗಳು
ಒಂದೆಡೆ ಕೆವಿಜಿ ಕ್ಯಾಂಪಸ್‌ನ ಮೆಡಿಕಲ್ ಕಾಲೇಜು, ಡೆಂಟಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್, ನರ್ಸಿಂಗ್ ಕಾಲೇಜಿಗೆ ಸಂಪರ್ಕ ಕಲ್ಪಿಸುತ್ತದೆ. ಮತ್ತೂಂದೆಡೆ ಜೆಎಂಎಫ್‌ಸಿ ನ್ಯಾಯಾಲಯ, ಶಿಕ್ಷಣ ಕಚೇರಿ, ಅಲ್ಲದೆ ಇನ್ನೆರಡು ರಸ್ತೆಗಳು ತಾಲೂಕು ಕಚೇರಿ, ಮೆಸ್ಕಾಂ, ಕೃಷಿ ಇಲಾಖೆ, ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ, ಗ್ರಂಥಾಲಯ, ಕಂದಾಯ ನಿರೀಕ್ಷಕರ ಕಚೇರಿ, ತಾಲೂಕು ಚಾಯತ್‌ಗಳನ್ನು ಸಂಪರ್ಕಿಸುತ್ತದೆ.
ಇದೇ ರಸ್ತೆಯಲ್ಲಿ ಸಂಚರಿಸಿದರೆ ಇಲ್ಲಿಯ ಭಸ್ಮಡ್ಕ, ಕುರುಂಜಿಗುಡ್ಡೆ ಮೊದಲಾದ ಪ್ರದೇಶಗಳಿಗೆ ಸಂಪರ್ಕವಿದೆ. ಇಲ್ಲಿ ಸಾವಿರಾರು ಮನೆಗಳಿವೆ. ಅಲ್ಲದೆ ತುರ್ತು ಚಿಕಿತ್ಸೆಗೆಂದು ಇಲ್ಲಿನ ವೈದ್ಯಕೀಯ ಕಾಲೇಜಿಗೆ ರೋಗಿಗಳನ್ನು ಕರೆತರುವ ಸಂದರ್ಭದಲ್ಲೂ ಸಮಸ್ಯೆಯುಂಟಾಗುತ್ತಿದೆ.
ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ ಸಾಧಾರಣ ಸಾಮರ್ಥ್ಯದ ಇಂಟರ್ ಲಾಕ್ ಅಳವಡಿಸಿದರೆ ಅದು ವ್ಯರ್ಥವಾಗಬಹುದು. ಆದ್ದರಿಂದ ಇಲ್ಲಿಗೆ ಶಾಶ್ವತ ವ್ಯವಸ್ಥೆಗಾಗಿ ಕಾಂಕ್ರೀಟ್ ಕಾಮಗಾರಿ ನಡೆಸುವುದೇ ಸೂಕ್ತವೆನಿಸಿದ್ದು, ಶೀಘ್ರ ಈ ಸಮಸ್ಯೆಯನ್ನು ಪರಿಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಶಾಶ್ವತ ವ್ಯವಸ್ಥೆ ಅಗತ್ಯ
ಶಾಶ್ವತ ವ್ಯವಸ್ಥೆಗಾಗಿ ಕಾಂಕ್ರೀಟ್ ಕಾಮಗಾರಿ ಸೂಕ್ತವಾಗಿದ್ದು, ಅಂದಾಜು ರೂ. 10 ಲಕ್ಷಕ್ಕೂ ಅಧಿಕ ಮೊತ್ತದ ಅಗತ್ಯವಿದೆ. ಆದರೆ ಇಷ್ಟೊಂದು ಮೊತ್ತ ನಗರ ಪಂಚಾಯತ್‌ನಲ್ಲಿ ಇಲ್ಲದ ಕಾರಣ ಅಸಾಧ್ಯವಾಗಿದೆ. ಕೆವಿಜಿ ಎಂಜಿನಿಯರಿಂಗ್ ಕಾಲೇಜಿನವರು ಅಂದಾಜುಪಟ್ಟಿ ತಯಾರಿಸಿ ಮನವಿ ಮಾಡಿದ್ದರು. ನಾನೂ ನ.ಪಂ.ಗೆ ಹಲವಾರು ಬಾರಿ ಮನವಿ ಮಾಡಿದ್ದೆ.
– ಕಿರಣ್ ಕುರುಂಜಿ,
ನ. ಪಂ. ವಾರ್ಡ್ ಸದಸ್ಯ
ಕಿತ್ತುಹೋದ ಇಂಟರ್‌ಲಾಕ್
ಇಲ್ಲಿನ ರಸ್ತೆಗೆ ಹಾಕಿರುವ ಇಂಟರ್‌ಲಾಕ್ ಕಿತ್ತುಹೋಗಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಹಿತ ಪಾದಚಾರಿಗಳಿಗೆ ತೊಡಕಾಗುತ್ತಿದೆ. ಇದರಿಂದಾಗಿ ಇಲ್ಲಿ ವಾಹನ ಅಪಘಾತಗಳು ಸಂಭವಿಸಿವೆ. ಇಲ್ಲಿಯ ಸಮಸ್ಯೆಯ ಬಗ್ಗೆ ನಗರ ಪಂಚಾಯತ್‌ಗೆ ನಾವು ತಿಳಿಸಿದ್ದರೂ ಭರವಸೆ ಮಾತ್ರ ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.
– ರಾಧಾಕೃಷ್ಣ,
ಬಿಎಂಎಸ್ ಆಟೋರಿಕ್ಷಾ ಯೂನಿಯನ್
ತಾಲೂಕಾಧ್ಯಕ
ಭರತ್ ಕನ್ನಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.