ಗದೆಯಲ್ಲಿ ನಾಟಿಯಿಂದ ಕಟಾವಿನವರೆಗೆ ಮಕ್ಕಳದ್ದೇ ಕೆಲಸ!
Team Udayavani, Oct 26, 2017, 4:30 PM IST
ಕಲ್ಲಡ್ಕ: ಶಿಕ್ಷಣದೊಂದಿಗೆ ಕೃಷಿಪಾಠ. ತಾವೇ ದುಡಿದು ತಿನ್ನುವುದಕ್ಕೆ ಎಳವೆಯಿಂದಲೇ ಪ್ರೇರಣೆ. ಆ ಮೂಲಕ ವ್ಯವಸಾಯದಿಂದ ವಿಮುಖರಾಗುತ್ತಿರುವ ಯುವ ಜನಾಂಗಕ್ಕೆ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಿಸುವ ಕೈಂಕರ್ಯ. ಇದು ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಸುಮಾರು 8 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕೃಷಿ ಪಾಠದ ವೈಶಿಷ್ಟ್ಯ !
ಶಾಲೆಯ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳು ತಮ್ಮ ಕೃಷಿ ಸಂಘದ ಮೂಲಕ ಸುಮಾರು ಎಂಟು ವರ್ಷಗಳಿಂದ ಭತ್ತ ನಾಟಿ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲೆಗೆ ಸೇರಿದ ಸುಮಾರು ಎರಡು ಎಕರೆ ಭೂಮಿಯೇ ಇವರ ಕೃಷಿಭೂಮಿ. ಅಲ್ಲದೆ ಶಾಲೆಯ ಮಧ್ಯಾಹ್ನದ ಊಟಕ್ಕೆ ಕೂಡ ಮಕ್ಕಳು ನೆರವಾಗುತ್ತಿದ್ದಾರೆ.
ಪ್ರಸ್ತುತ ವರ್ಷ ಮಕ್ಕಳೇ ನೇಜಿ ನಾಟಿ ಮಾಡಿದ ಭತ್ತ ಕೊಯ್ಲಿಗೆ ಬಂದಿದ್ದು, ಅ. 21ರಂದು ವಿದ್ಯಾಕೇಂದ್ರದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ ಅವರು ಕೊಯ್ಲು ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಮುಂದೆ ಕಟಾವು, ಭತ್ತ ವಿಭಜಿಸುವ ಕೆಲಸವನ್ನು ಮಕ್ಕಳೇ ಮಾಡಲಿದ್ದಾರೆ. ಶಾಲಾಭಿವೃದ್ಧಿ ಸಮಿತಿ, ಮಾತೃ ಭಾರತಿ ಸಂಘಟನೆಯ ತಾಯಂದಿರು, ಶಿಕ್ಷಕರು ಮಕ್ಕಳಿಗೆ ಸಹಕರಿಸಲಿದ್ದಾರೆ.
ವಿಶೇಷವೆಂದರೆ ಯಾವುದೇ ರಾಸಾಯನಿಕ ಬಳಸದೆ ಸಂಪೂರ್ಣ ಸಾವಯವ ಪದ್ಧತಿ ಮುಖಾಂತರ ಮಕ್ಕಳು ನಾಟಿ
ಕಾರ್ಯ ಮಾಡಿದ್ದರು. ಅಲ್ಲದೆ, ಕಟಾವು ಮಾಡಿದ ಭತ್ತವನ್ನು ಶಾಲೆಯಲ್ಲಿ ಮಧ್ಯಾಹ್ನದ ಊಟಕ್ಕಾಗಿಯೂ ಬಳಸುತ್ತಾರೆ.
ಈ ಗದ್ದೆಯಲ್ಲಿ ಕೃಷಿ ಚಟುವಟಿಕೆಯ ಕುರಿತು ಪ್ರತಿ ವರ್ಷ ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಗುತ್ತದೆ. ಅಲ್ಲದೇ
ಮಳೆಗಾಲದ ಆರಂಭದಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆಯುವ ಸಂದರ್ಭದಲ್ಲಿ ಮಕ್ಕಳಿಗಾಗಿ ಕೆಸರುಗದ್ದೆ ಓಟ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗುತ್ತದೆ ಎಂದು ಶಿಕ್ಷಕರು ಹೇಳುತ್ತಾರೆ.
ಶಾಲೆಯ ಮಧ್ಯಾಹ್ನದ ಊಟಕ್ಕೆ ಬಳಕೆ
ಮಕ್ಕಳೇ ನಾಟಿ ಮಾಡಿ, ಕಟಾವು ಮಾಡಿದ ಭತ್ತವನ್ನು ಶಾಲೆಯ ಮಧ್ಯಾಹ್ನದ ಊಟಕ್ಕೆ ಉಪಯೋಗಿಸಿದಂದು ಎಲ್ಲ ಮಕ್ಕಳ ಎದುರಿನಲ್ಲಿ ಅದನ್ನು ತಿಳಿಸುವ ಕೆಲಸವನ್ನು ಶಾಲಾ ಆಡಳಿತ ಮಂಡಳಿ ಮಾಡುತ್ತಿದೆ. ಶಾಲೆಯಲ್ಲೇ ಮಕ್ಕಳೇ ಬೆಳೆದ ಭತ್ತದಿಂದ ತಯಾರಿಸಿದ ಅನ್ನವನ್ನು ಮಕ್ಕಳು ಖುಷಿಯಿಂದಲೇ ಊಟ ಮಾಡುತ್ತಾರೆ. ಅಲ್ಲದೆ ಅದು ಕೃಷಿ ಕಡೆಗೆ ಅವರು ಆಸಕ್ತಿ ಬೆಳೆಸಿಕೊಳ್ಳಲು ಪ್ರೇರಣೆ ನೀಡಿದಂತೆಯೂ ಆಗುತ್ತದೆ.
–ರವಿರಾಜ್ ಕನಂತೂರು, ಮುಖ್ಯ ಶಿಕ್ಷಕ, ಶ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕ
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
Covid Scam: ನ್ಯಾ.ಕುನ್ಹಾ ವರದಿಯಲ್ಲಿ ಕೋವಿಡ್ ಅವ್ಯವಹಾರ ಉಲ್ಲೇಖ: ದಿನೇಶ್ ಗುಂಡೂರಾವ್
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್.ರಾಜಣ್ಣ
MUST WATCH
ಹೊಸ ಸೇರ್ಪಡೆ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.