ವಿಜಯಾ ಬ್ಯಾಂಕ್ 2ನೇ ತ್ತೈಮಾಸಿಕದಲ್ಲಿ 185 ಕೋಟಿ ರೂಪಾಯಿ ನಿವ್ವಳ ಲಾಭ
Team Udayavani, Oct 27, 2017, 7:20 AM IST
ಬೆಂಗಳೂರು: ವಿಜಯಾ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ತೈಮಾಸಿಕ ಅವಧಿಯಲ್ಲಿ 185.46 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.20ರಷ್ಟು ಹೆಚ್ಚಳ ಕಂಡಿದೆ.
ನಗರದ ಎಂ.ಜಿ.ರಸ್ತೆಯಲ್ಲಿರುವ ವಿಜಯಾ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕರೂ ಆದ ಸಿಇಒ ಆರ್.ಎ.ಶಂಕರನಾರಾಯಣ, “ಬ್ಯಾಂಕ್ ನಿರಂತರವಾಗಿ ಲಾಭದ ವ್ಯವಹಾರವನ್ನು ಮುಂದುವರಿಸಿದ್ದು,2017-18ನೇ ಸಾಲಿನ ಎರಡನೇ ತ್ತೈಮಾಸಿಕದಲ್ಲಿ 185 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಜತೆಗೆ ಚಾಲ್ತಿ ಖಾತೆ- ಉಳಿತಾಯ ಖಾತೆ ಠೇವಣಿ ಮೊತ್ತವು ಶೇ.22.65ರಿಂದ ಶೇ.27.03ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.
ನಿರ್ವಹಣಾ ಲಾಭವು ಶೇ.28.57ರಷ್ಟು ಏರಿಕೆ ಕಂಡಿದ್ದು, 733.96 ಕೋಟಿ ರೂ.ಗಳಿಸಿದೆ. ಒಟ್ಟು ಅನುತ್ಪಾದಕ ಸಾಲ ಮೊತ್ತವು ಶೇ.7.07ರಿಂದ ಶೇ.7.06ರಷ್ಟಕ್ಕೆ ಇಳಿಕೆಯಾಗಿದ್ದರೂ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ. ಆದರೆ ನಿವ್ವಳ ಅನುತ್ಪಾದಕ ಸಾಲ ಮೊತ್ತವು ಶೇ.5.10ರಿಂದ ಶೇ.4.86ಕ್ಕೆ ಇಳಿಕೆ ಕಂಡಿದೆ ಎಂದರು.
ಸಗಟು ವ್ಯವಹಾರ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆದ್ಯತೆ ಮೇರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ವೇತನದಾರರು, ಪಿಂಚಣಿ ದಾರರು, ಇತರೆ ಸಣ್ಣ ಪುಟ್ಟ ಖಾತೆದಾರರು ಮನವಿ ಸಲ್ಲಿಸಿದರೆ ಶೂನ್ಯ ಠೇವಣಿ ಖಾತೆ ನಿರ್ವಹಣೆಗೆ ಅವಕಾಶ ನೀಡಲಾಗುವುದು. ಜನಧನ್ ಯೋಜನೆಯಡಿ ಬ್ಯಾಂಕ್ನಲ್ಲಿ 20 ಲಕ್ಷಕ್ಕೂ ಹೆಚ್ಚು ಖಾತೆಗಳಿದ್ದು, ಸುಮಾರು 200 ಕೋಟಿ ರೂ. ಠೇವಣಿಯಿದೆ ಎಂದು ಹೇಳಿದರು. ವಿಜಯಾ ಬ್ಯಾಂಕ್ನ ಕಾರ್ಯಕಾರಿ ನಿರ್ದೇಶಕರಾದ ಬಿ.ಎಸ್ ರಾಮರಾವ್, ವೈ.ನಾಗೇಶ್ವರ ರಾವ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್ಖಾನ್ಗೆ ಲೋಕಾಯುಕ್ತದಿಂದ ನೋಟಿಸ್
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.